ಕೇವಲ ಒಂದು ದಿನ..!!? (Valentines Day)

ಕೇವಲ ಒಂದು ದಿನ..!!? (Valentines Day)

ಕವನ

ದಿನವಿಲ್ಲ, ಕ್ಷಣವಿಲ್ಲ,

ನಮ್ಮೊಲವಿಗೆ ಹೊತ್ತಿಲ್ಲ, ಪ್ರಿಯೆ,

ನಮಗೇಕೆ ಶಕುನವು?

             ದಿನವೂ ಪ್ರೀತಿಯ ಸುಗ್ಗಿ,

             ಹಿಗ್ಗಿ ಆಚರಿಸುವ, ಪ್ರಿಯೆ,

             ನಮಗೇಕೆ ಮಾಸವು?

ನಿನ್ನ ನಾ ನೆನೆಯೋಲ್ಲ

ಏಕೆಂದರೆ ಮರೆಯೋಲ್ಲ, ಪ್ರಿಯೆ,

ನಮಗೇಕೆ ನೆನಪಿನಾಚಾರಣೆಯು?

             ಒಂದು ದಿನದ ಆರಾಧನೆ,

             ನಮದಲ್ಲವೆ, ಪ್ರಿಯೆ,

            ನಮಗೇಕೆ ಆ ಒಂದು ದಿನವು?