ಕೇಂದ್ರ ಸಕಾಱರ ವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ. ಲಭಿಸುವುದರ ಬಗ್ಗೆ......!
ಅಬ್ಬಾ ಅಂತೂ ನಮ್ಮ ಕನ್ನಡ ಭಾಷೆಗೆ ಕಾಡಿ ಬೇಡಿ "ಶಾಸ್ತ್ರೀಯ ಸ್ಥಾನಮಾನ" ಸಿಕ್ಕಿತು. ಸಿಕ್ಕಿತು. ಮುಂದೆ??? ಕಳೆದ ಬಾರಿಯ ಭರವಸೆಗಳು ಈಡೇರಿಲ್ಲ,
ಉದಾ: ಕನ್ನಡ ಕಲಿಕೆ ಕಡ್ಡಾಯಗೊಳಿಸುವ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದ್ದರೂ, ಗಡಿಬಾಗದಲ್ಲಿ ಕನ್ನಡ ಶಾಲೆಗಳ ಸ್ಥಿತಿ ಸುಧಾರಣಿಯಾಗಿಲ್ಲ, ಸುವರ್ಣ ಕರ್ನಾಟಕದಲ್ಲಿ ಜಿಲ್ಲೆಗೊಂದು ಭವನ ನಿರ್ಮಿಸುವುದು, ಕನ್ನಡ ಬಳಕೆ ಜಾರಿಗೆ ತರದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ ಕಮ ಕೈಗೊಳ್ಳುವುದು ಸೇರಿದಂತೆ ಮುಖ್ಯವಾಗಿ "ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ" ಪ್ರಾಮಾಣಿಕವಾಗಿ ಆಗಬೇಕಾಗಿದೆ. ನಾನು ಕನ್ನಡಿಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಯಾವ ಕೆಲಸ ಇತ್ತೀಚಿನ ದಿನಗಳಲ್ಲಿ ಅಗಿದೆಯಿಂದು ನೀವೇ ಹೇಳಿ. ಕನ್ನಡದ ನಿಜವಾದ ಶತ್ರು ಕನ್ನಡಿಗನೇ ಎಂದು ವಿಷಾದಿಂದ ಹೇಳಬೇಕಾಗಿದೆ. ಇದಕ್ಕೆ ನಮ್ಮ ಜನಪ್ರತಿನಿದಿಗಳು ಕೂಡ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತಲೇ ಇದ್ದಾರೆ. ನಿಜವಾಗಲು ಕನ್ನಡಿಗರು ಸಹನಾಮಯಿಗಳೋ ಇಲ್ಲ ಸೋಮಾರಿಗಳೋ?? "ಸತ್ತಂತಿಹರನು ಬಡಿದೆಚ್ಚರಿಸು" ಎಂಬು ಕವಿವಾಣಿಯು ಸಹ ವಿಫಲವಾಯಿತೇ?? ಇಂಥ ಹೊತ್ತಲ್ಲಿ ಕನ್ನಡಕ್ಕೆ ಶಾಸ್ತಿಯ ಸ್ಥಾನಮಾನ ಲಭಿಸಿದ್ದು ತುಸು ಸಂತಸಕಾರಿ...ಅದು ಬಿಟ್ಟರೆ ರಾಜ್ಯೋತ್ಸವದ ಸಂಭ್ರಮ ಹಳೆಯ ಘೋಷಣೆಯನ್ನೇ ಮತ್ತೆ ಮತ್ತೆ ಹೇಳುತ್ತಾ, ಇರಬೇಕೇ?? ಈ ೫೪ರ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಪ್ರಾಮಾಣೀಕವಾಗಿ ಕನ್ನಡ ಸೇವೆಯನ್ನು ಮಾಡೋಣ, ಉತ್ಸವ, ಮೆರವಣಿಗೆ, ಭಾಷಣ ಸಾಕುಮಾಡಿ, ಇಂದು ತುರ್ತಾಗಿ ಅಗಬೇಕಾಗಿರುವುದು... ಬಹಳಷ್ಟಿದೆ.
ಇಂತಿ ನಿಮ್ಮವ
ಗಿರೀಶ್ ಕೆ.ಎಸ್
Comments
ಉ: ಕೇಂದ್ರ ಸಕಾಱರ ವು ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನ ಮಾನ. ಲಭಿಸುವುದರ ಬಗ್ಗೆ......!