ಕೆಲವು ಹನಿಗಳು...
ಕವನ
ಕಪ್ಪೆಯೋಟದ
ಹಾಗೆ
ಜೀವನ !
*
ಕಾಡುಗಳ
ಗೆಳೆತನ
ನಾಡಿಗೆ
ಶುಭದಿನ !
*
ಬೆಪ್ಪು ಕೈಯ
ಎತ್ತಿದ
ಕೂಡಲೇ
ದೇಶ ಅತ್ತಿತು,
ನಾಡು
ಬರಿದಾಯಿತು !
*
ಕಣ್ಣ ನೀರಿನ
ಹನಿ
ಕೆಳಗೆ
ಬಿದ್ದಾಗಲೇ
ಬೆಲೆ !
*
ಮಾತಿಲ್ಲ ಕತೆಯಿಲ್ಲ
ನಿದಿರೆಗೆ ಜನ
ಜಾರಿದಾಗಲೆಲ್ಲ !
*
ಮಂಗಳೂರಿನ
ಗೋಳಿಬಜೆ
ತಿಂದಾಗಲೇ
ಭಲೆ ಭಲೆ !
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್
