ಕೆಲವು ಹನಿಗಳು...

ಕೆಲವು ಹನಿಗಳು...

ಕವನ

ಕಲ್ಲು...

ವಿಚ್ಛೇದನ

ನೀಡಲು ನಿರಾಕರಿಸಿದ 

ಪತಿ ಮೇಲೇ 

ಪತ್ನಿ-

ಕಲ್ಲಿನಿಂದ

ಭಾರೀ ಹಲ್ಲೆ...

 

ಕಲ್ಲಿನಿಂದ

ಹೊಡೆದ ಮೇಲೂ

ವಿಚ್ಛೇದನ

ನೀಡದಿರ ಪತಿಯೇ-

ನೀನೊಂದು

ಸ್ಟ್ರಾಂಗ್ ಕಲ್ಲೇ!

***

ಓದುವ ಸಂಸ್ಕೃತಿ 

ಗ್ರಂಥಾಲಯದ

ಪುಸ್ತಕಗಳು-

ನಮ್ಮ ಧೂಳ

ಕೊಡವುವರಿಲ್ಲವೆಂದು

ಅಳುತಿಹವು

ನೋಡಿರೋ...

 

ಮನದ ಧೂಳ

ಕೊಡವಿ-

ಪುಸ್ತಕಗಳ

ಓದಿ

ಜ್ಞಾನ ದಾಹವ

ತಣಿಸಿಕೊಳ್ಳಿರೋ!

***

ಕೊರಗು 

ಪ್ರತೀ 

ಹಂತದಲೂ

ಸಮೃದ್ಧಿ

ಸೌಲಭ್ಯಗಳ

ಪಡೆದರೂ

ಈ ಜೀವ...

 

ಸದಾ

ಕೊರಗುತಲಿಹುದು

ಮನುಷ್ಯನ

ಅಸಹಜ

ಅತೃಪ್ತಿಯ

ಭಾವ!

***

ಬಿಗುಮಾನ

ಅಯೋಧ್ಯೆಗೆ

ಬರುವನಂತೆ

ಲಲ್ಲೂರಾಮ;

ವನವಾಸ

ಮುಗಿಸಿ ಬಂದಂತೆ 

ಶ್ರೀ ರಾಮ...

 

ಹೊರದೇಶಗಳಲೂ

ವೈಭವ ಸಂಭ್ರಮ

ಸ್ವಾಗತದ ಅಭಿಮಾನ!

ಭಾರತದಲ್ಲೇಕಿಷ್ಟು

ಬಿಗುಮಾನ- ಅಯ್ಯೋ 

ರಾಮ ರಾಮಾ?

***

ಶ್ರೀರಾಮ ಪ್ರತಿಷ್ಠಾನ 

ಶ್ರೀರಾಮ ಪ್ರತಿಷ್ಠಾನ-

ಇಂದು ಭಾರತ

ದೇವರ, ಸಾಧು

ಸಂತರ ನಾಡೆಂಬುದು

ದೃಢವಾಯಿತು:

ಇಡೀ ವಿಶ್ವವೇ ಸಲಾಮು...

 

ಐನೂರು ವರ್ಷಗಳ

ಹಿಂದೆ ಆದ

ಮರ್ಮಾಘಾತಕೆ

ಇಂದು ಹಚ್ಚಲ್ಪಟ್ಟಿತೇ

ರಾಮಮಂದಿರವೆಂಬ

ಭಕ್ತಿ ಭಾವದ ಮುಲಾಮು!

***

ನೆಲದ ಬೆಲೆ 

ಹಿಂದೊಮ್ಮೆ

ಹೊಲ

ಮನೆಗಳನು

ಬಿಟ್ಟು ಸಿಟಿಗೆ

ಹೊರಟಿತು

ಜನರ ಗುಳೆ...

 

ಈಗ ಮರಳಿ

ಹೊರಟಿಹರು

ಹಳ್ಳಿಗೆ

ಸುರಿಸುತಿಹಲು

ನೆಲ

ಹಣದ ಹೊಳೆ!

***

ಫ್ರೀ-ಪ್ರಭಾವ 

ಮಹಿಳೆಯರಿಗೆ ಬಸ್ ಫ್ರೀ-

ಉತ್ತರ ಕರ್ನಾಟಕದ

ಸರ್ಕಾರೀ ಬಸ್ಸುಗಳ

ಕಿಟಕಿ ಸರಳುಗಳೇ

ಮುರಿದಿವೆಯೆಲ್ಲಾ

ಮಂತ್ರಿವರ್ಯ...!

 

ಇನ್ನು ಗಂಡು ಮಕ್ಕಳಿಗೆ

ಬಸ್ ಫ್ರೀ ಆದರೆ-

ಪಾಪ ದುರದೃಷ್ಟ

ಸರ್ಕಾರೀ ಬಸ್ಸುಗಳ 

ಕಿಟಿಕಿ-ಬಾಗಿಲುಗಳೇ

ಮಾಯವಾಗುವವೇನಯ್ಯ!?

***

ಗುಣಾಭಿರಾಮ 

ವಜ್ರದ ವ್ಯಾಪಾರಿಯಿಂದ

      ಬಾಲ ರಾಮನಿಗೆ

    ಹನ್ನೊಂದು ಕೋಟಿ

            ಮೌಲ್ಯ

        ವಜ್ರ ಕಿರೀಟ

            ಕಾಣಿಕೆ...

 

   ಸಕಲ ಗುಣ ಸಂಪನ್ನ

    ಪ್ರಶಾಂತ ಹೃದಯೀ

 ಗುಣಾಭಿರಾಮನಿಗಲ್ಲದೆ

          ಮತ್ತಾರಿಗೆ

          ಶೋಭೆ ಈ

            ತೊಡಿಕೆ?

***

ಪಾಪದ ಕೋತಿ 

ಮಂಗ ತಿಂದು

   ಮೇಕೆಯ

   ಬಾಯಿಗೆ

  ಒರೆಸಿದಂತೆ-

ರಾಜಕಾರಣಿಗಳ

   ರಾಜ ನೀತಿ...

 

 ಪಾಪ ಕೆಲವು

ಅಧಿಕಾರಿಗಳು

ತಾಳಕ್ಕೆ ತಕ್ಕಂತೆ

    ಕುಣಿದು

ಆಗಿಬಿಡುವರೇ

ಡಿಸ್ಮಿಸ್ ಕೋತಿ!

 -ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್