ಕೆಂಪಕ್ಕಿಯ ಲಾಡು

ಕೆಂಪಕ್ಕಿಯ ಲಾಡು

ಬೇಕಿರುವ ಸಾಮಗ್ರಿ

ಕೆಂಪಕ್ಕಿ ೧ ಕಪ್, ಬೆಲ್ಲ ೧/೨ ಕಪ್, ತೆಂಗಿನ ಕಾಯಿ ತುರಿ ೪ ಚಮಚ, ಏಲಕ್ಕಿ ಹುಡಿ

ತಯಾರಿಸುವ ವಿಧಾನ

ಅಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದು ನಂತರ ತಣಿದ (ಬಿಸಿಯಾರಿದ) ಬಳಿಕ ಅದನ್ನು ಮಿಕ್ಸಿಗೆ ಹಾಕಿ ಹುಡಿ ಮಾಡಬೇಕು. ಬೆಲ್ಲವನ್ನು ಬಾಣಲೆಗೆ ಹಾಕಿ, ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ಕುದಿಸಬೇಕು. ಆ ಮಿಶ್ರಣ ಪಾಕಕ್ಕೆ ಬಂದ ಬಳಿಕ ತೆಂಗಿನ ಕಾಯಿ ತುರಿಯನ್ನು ಹಾಕಿ ಸ್ವಲ್ಪ ಮಗುಚ ಬೇಕು. ನಂತರ ಮೊದಲು ಹುರಿದಿಟ್ಟ ಕೆಂಪಕ್ಕಿಯ ಹುಡಿಯನ್ನು ಬೆಲ್ಲದ ಪಾಕದ ಮಿಶ್ರಣಕ್ಕೆ ಸೇರಿಸಿ, ಅದಕ್ಕೆ ಏಲಕ್ಕಿ ಹುಡಿಯನ್ನು ಹಾಕಬೇಕು. ಮಿಶ್ರಣವನ್ನು ಸರಿಯಾಗಿ ಬೆರೆಸಿಕೊಂಡು ಸಣ್ಣ ಸಣ್ಣ ಉಂಡೆಯಾಕೃತಿಯಲ್ಲಿ ಕಟ್ಟಬೇಕು. ಬಿಸಿಯಾದ ಉಂಡೆಗಳನ್ನು ತಣಿಯಲು ಬಿಟ್ಟು, ಆರಿದ ಬಳಿಕ ಗಾಳಿಯಾಡದ ಡಬ್ಬದಲ್ಲಿ ತುಂಬಿಸಿ ಇಡಬೇಕು.