ಕೆಲವು ಹಾಸ್ಯ ಕವನಗಳು......

ಕೆಲವು ಹಾಸ್ಯ ಕವನಗಳು......

ಬರಹ

ಅಂದು ನಿನ್ನ ಕಂಡಾಗ ಮೈ ಮರೆತು ನಿಂತೆ ಮಾರ್ಕೆಟಿನಲ್ಲಿ..
ಹಾಗೆ ಹೂ ಕೊಳ್ಳುವ ನೆಪದಲಿ ಮುಂದೆ ಹೋಗಿ ನೋಡಿದರೆ
ಪರ್ಸ್ ಇರಲಿಲ್ಲ ನನ್ನ ಜೇಬಿನಲ್ಲಿ.....

ಬಸ್ಸಿಗಾಗಿ ಕಾಯುತ್ತಿದ್ದೆ ನಾನು ಅಂದು ಬಸ್ ಸ್ಟ್ಯಾಂಡಿನಲ್ಲಿ
ನೀನು ಸಹ ಬಂದೆ ಅಂದು ಅದೇ ದಿಕ್ಕಿನಲ್ಲಿ
ನನಗೆ ತಿಳಿಯಲ್ಲೆ ಇಲ್ಲ ನಾನು ಹತ್ತಿದ್ದು ಸಿಟಿ ಟ್ಯಾಕ್ಸಿಯಲ್ಲಿ...
ಭಯವಾಗಿತ್ತು ನನಗೆ ಅದರ ಏರುವ ಮೀಟರ್ ನೋಡಿ
ಏಕೆಂದರೆ ಅಂದು ಕಾಸಿರಲಿಲ್ಲ ನನ್ನ ಕಿಸೆಯಲ್ಲಿ....

ನಿನ್ನ ನೋಡಲು ನಾನು ಓಡಿ ಬಂದೆ ಜಿಂಕೆಯಂತೆ...
ತಿಳಿಯಲಿಲ್ಲ ನನಗೆ ಹೂಂಡವಿರುವುದು ಕುರುಡನಂತೆ
ಜಾರಿ ಬಿದ್ದು ನನ್ನ ಕಾಲಾಗಿದೆ ಆನೆಯಂತೆ...

ಅಂದು ನೀನು ನನ್ನ ಕಂಡು ಹೇಳಿದೆ..
ಮರುಭೂಮಿಯಲ್ಲಿ ಓಯಸಿಸ್ ನಂತೆ..
ಇಂದು ನಿನ್ನ ಕಾಟಕ್ಕೆ ನನ್ನ ತಲೆಯಾಗಿದೆ
ಬೋಳು ಮರುಭೂಮಿಯಂತೆ............