ಕೆಲವೊಂದು ಹಿತನುಡಿಗಳು
- ಅವಶ್ಯಕತೆಗಿಂತ ಹೆಚ್ಚಿಗೆ ಮಾತನಾಡುವದು ಮನುಷ್ಯನನ್ನು ಮೂರ್ಖನನ್ನಾಗಿಸುತ್ತೆ.
- ಕನಸು ಕಾಣಲು ಕಷ್ಟ ಪಡಬೇಕಾಗಿಲ್ಲ ನಿದ್ರಿಸಿದರೆ ಸಾಕು, ಆದರೆ ಗುರಿ ಸಾಧಿಸಲು ನಿದ್ದೆಯಿಲ್ಲದೆ ಕಷ್ಟ ಪಡಬೇಕು.
- ಸೌಂದರ್ಯ ಹೃದಯವನ್ನು ಆಕರ್ಶಿತಗೊಳಿಸುತ್ತೆ, ಆದರೆ ಚಾರಿತ್ರ್ಯ ಆತ್ಮವನ್ನು ಆಕರ್ಶಿತಗೊಳಿಸುತ್ತೆ. ಚಾರಿತ್ರವಂತರಾಗಿ...
- ಸುಳ್ಳು ಓಟದಲ್ಲಿ ಎಷ್ಟೇ ಮುಂದೆ ಇದ್ದರೂ ಕೂಡ ಕೊನೆಗೆ ಗುರಿ ಮುಟ್ಟೋದು ಸತ್ಯ ಮಾತ್ರ.
- ಎಂದಿಗೂ ಭರವಸೆ ಕಳೆದುಕೊಳ್ಳಬೇಡಿ, ಇವತ್ತಿಗಿಂತ ನಾಳೆ ಇನ್ನೂ ಒಳ್ಳೆಯ ದಿನ ಆಗಿರುತ್ತೆ.
- ಕೆಲವೊಂದು ಮಾತುಗಳು ತಿಳಿಸಿ ಹೇಳುವದರಿಂದ ತಿಳಿಯೋದಿಲ್ಲ, ಕೆಲ ಸಮಯ ಕಳೆದ ಮೇಲೆ ಸ್ವತಃ ಅನುಭವ ಆದಮೇಲೆ ತಿಳಿಯುತ್ತವೆ.
- ಕೆಟ್ಟ ವಿಚಾರಗಳನ್ನು ಮಾಡುವ ಮನಸ್ಸು ನಮ್ಮ ಪರಮ ಶತ್ರುವಿಗಿಂತ ಅಪಾಯಕಾರಿ.
- ಮನುಷ್ಯನ ಅರ್ಧ ಸುಂದರತೆ ಅವನ ಮಾತುಗಳಲ್ಲಿ ಇರುತ್ತೆ. ನಿಮ್ಮ ಮಾತುಗಳು ಸುಮಧುರವಾಗಿರಲಿ...
- ಜೀವದಲ್ಲಿ ಏನಾದರೂ ಸಾಧನೆ ಮಾಡಲು ಸಮಯ ವ್ಯರ್ಥ ಮಾಡಬೇಡಿ. ಇಲ್ಲವಾದರೆ ಸಮಯವೇ ನಿಮ್ಮನ್ನು ವ್ಯರ್ಥ ಮಾಡುತ್ತೆ. ಸಮಯಕ್ಕೆ ಬೆಲೆ ಕೊಡಿ.
- ಬದುಕಿನಲ್ಲಿ ಆಗುವ ಬದಲಾವಣೆಗಳಿಗೆ ಹೆದರಬೇಡಿ, ಏಕೆಂದರೆ ಒಂದು ಒಳ್ಳೆಯದನ್ನು ಕಳೆದುಕೊಂಡಾಗ ಅದಕ್ಕಿಂತ ಒಳ್ಳೆಯದನ್ನು ಪಡೆದುಕೊಳ್ಳಲು ಸಾಧ್ಯವಿದೆ.
(ಆಧಾರ) ಬಸಯ್ಯ ಜಿ. ಮಳಿಮಠ, ಹುಬ್ಬಳ್ಳಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ