ಕೆಲವೊಮ್ಮೆ ಅನಿಸುವುದು...
ಕವನ
ಕೆಲವೊಮ್ಮೆ ಅನಿಸುವುದು
ನಿನಗೆಷ್ಟು ಕರವೋ
ಏಕ ಕಾಲಕ್ಕೆ ಅದೆಷ್ಟು ಕಾರ್ಯ
ನೀ ಮುಗಿಸಿಬಿಡುವೆ
ಕೆಲವೊಮ್ಮೆ ಅನಿಸುವುದು
ನಿನಗೆಷ್ಟು ಸಹನೆ
ಒತ್ತಡದ ನಡುವಲ್ಲಿಯೂ
ನೀ ಶಾಂತ ವದನೆ
ಕೆಲವೊಮ್ಮೆ ಅನಿಸುವುದು
ನೀನೊಂದು ಯಂತ್ರ
ಕೆಲಸ ಮುಗಿಸುವುದೇ
ನಿನ್ನೊಳಗಿನ ಮಂತ್ರ
ಕೆಲವೊಮ್ಮೆ ಅನಿಸುವುದು
ನೀನೆಂತಹ ತ್ಯಾಗಿ
ನಿನಗುಳಿಸದೇ ಈವೆ
ಹಸಿವಿರದಂತೆ ತೇಗಿ
ಕೆಲವೊಮ್ಮೆ ಅನಿಸುವುದು
ನೀನೆಂತಹ ಸ್ವಾರ್ಥಿ
ನೀ ಹಡೆದ ಮಕ್ಕಳೇ
ಗೆಲಲೆಂಬ ಪ್ರೀತಿ
ಗಂಡ,ಮನೆ,ಮಕ್ಕಳನು
ಜತನಗೊಳಿಸುವ ರೀತಿ
ಅದಕಾಗಿ ನಿನಗುಂಟು
ಮಹಿಳೆ ಎನ್ನುವ ಖ್ಯಾತಿ||
(ವಿಶ್ವ ಮಹಿಳಾ ದಿನದ ಶುಭಾಶಯಗಳು)
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ ಕೃಪೆ: ಅಂತರ್ಜಾಲ
ಚಿತ್ರ್
