*ಕೃಷ್ಣ ಜನ್ಮಾಷ್ಟಮಿ* (ಭಕ್ತಿ ಗೀತೆ)

Submitted by Shreerama Diwana on Tue, 08/11/2020 - 08:34
ಬರಹ

ಮುರಳಿ ಮಹಿಮೆಯ ಕೇಳಿ ಧರೆಯಲಿ

ನೆರದಿಹ ಮನುಜರು ಅರಿತಿಹರು|

ವರವ ಬೇಡುತ ಮಾಧವ ನಲ್ಲಿಯೆ

ಶಿರವನು ಬಾಗುತ ನಿಂತಿಹರು||

 

ಗೋಕುಲದಲ್ಲಿ ಜನುಮತಾಳಿದ

ಲೀಲೆಯ ಬಣ್ಣಿಸಿ ಜಗದಲ್ಲಿ|

ವ್ಯಾಕುಲವನ್ನು ದೂರಮಾಡಿದ

ಮಹಿಮೆಯ ವೇಣುವ ನಾದದಲಿ||

 

ಹಂಸಕೊಳದಲಿ ನಲಿದ ಹಾಗೆಯೆ

ಭವದಲಿ ಮುಳುಗದ ಅಚ್ಯುತನು|

ಕಂಸರಾಜನ ಕೊಲ್ಲಲು ಬಂದ

ದೇವಕಿಯಷ್ಟಮ ಕಂದನನು||

 

ಸರ್ಪದ ರೋಷವ ಮೆಟ್ಟಿ ನಿಂತಿಹ

ಶೇಷನು ಮುಕುಂದ ಶಕುತಿಯಲಿ|

ದರ್ಪವಡಗಿಸಿ ವಾಮನನಾಗಿ

ಬಲಿಯನು ಭುವಿಯೊಳು ಯುಕ್ತಿಯಲಿ||

 

ಗೋವು ಕಾಯುತ ಕೊಳಲ ನುಡಿಸುತ

ನಿಂತನು ಕಾನನ ಸಿರಿಯಲ್ಲಿ|

ಸಾವು ಬರದದು ಮುರುಳಿ ಮಹಿಮೆಯ

ಪಾಡುತ ನಿಲ್ಲಲು ಧರೆಯಲ್ಲಿ||

 

*ಶಂಕರಾನಂದ_ಹೆಬ್ಬಾಳ*

 

ಚಿತ್ರ್