ಕೆಲವು ಹಿತ ನುಡಿಗಳು

ಕೆಲವು ಹಿತ ನುಡಿಗಳು

ಮಠ ಮಾನ್ಯ ,ಅಧಿಕಾರಿ ವರ್ಗ ಸರಕಾರದ ನಡೆಗಳು, ಸಂವಿಧಾನದೊಳಗಿನ ಆಶಯ, ಪ್ರಜಾಪ್ರಭುತ್ವದ ನೆಲೆ ಎಲ್ಲವೂ ಜನಸಾಮಾನ್ಯರ ಸುಂದರ ಬದುಕಿಗಾಗಿ ಇರುವ ವ್ಯವಸ್ಥೆ ಎಲ್ಲವೂ ಅವರು ಕಷ್ಟ ಪಟ್ಟು ಗಳಿಸಿ ಉಳಿಸಿ ಕೊಟ್ಟ ಹಣ,  ವಸ್ತುಗಳ ಮೂಲಕ ನಡೆಯುವಂತಹ ;ಜನರಿಂದ ಜನರಿಗಾಗಿ’ ಇರುವಂತಹ ವ್ಯವಸ್ಥೆ!

ಆದರೆ ಈ ಪ್ರಜಾಪ್ರಭುತ್ವದ ನೆಲದಲ್ಲಿ ಅದೆಲ್ಲವೂ ಆಚೆ ಈಚೆಯಾಗಿದೆ. ಜನಸಾಮಾನ್ಯರು ಇವರೆಲ್ಲರ ಕಪಿ ಮುಷ್ಟಿಯಲ್ಲಿ ಸಿಲುಕಿ ನರಳುವಂತಾಗಿರುವುದು ಶೋಚನೀಯ. ದೇವರೆ ಇವರೆಲ್ಲರನ್ನು ಕ್ಷಮಿಸು . ಯಾಕೆಂದರೆ ? ಇದಕ್ಕೆಲ್ಲ ಕಾರಣ ಜನಸಾಮಾನ್ಯರೇ ಆಗಿದ್ದಾರೆ. ನವ ರಸಗಳ ದಾಸನಾಗಿರುವ ಮನುಷ್ಯನ ಜೀವನವೊಂದು ಅಂಕದ ಪರದೆ ! ಈ ಪ್ರಪಂಚವೇ ಹೀಗೆ ? ಯಾರು ತಾವು ಜಗದ್ಗುರುಗಳೆಂದು ತಿಳಿದುಕೊಂಡಿರುತ್ತಾರೋ , ಅವರ ಕೈ ಕೆಳಗೆ ಅವರಿಗಿಂತಲೂ ಒಂದು ಕೈ ಮೇಲೆನಿಸುವಂತಹ ಮಹಾ ಜಗದ್ಗುರುಗಳಿರುತ್ತಾರೆ ಎಂಬುವುದನ್ನು ಮರೆತಿರುತ್ತಾರೆ !

ಯಾರು ಸಮಾಜದ ; ತನ್ನ ಕುಟುಂಬದ ಠೀಕೆಟಿಪ್ಪಣಿಗಳನ್ನು ಸರಿಯಾದ ರೀತಿಯಲ್ಲಿ ಸ್ವೀಕರಿಸಿ ಬೆಳೆಯುತ್ತಾನೋ? ಆ ಮೂಲಕ ಉತ್ತಮ ಬದುಕನ್ನು ಕಂಡುಕೊಳ್ಳುತ್ತಾನೋ ? ಅವನು ತನ್ನ  ಜೀವಿತಾವಧಿಯ ಕೊನೆಯ ಕಾಲವನ್ನು ನೆಮ್ಮದಿಯಿಂದ , ನಿಶ್ಚಿಂತೆಯಿಂದ ಕಳೆಯುತ್ತಾನೆ ! 

-ಹಾ ಮ ಸತೀಶ ಬೆಂಗಳೂರು, 

ಚಿತ್ರ ಕೃಪೆ: ಇಂಟರ್ನೆಟ್ ತಾಣ