ಕೆಟ್ಟುಹೋದ`ಸೀಡಿ'ಯನ್ನು ಜೀವಂತಗೊಳಿಸಿ

ಕೆಟ್ಟುಹೋದ`ಸೀಡಿ'ಯನ್ನು ಜೀವಂತಗೊಳಿಸಿ

ಬರಹ

`ಸೀಡಿ'ಯ ಬರೆಯುವ ಮುಖವನ್ನು ಗುರುತಿಸಲು ಆದ ಗೊಂದಲ ಕಾರಣವಾಗಿ, ಗುರುತಿನ ಬರಹವನ್ನು ಬರೆಯುವ (ತಪ್ಪು) ಮುಖದ ಮೇಲೆ ಮಾರ್ಕರ್‍ನಿಂದ ಬರೆದು `ಸೀಡಿ'ಯನ್ನು ನನ್ನ ಕೈಹಾರ ಕೆಡೆಸಿದೆ. ಅದನ್ನು ಎಸೆಯುಲು ಮನಸ್ಸು ಬರದೆ ಸರಿಮಾಡಲು ಪರಿಹಾರ ಇದೆಯೇ ಎಂದು ವೆಬ್‍ನಲ್ಲಿ ಹುಡುಕಿದಾಗ ಇಲ್ಲಿ http://www.hardwaresecrets.com/article/77 ಸಿಕ್ಕಿತು.
(ಕೆಲವು ತಯಾರಕರು `ಸೀಡಿ'ಗಳ ಮೇಲೆ ಮುಖಪಟ್ಟಿಯನ್ನು ಮುದ್ರಿಸಿರುವುದಿಲ್ಲ ; ಆದ್ದರಿಂದ ಅಂಥಹ `ಸೀಡಿ'ಗಳ ಬರೆಯುವ ಮುಖವನ್ನು ಗುರುತಿಸಲು ಸ್ವಲ್ಪ ಚಡಪಡಿಸಬೇಕಾಗುತ್ತದೆ. ಒಳ ಉಂಗುರದಲ್ಲಿ 'ಸೀಡಿ'ಯ ಅಂಕಿತದ ಸಂಖ್ಯೆ ಓದಲು ಆಗುವುದಾದರೆ ಅದು ಮುಖಪಟ್ಟಿಯನ್ನು ಮುದ್ರಿಸುವ ಮುಖ - ಅಂದರೆ ಬರೆಯುವ ಮುಖವಲ್ಲ. ಬರೆಯುವ ಮುಖವನ್ನು ಬೆಳಕಿಗೆ ಹಿಡಿದರೆ ಕಾಮನ ಬಿಲ್ಲಿನಂತೆ ಬಣ್ಣ ಪ್ರತಿಫಲಿಸ ಬೇಕು.)
ನೀವು ಯಾವಾಗಲಾದರೂ ಕೆಟ್ಟುಹೋಗಿದ್ದ `ಸೀಡಿ'ಯನ್ನು ಜೀವಂತಗೊಳಿಸಲು ಪ್ರಯತ್ನಿಸಿದ್ದೀರಾ? ಅಂಥವುಗಳನ್ನು ನಾಶಮಾಡುವ ಮೊದಲು ಈ ಪರಿಹಾರವನ್ನು ಪ್ರಯತ್ನಿಸಿ.
ಬೆರಳಿಗೆ ಸ್ವಲ್ಪ ಟೂಥ್ ಪೇಸ್ಟ್ ಹಾಕಿಕೊಂಡು ಸ್ವಲ್ಪ ಒದ್ದೆ ಮಾಡಿಕೊಂಡು `ಸೀಡಿ' ಯ ಬರೆಯುವ ಮುಖವನ್ನು ಹಲ್ಲು ಎಂದು ಪರಿಗಣಿಸಿ ಬೆರಳಿನಿಂದಲೇ ಮೃದುವಾಗಿ ಉಜ್ಜಿ `ಸೀಡಿ' ಯನ್ನು ನೀರಿನಿಂದ ತೊಳೆಯಿರಿ. ಅದನ್ನು ಒಣಗಿಸಿ, ಕಂಪ್ಯೂಟರ್‍ಗೆ ಹಾಕಿ ನೋಡಿ. ಬಹುಶಃ ಏನೂ ಆಗಿರಲಿಲ್ಲವೆಂಬಂತೆ ಕೆಲಸ ಮಾಡುತ್ತದೆ. ಹೆಚ್ಚಿನ ವಿವರಗಳಿಗೆ ಇಲ್ಲಿ http://www.hardwaresecrets.com/article/77 ಗೆ ಭೇಟಿ ಕೊಡಿ