ಕೆಲವು ಹಿತ ನುಡಿಗಳು

ಮಠ ಮಾನ್ಯ ,ಅಧಿಕಾರಿ ವರ್ಗ ಸರಕಾರದ ನಡೆಗಳು, ಸಂವಿಧಾನದೊಳಗಿನ ಆಶಯ, ಪ್ರಜಾಪ್ರಭುತ್ವದ ನೆಲೆ ಎಲ್ಲವೂ ಜನಸಾಮಾನ್ಯರ ಸುಂದರ ಬದುಕಿಗಾಗಿ ಇರುವ ವ್ಯವಸ್ಥೆ ಎಲ್ಲವೂ ಅವರು ಕಷ್ಟ ಪಟ್ಟು ಗಳಿಸಿ ಉಳಿಸಿ ಕೊಟ್ಟ ಹಣ, ವಸ್ತುಗಳ ಮೂಲಕ ನಡೆಯುವಂತಹ ;ಜನರಿಂದ ಜನರಿಗಾಗಿ’ ಇರುವಂತಹ ವ್ಯವಸ್ಥೆ!
ಆದರೆ ಈ ಪ್ರಜಾಪ್ರಭುತ್ವದ ನೆಲದಲ್ಲಿ ಅದೆಲ್ಲವೂ ಆಚೆ ಈಚೆಯಾಗಿದೆ. ಜನಸಾಮಾನ್ಯರು ಇವರೆಲ್ಲರ ಕಪಿ ಮುಷ್ಟಿಯಲ್ಲಿ ಸಿಲುಕಿ ನರಳುವಂತಾಗಿರುವುದು ಶೋಚನೀಯ. ದೇವರೆ ಇವರೆಲ್ಲರನ್ನು ಕ್ಷಮಿಸು . ಯಾಕೆಂದರೆ ? ಇದಕ್ಕೆಲ್ಲ ಕಾರಣ ಜನಸಾಮಾನ್ಯರೇ ಆಗಿದ್ದಾರೆ. ನವ ರಸಗಳ ದಾಸನಾಗಿರುವ ಮನುಷ್ಯನ ಜೀವನವೊಂದು ಅಂಕದ ಪರದೆ ! ಈ ಪ್ರಪಂಚವೇ ಹೀಗೆ ? ಯಾರು ತಾವು ಜಗದ್ಗುರುಗಳೆಂದು ತಿಳಿದುಕೊಂಡಿರುತ್ತಾರೋ , ಅವರ ಕೈ ಕೆಳಗೆ ಅವರಿಗಿಂತಲೂ ಒಂದು ಕೈ ಮೇಲೆನಿಸುವಂತಹ ಮಹಾ ಜಗದ್ಗುರುಗಳಿರುತ್ತಾರೆ ಎಂಬುವುದನ್ನು ಮರೆತಿರುತ್ತಾರೆ !
ಯಾರು ಸಮಾಜದ ; ತನ್ನ ಕುಟುಂಬದ ಠೀಕೆಟಿಪ್ಪಣಿಗಳನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿ ಬೆಳೆಯುತ್ತಾನೋ? ಆ ಮೂಲಕ ಉತ್ತಮ ಬದುಕನ್ನು ಕಂಡುಕೊಳ್ಳುತ್ತಾನೋ ? ಅವನು ತನ್ನ ಜೀವಿತಾವಧಿಯ ಕೊನೆಯ ಕಾಲವನ್ನು ನೆಮ್ಮದಿಯಿಂದ , ನಿಶ್ಚಿಂತೆಯಿಂದ ಕಳೆಯುತ್ತಾನೆ !
-ಹಾ ಮ ಸತೀಶ ಬೆಂಗಳೂರು,
ಚಿತ್ರ ಕೃಪೆ: ಇಂಟರ್ನೆಟ್ ತಾಣ