ಕೆಲವು ಹನಿಗವನಗಳು

ಕೆಲವು ಹನಿಗವನಗಳು

ಬರಹ

ಜೀವನ
------
ರೀತಿಯಂತೆ, ನೀತಿಯಂತೆ
ಯಾರು ವಿಧಿಸಿದರು ಸ್ವಾಮಿ
ಬದುಕಿಗೊಂದು ಅಳತೆ ಮಾಪನ.
ಅಳತೆಗೆ ಸಿಕ್ಕುವುದಲ್ಲ,
ಅನುಭೂತಿಗೆ ದಕ್ಕುವುದು ಜೀವನ.

ಮೂರ್ಖತನ
---------
ಬೊಚ್ಚುಬಾಯಿಂದ ಬೊಚ್ಚುಬಾಯಿಗೆ
ಬೆಳದಿಂಗಳನ್ನೇ ಅಂಗೈಲಿ
ಹಿಡಿದಿಟ್ಟಂತೆ ಬದುಕಿದ
ಶತಾಯುಷಿಗೆ ಕೊಡುಗೆ
’ಬದುಕಲು ಕಲಿಯಿರಿ’ ಹೊತ್ತಗೆ !