ಕೆಲವು ಹನಿಗಳು...

ಕೆಲವು ಹನಿಗಳು...

ಕವನ

ಮಾನವೀಯತೆ

ಸಾವಿನ

ಮನೆಯ

ಸಂತೈಸಬೇಕು...

 

ಮದುವೆ

ಮನೆಯನು

ಮುದ್ದಿಸಬೇಕು!

***

ಪ್ರೀತಿ

ಪ್ರೀತಿಯದು

ನಳದೊಳ

ನಲ್ಲಿಯೊಳು

ಹರಿದು ಬರಲಿ...

 

ಜಲಪಾತದೊಳು

ಧುಮುಕಿ

ಹರಿದು ಹಂಚಿ

ಹೋಗದಿರಲಿ!

***

ಅದ್ಭುತ ಜೋಡಿ!

ಅವಳು:

ಕಣ್ಣು ಮುಚ್ಚಿ

ನೋಡಬಲ್ಲಳು

ಕಿವಿ ಮುಚ್ಚಿದರೂ

ಕೇಳಬಲ್ಲಳು...

ಆದರೆ ಇವನು:

ಎರಡೂ ತೆರೆದರೂ

ಏನೂ ಮಾಡಲಾರ...

ಆದರೂ ಜೀವನದಲಿ

ಇವರದೆಂತಹ

ಅದ್ಭುತ ಜೋಡಿ!

***

ವಿಮರ್ಶೆ

ವಿಮರ್ಶೆ

ಅವನಿಂದ

ಆರಂಭವಾಗಿ

ನನ್ನಿಂದ

ಕೊನೆಯಾಗಬಾರದು....

 

ಅದು

ನನ್ನಿಂದ

ಆರಂಭವಾಗಿ

ಅವನಲ್ಲಿ

ಕೊನೆಯಾಗಬೇಕು!

***

ಬಡತನ-ಸಿರಿತನ

ಬಡತನದ

ವರವದು

ಇದ್ದಾಗ

ಕೂಡಿ

ಬಾಳಿದೆವು...

 

ಸಿರಿಯ

ಗರವು

ಬಡಿದಾಗ

ಸಿಡಿದೇ

ಚದುರಿದೆವು!

-ಕೆ ನಟರಾಜ್, ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್