ಕೆಂಬೂತ (ಕುಸುಮಷಟ್ಪದಿ)

ಕೆಂಬೂತ (ಕುಸುಮಷಟ್ಪದಿ)

ಕವನ

ಪಕ್ಷಿಗಳ ಗುಂಪಿನಲಿ

ತಕ್ಷಶಿಲೆ ಪೊದೆಗಳಲಿ

ವೃಕ್ಷಗಳ ರೆಂಬೆಯಲಿ ಕೆಂಬೂತವು

ಭಕ್ಷಿಸುತ ಕೀಟಗಳ

ದಕ್ಷತೆಯ ಮೆರೆಯುತಲಿ

ನಕ್ಷೆಯಲಿ ಬಿಂಬಿಸಿದೆ ಸಂಜಾತವು||

 

ಕುಪ್ಪಳಕ್ಕಿಯ ಸೊಬಗು

ಕಪ್ಪನೆಯ ಬಣ್ಣದೊಳು

ಗಪ್ಪೆಂದು ಸೆರೆಯಲ್ಲಿ ಸಿಲುಕುತಿತ್ತು

ಒಪ್ಪದಲಿ ಮೇಳೈಸಿ

ಬೊಪ್ಪನಲಿ ಹೇಳುತ್ತ

ಸುಪ್ಪತ್ತಿಗೆಯ ಸೊಗಸ ತೋರುತಿತ್ತು||

 

ರೆಕ್ಕೆಯಲಿ ಹೊಳೆಯುತಿದೆ

ಪಕ್ಕನೆಯ ತಾಮ್ರವದು

ನಕ್ಕುತ್ತ ನಲಿಯುತಿಹ ಏಕಾಂಗಿಯು

ಅಕ್ಕರೆಯ ಕರೆಯಲ್ಲಿ

ಕಕ್ಕುಲತೆ ಹುಡುಕುತಿಹ

ಜಕ್ಕಲಿಯ ಹಕ್ಕಿಯಿದು ಸಂಕೋಚವು||

 

ಶುಭಶಕುನ ಸೂಚಕವು

ಜಬರಿನಲಿ ಮೆರೆದಿಹುದು

ನಭದಲ್ಲಿ ಹಾರುವುದು ರೆಕ್ಕೆಬಿಚ್ಚಿ

ಅಭಿನಯದ ಕಲೆಯಲ್ಲಿ

ಕಬಲಿಸುತ ಹುಡುಕುತಲಿ

ಚಬುಕುವಿನ ಪಕ್ಷಿಯಿದು ಹಾರುತಿಹುದು||

 

ಹತ್ತುತ್ತ ನೋಡುವುದು

ಗತ್ತಲ್ಲಿ ನಡೆಯುತ್ತ

ಸುತ್ತೆಲ್ಲ ವಾಸಿಸುವ ಬಣ್ಣಪಕ್ಷಿ

ಅಲ್ಲಲ್ಲಿ ಕಾಣಿಸಿದೆ

ಪಲ್ಲವಿಯ ರಾಗದಲಿ

ಗಲ್ಲಿಗಲ್ಲಿಯ ನಡುವೆ ಚೆಂದಭಕ್ಷಿ||

 

ನೋಡಲದು ವಾಯಸವು

ಮಾಡುವುದು ಶಬ್ಧವನು

ಹಾಡದೇ ಕೋಗಿಲೆ ಸ್ವರರಾಗವ

ಬಾಡಿರದ ಚುರುಕುತನ

ಕೇಡಿರದ ಬುದ್ಧಿಯದು

ಕೂಡುತಲಿ ಶಂಖನಾದದಿ ಕೂಗಿದೆ||

 

-ಅಭಿಜ್ಞಾ ಪಿ ಎಮ್ ಗೌಡ 

 

ಚಿತ್ರ್