ಕೆಲಸ

ಕೆಲಸ

ಬರಹ

                       ಕೆಲಸ 
         ಕೆಲಸ ಕಲಿಸುವ ಕೆಲಸ, ಕೈಲಾಸದಾ ಕೆಲಸ.
         ಕೆಲಸ ಕೊಡಿಸುವ ಕೆಲಸ, ಕೇದಾರನಾ ಕೆಲಸ.
         ಕೆಲಸ ನಡೆಸುವ ಕೆಲಸ, ಕೇಶವನಾಅ ಕೆಲಸ.
         ಕೆಲಸ ಮುಗಿಸುವ ಕೆಲಸ, ಕೈವಲ್ಯದಾ ಕೆಲಸ.//ಪ//.

         ಮನಸು ಬೆರೆಸದ ಕೆಲಸ, ಪಶುವಿನಾ ಕೆಲಸ.
         ಮನಸು ಬೆರೆಸಿದ ಕೆಲಸ, ಮಾನವನ ಕೆಲಸ.
         ಬೇಸರದ ಕೆಲಸವದು ದಾನವನ ಕೆಲಸ.
         ಸೊಗಸಿನಾ ಕೆಲಸವದು ಸಂಯಮಿಯ ಕೆಲಸ.//೧//.

         ಕೆಲಸದಾ ಕೆಲಸವದು ತಿನಿಸು ಕೊಡಿಸುವ ಕೆಲಸ,
         ತಿನಿಸಿನಾ ಕೆಲಸವದು ಕಾಯ ಬೆಳೆಸುವ ಕೆಲಸ.
         ಕಾಯಕದ ಕೆಲಸವದು ನಿಷ್ಕಾಮದಾ ಕೆಲಸ.
         ಬಯಸದಾ ಕೆಲಸವದು ಹರಿಯ ಒಲಿಸುವ ಕೆಲಸ.//೨//.

         ಅರಿವು ಕಲಿಸುವ ಕೆಲಸ, ಗುರುವಿನಾ ಕೆಲಸ.
         ಅರಿಯ ತಡೆಯುವ ಕೆಲಸ, ಅರಸನಾ ಕೆಲಸ.
         ಸಿರಿಯ ಬೆಳೆಸುವ ಕೆಲಸ, ಶ್ರೀಮಂತನಾ ಕೆಲಸ.
         ಧರೆಯ ಸಲಹುವ ಕೆಲಸ, ಶ್ರೀಹರಿಯ ಕೆಲಸ.//೩//.
                                          -:ಅಹೋರಾತ್ರ.