ಕೇನೆ ಸಿಪ್ಪೆ ಗೊಜ್ಜು

ಕೇನೆ ಸಿಪ್ಪೆ ಗೊಜ್ಜು

ಬೇಕಿರುವ ಸಾಮಗ್ರಿ

ಸ್ವಲ್ಪ ಕೇನೆ ಸಿಪ್ಪೆ, ೧ ಕಪ್ ಕಾಯಿತುರಿ, ಬೆಲ್ಲ ಚೂರು, ಹುಳಿ ಚೂರು, ಉಪ್ಪುರುಚಿಗೆ, ಒಣಮೆಣಸು ೫ ಕೊತ್ತಂಬರಿ ೧ ಚಮಚ, ಎಣ್ಣೆ ಒಗ್ಗರಣೆಗೆ ಸಾಸಿವೆ, ಇಂಗು ಚೂರು

ತಯಾರಿಸುವ ವಿಧಾನ

ಒಣಮೆಣಸು, ಕೊತ್ತಂಬರಿ, ಇಂಗು ಹುರಿದು ಕೊಳ್ಳಬೇಕು. ಹುರಿದ ಸಾಮಗ್ರಿ ಗಳನ್ನು ಮಿಕ್ಸಿಯಲ್ಲಿ ಹುಡಿ ಮಾಡಿಕೊಂಡು ಅದಕ್ಕೆ ಕಾಯಿತುರಿ ಬೆಲ್ಲ ಚೂರು ನೀರು ಹಾಕಿ ಬೀಸ ಬೇಕು. ಆ ಮಿಶ್ರಣಕ್ಕೆ ಮೆಣಸು, ಸಾಸಿವೆ, ಒಗ್ಗರಣೆ ಹಾಕಿದರೆ ಕೇನೆ ಸಿಪ್ಪೆ ಗೊಜ್ಜು ರೆಡಿ.

-ಅಶ್ವಿನಿ ಮೂರ್ತಿ, ಸುಳ್ಯ