ಕೇಳಿ ಬಾ ಕಾರಣ ..ಬರುವ ...ಮೊದಲು
ಸಾಹಿತ್ಯ: ರೂಪಾ
ಭಾವಗೀತೆ ಗಳೆಂದರೆ ನನಗೆ ಅಚ್ಚು ಮೆಚ್ಚು ಹೇಳಿ ಹೋಗು ಕಾರಣ ಭಾವಗೀತೆ ಯ ಅನುಕರಣೆ ಮಾಡಿ ನನ್ನ ಈ ಕಿರು ಸಾಲುಗಳನ್ನುಹಾಡಲು ಪ್ರಯತ್ನಿಸುವಿರಾ?ಮೇರು ಪರ್ವತದ ಸಾಹಿತ್ಯದ ಎದುರು ನನ್ನ ಸಾಲುಗಳನ್ನು ಹೋಲಿಸಲಾರೆ ..just curious how it works
ಕೇಳಿ ಬಾ ಕಾರಣ ..ಬರುವ ...ಮೊದಲು
ಕೇಳಿ ಬಾ ಕಾರಣ ...ಬರುವ ...ಮೊದಲು
ಬದುಕಿನ ...ಬರಹ... ಬರಿದಾಗುವ ಬದಲು
ಕೇಳಿ ಬಾ ..ಕಾರಣ..ಬರುವ ..ಮೊದಲು ..
ನಂಬಿಕೆಯ ಬೆಳಕು ..ಮನದಲ್ಲಿ ಮಿನುಗಿ ಮರೆಯಾದೆ ನಿನ್ನೆಗೆ ... ಹೀಗೇಕೆ ನಿನ್ನೆ ..ನೆನಪನ್ನು ಮರೆತು. ತೊರೆದಿದೆ ನಿನ್ನ ಪಾಲಿಗೆ ..
ಅದ್ಯಾವ ನೀತಿ ಹರಡಿದೆ ..ನಿನ್ನ ಸೋಲಿಗೆ ...
ಅದ್ಯಾವ ನೀತಿ ಹರಡಿದೆ... ನಿನ್ನ ಸೋಲಿಗೆ ಕಹಿಸತ್ಯ ಉಳಿದು ..ನೋವಾಯ್ತೇ..
ಇನ್ನು ಇಂದಿಗೇ ....
ಇನ್ನು ಇಂದಿಗೇ ...
ಕೇಳಿ ಬಾ ...ಕಾರಣ ...ಬರುವ ಮೊದಲು ..
ನವಿರಾದ ಕನಸಿಗೆ ..ಸಿಹಿ ನೋವ ತೀಡಿ ..ನವ ಭಾವ ..ನೀಡಿದೆ ..
ವಾಸ್ತವದ ಅರಿವು ..ಎದುರಲ್ಲಿ ನಿಂತು.. ಎಡ ಬಿಡದೆ ಕಾಡಿದೆ ....
ನೀ ತಪ್ಪಿ ನಡೆದ ಆ ಮಾತು....ಮೌನ ತ...ಬ್ಬಿದೆ ಮುಂದ್ಹೇಗೆ ಬದುಕು ಉಳಿವುದು...
ಪ್ರಶ್ನೆಯ ಬಾಳಿಗೆ...
ಪ್ರಶ್ನೆಯ ಬಾಳಿಗೆ ...
ಕೇಳಿ ಬಾ ..ಕಾರಣ ..ಬರುವ ಮೊದಲು ಬದುಕಿನ ...ಬರಹ... ಬರಿದಾಗುವ ಬದಲು ಕೇಳಿ ಬಾ ಕಾರಣ ...ಬರುವ ಮೊದಲು..
—-ರೂಪಾ