ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ

ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ

ಹಳೆಯ ಘಟನೆಯೊಂದಕ್ಕೆ "ಗೀತಾ" ಚಿತ್ರದ "ಕೇಳದೇ ನಿಮಗೀಗ" ಹಾಡಿನ ಸಾಹಿತ್ಯವನ್ನು ಬದಲಿಸಿ ಬರೆದಿದ್ದೇನೆ. ಇದು ಕೇವಲ ಹಾಸ್ಯಕ್ಕಾಗಿ.

 

ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ ..ಹಾಡು ಹೇಳಿದಂತೆಒಂದು ಪಕ್ಷದ ಓ...ನೊಂದ ವಿರಹ ಗೀತೆ...
ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ ...
 
ಬಿಜೆಪಿ ಒಂದೂರು..ಜೆಡಿಎಸ್ ಒಂದೂರುನಡುವಲ್ಲಿ ಚುನಾವಣೆಯೊಂದು...
ಹಗ್ಗದ ಉಯ್ಯಾಲೆ ತೂಗುವ ಹಾಗೊಂದು
ಆಫೀಸು ಅಲ್ಲೊಂದು...ಈ ಊರ ಯಡ್ಡಿ ಆ ಊರ ಕುಮಾರ..
ಆಫೀಸಂಚಲಿ ಓಡಾಡುತ ಎದುರಾದರು ಒಮ್ಮೆ...
ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ
 
ಯಡ್ಡಿಯ ಕಂಡಾಗ ಕುಮಾರನ ಮನದಲ್ಲಿ ನೂರಾಸೆ ಬಂದಾಗ..
ಯಡ್ಡಿಯ ಕಣ್ಣಲ್ಲಿ ಕುಮಾರನ ಜೊತೆಗೂಡಿ ಸರ್ಕಾರ ಮಾಡುವಾಸೆ...
ಹೂವಾಗಿ ಮನಸು...ನೂರಾರು ಕನಸು..
ಬೆರಗಾದರೂ ಒಲವಿಂದಲಿ ಜೊತೆಯಾದರು ಆಗ...
ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ
 
ಈ ಪಕ್ಷಕ್ಕೂ ಆ ಪಕ್ಷಕೂ ಹಿಂದಿನಿಂದ ದ್ವೇಷ..
ಒಬ್ಬರೊನ್ನಬ್ಬರು ಕೊಲ್ಲುವಷ್ಟು ಆಕ್ರೋಶ..
ಹೀಗಿದ್ದರೂ ಆ ಗೆಳೆಯರು ಹೆದರಲಿಲ್ಲ..
ದಿನಾಲೂ ಪಕ್ಷದವರೆಲ್ಲ ಹೋದಮೇಲೆ ಆಫೀಸಲ್ಲಿ ಸೇರ್ತಿದ್ರು...
 
ಕುಮಾರನ ಅಪ್ಪಯ್ಯ ಗೆಳೆಯರ ಕಥೆ ಕೇಳಿ
ಹುಲಿಯಂತೆ ಎಗರಾಡಿ ಆಫೀಸ್ ಬಳಿ ಬಂದಾಗ..
ಗೆಳೆಯರ ಕಂಡಾಗ..ರೋಶದಲಿ ಕೂಗಾಡಿಹಲ್ಲನ್ನು ಮಸೆದ ಸ್ನೇಹವನ್ನು ಒಡೆದ...
ಆ ಗೆಳೆಯರ ಕಥೆಯ ಅಂದಿಗೆ ಕೊನೆಯಾಯಿತು ಹೀಗೆ...
ಕೇಳದೆ ನಿಮಗೀಗ ದೂರದಲ್ಲಿ ಯಡ್ಡಿ.......

Comments