ಕೆಲವು ಹನಿಗಳು...

ಕೆಲವು ಹನಿಗಳು...

ಕವನ

ಜಾಣರ ಸುಳಿ 

ಈ ಬಾರಿಯ

ಸೀ ಎಂ ರೇಸ್ನಲ್ಲಿ

ನಾನಿಲ್ಲ

ಮುಂದಿನ ರೇಸ್ನಲ್ಲಿ

ಪಕ್ಕಾ ನಾನಿರುತ್ತೇನೆ-

ಸತೀಷ್ ಜಾರ್ಕಿ ಹೊಳಿ...

 

ನಾವೆಲ್ಲಾ ಬಸ್ನಲಿ

ಪ್ರಯಾಣಿಸುವಾಗ

ಹಾಕುವೆವಲ್ಲ

ಸೀಟಿಗಾಗಿ ಟವೆಲ್ಲಾ-

ಹಾಗೆಯೇ ಇದು

ಜಾಣರ ಸುಳಿ!

***

ಹಿತವಿಲ್ಲದನ್ನಕ್ಕ... 

ಶಾಲಾ ಬಿಸಿಯೂಟಕ್ಕೆ

ಮುದ್ದೆ ಜೋಳದ ರೊಟ್ಟಿ-

ರಾಜ್ಯಸರ್ಕಾರದ

ಪ್ರಸ್ತಾವನೆ-

ಕೇಂದ್ರ ಸರ್ಕಾರದ

ತಿರಸ್ಕಾರ...

 

ರಾಜ್ಯ-ಕೇಂದ್ರಗಳ

ನಡುವೆ

ಅಂತರಂಗದಲಿ

ಹಿತವಿಲ್ಲದಿರುವಾಗ

ಪ್ರಸ್ತಾವನೆಗಳಿಗೆಲ್ಲಾ

ಬರೀ ಬಹಿಷ್ಕಾರ!

***

ಭಾವ ಮತ್ತು ಶ್ರಮ ಸಂಗಮ 

ವಿಜ್ಞಾನಿಗಳು

ತಿರುಪತಿಗೆ

ಹೋದರಂತೆ;

ಖಳನಟನ ಪತ್ನಿ

ಕುಕ್ಕೆ ಸುಬ್ರಹ್ಮಣ್ಯಕೆ

ಭೇಟಿ ನೀಡಿದರಂತೆ....

 

ಹೌದು ಅವರವರ 

ಭಾವ ಮತ್ತು ಶ್ರಮ;

ಮೂಲ ಪ್ರಕ್ರಿಯೆಗಳನು

ಅವರು ಮಾಡೇ

ಯಶಸ್ಸನು ಗಳಿಸಿದುದನು

ನಾವೆಂದೂ ಮರೆಯಬಾರದಂತೆ!

***

ಕ್ಷುಲ್ಲಕ ಸಾವು 

ಪತಿ

ಚಾಕೊಲೇಟ್

ತಂದು ಕೊಡದೇ

ಇದ್ದುದ್ದಕ್ಕೆ

ಪತ್ನಿ

ಆತ್ಮಹತ್ಯೆ....

 

ಬೇರೆ

ಗೆಳತಿಯನ್ನಾದರೂ

ಕರೆದುಕೊಂಡು

ಬಂದಿದ್ದರೆ

ಜಗಳವಾಡಿಯಾದರೂ

ಬದುಕುತ್ತಿತ್ಯೆ?

***

ನಂದಿನಿ-ಸಮ್ಮೋಹಿನಿ 

ಇನ್ನು

ಮುಂದೆ

ತಿರುಪತಿ 

ಲಾಡುಗಳಲಿ

ನಂದಿನಿ ತುಪ್ಪ

ಇರೋಲ್ಲಾ....

 

ಕರ್ನಾಟಕದ

ನಂದಿನಿ ಇದ್ದಿದ್ದರೆ

ಲಾಡುವಿನ

ಘಮ-ರುಚಿಯದು

ಇಮ್ಮಡಿಸುತ್ತಿತ್ತೋ ಏನೋ

ಆ ತಿಮ್ಮಪ್ಪನೇ ಬಲ್ಲಾ!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್