ಕೆಲವು ಗಝಲ್ ವಿಧಗಳು (ಭಾಗ ೨)

ಕೆಲವು ಗಝಲ್ ವಿಧಗಳು (ಭಾಗ ೨)

ಕವನ

ಗಝಲ್ - ೪ ( ಮುರಧಫ್ ಪ್ರಕಾರ ಬರೆದ ಗಝಲ್)

ಮಧುರ ಕ್ಷಣಗಳ ಬಿಂಬವೆ ನಾವೆಂದೂ ಸಾಗೋಣ ಸಾಕಿ

ಬದುಕು ಸುಂದರತೆಗಳ ನಡುವೆ ನಾವೆಂದೂ ಸಾಗೋಣ ಸಾಕಿ

 

ಪ್ರೀತಿಯೊಳಗಿನ ತಂತಿಯ ಮನವು ಹೀಗೆಯೇ ಇರುವುದೇತಕೆ

ಕೈಯ ಬಳೆಯ ಸದ್ದಿನೊಳು ಒಲವೆ ನಾವೆಂದೂ ಸಾಗೋಣ ಸಾಕಿ

 

ತುಟಿಯಾಸೆಗೆ ಮೀರಿದ ಭಾವನೆಯು ಬೇಕೇನು ನಮಗೆ

ಚೈತ್ರದ ಸೊಗಸಿಗೆ ದಿನವೂ ಗೆಲುವೆ ನಾವೆಂದೂ ಸಾಗೋಣ ಸಾಕಿ

 

ಆಗಸದಲ್ಲಿ ರಾತ್ರಿಯ ಚಂದಿರನ ಬೆಳದಿಂಗಳು ಇರುವುದಾದರೂ ಏಕೆ

ತಾರೆಯು ಕುಡಿನೋಟದೊಳು ಬಲು ಚೆಲುವೆ ನಾವೆಂದೂ ಸಾಗೋಣ ಸಾಕಿ

 

ಈಶನೊಲವಿನಲ್ಲಿ ಬಿರಿದ ಮನ ಸಂತುಷ್ಟಗೊಂಡಿದೆಯಿಂದು

ಮನದರಸಿಯ ಸವಿಯೊಳಗಿನ ಕುಲವೆ ನಾವೆಂದೂ ಸಾಗೋಣ ಸಾಕಿ

***

ಗಝಲ್ - ೫ 

( ರಧೀಫ್ ಬಳಸದೇ ಬರೆದ ಗಝಲ್, ಗೈರ್ ಮುರದ್ದಫ್ ಗಝಲ್)

ಮಧುರ ಕ್ಷಣಗಳು ಯಾವತ್ತೂ ಗೆಲ್ಲುತ್ತದೆ

ಬದುಕ ಸುಂದರ ಕಲ್ಪನೆಗಳು ಸೋಲುತ್ತದೆ

 

ಪ್ರೀತಿಯ ತಂತಿಯ ಮೇಲಿನ ನಡಿಗೆ ಒಳ್ಳೆಯದೆ

ಕೈಯ ಬಳೆಯ ಸದ್ದಿಗೆ ಮನ ತೆರೆಯುತ್ತದೆ

 

ತುಟಿಯಾಸೆಗೆ ಮೀರಿದ ಚೆಲುವು ಅಪಾಯಕಾರಿ

ಚೈತ್ರದ ಸೊಗಸಿಗೆ ದಿನವು ತನುವು ಹಾಡುತ್ತದೆ

 

ರಾತ್ರಿಯ ಚಂದಿರನ ಕಿರಣವು ತಂಪಾಗಿ ಇರುವುದು

ತಾರೆಯ ಕುಡಿನೋಟಕ್ಕೆ ಹೃದಯ ತೇಲುತ್ತದೆ

 

ಈಶನ ಒಲವಿನಲ್ಲಿ ಬಿರಿದ ಮಲ್ಲಿಗೆಯೆಷ್ಟು ಚೆಂದ

ಮನದರಸಿಯ ಸವಿಯ ಒಲವು ನನ್ನೆಡೆಗೆ ಬಾಗುತ್ತದೆ

***

ಗಝಲ್ - ೬ 

(ಕಾಫಿಯಾ ಸಾಲಿನ ಮೊದಲ ಪದವಾಗಿ ಬಳಸಿ ಬರೆದ ಮುರದ್ದಫ್ ಗಝಲ್)

ಮಧುರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

ಸುಂದರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

 

ಮತಿಯ ವಾದವು ಹೃದಯದೊಳು ಮುಳ್ಳಾಯಿತೇಕೆ

ನಿರಂತರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

 

ಕತೆಗಳ ಕಟ್ಟುತ್ತಲೇ ಪದ್ಯವ ಗುಣಿಸುವರು ಯಾರು

ಚಿರಂತರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

 

ರಾತ್ರಿಯ ಚಂದಿರನ ರಮಣೀಯ ದೃಶ್ಯ ಸೋಜಿಗವಲ್ಲವೆ

ಗಂಡಾಂತರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

 

ಈಶನ ಒಲವಿನಲ್ಲಿ ಬಿರಿದ ನಯನವು ಬಹು ಸುಂದರವಾಗಿದೆ

ಮನ್ವಂತರ ಕ್ಷಣಗಳ ನಡುವೆ ಬೆಳೆಯೋಣ ಸಾಕಿ

***

ಗಝಲ್ - ೭ ( ಸ್ವರ ಕಾಫಿಯಾ )

ಮಧುರ ಕ್ಷಣಗಳು ಯಾವತ್ತೂ ಗೆಲ್ಲುತ್ತದೆ ಸಾಕಿ

ಬದುಕ ಸುಂದರ ಕಲ್ಪನೆಗಳು ಸೋಲುತ್ತವೆ ಸಾಕಿ

 

ಪ್ರೀತಿಯ ತಂತಿಯ ಮೇಲಿನ ನಡಿಗೆ ಒಳ್ಳೆಯದೆ

ಕೈಯ ಬಳೆಯ ಸದ್ದಿಗೆ ಮನಗಳು ಬಿರಿದವಂತೆ ಸಾಕಿ

 

ತುಟಿಯಾಸೆಗೆ ಮೀರಿದ ಚೆಲುವು ಅಪಾಯಕಾರಿಯಲ್ಲವೆ

ಚೈತ್ರದ ಸೊಗಸಿಗೆ ಮೈಯ ಕಾವು ದಿನವೂ ಹಿಂದುಗಡೆ ಸಾಕಿ

 

ರಾತ್ರಿಯ ಚಂದಿರನ ಕಿರಣವು ಕೆಂಪಾಗಿ ಇರಿಯುವುದೆ

ತಾರೆಯ ಕುಡಿನೋಟಕ್ಕೆ ತಂಪಿನೊಲವು ಬೆಸೆದಹಾಗೆ ಸಾಕಿ

 

ಈಶನ ಪ್ರೇಮದಲ್ಲಿ ಅರಳಿದ ಮಲ್ಲಿಗೆಯೆಷ್ಟು ಸುಂದರವಾಗಿದೆ

ಮನದರಸಿಯ ಉನ್ಮಾದದ ಅಲೆಯ ಸವಿಯಾಸರೆ ಸಾಕಿ

-ಹಾ ಮ ಸತೀಶ, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್