ಕೇವಲ ಮೂರು ದಿನದಲ್ಲಿ ಗುಜರಾತ್ ಅಭಿವೃದ್ಧಿ ಅಳೆಯೋದು ಮೂರ್ಖತನ ಅಲ್ಲವೇ?

ಕೇವಲ ಮೂರು ದಿನದಲ್ಲಿ ಗುಜರಾತ್ ಅಭಿವೃದ್ಧಿ ಅಳೆಯೋದು ಮೂರ್ಖತನ ಅಲ್ಲವೇ?

ಕಳೆದೊಂದು ವಾರದಿಂದ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಕಾಂಗ್ರೆಸ್‍ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಮೇಲ್ನೋಟಕ್ಕೆ ಅನಿಸದೇ ಇರಲಾರದು. ಕಳೆದ ವಾರ ಅರವಿಂದ ಕೇಜ್ರಿವಾಲ್ ಗುಜರಾತ್ ಅಭಿವೃದ್ದಿಯನ್ನು ಕಣ್ಣಾರೆ ನೋಡುತ್ತೇನೆಂದು ಗುಜರಾತಿಗೆ ಮೂರು ದಿನಗಳ ಪ್ರವಾಸ ಬೆಳೆಸಿದ್ದರು. ಆದರೆ ಗುಜರಾತ್ ಪ್ರವಾಸ ಮುಗಿಸಿ ಬಂದ ಕೇಜ್ರಿವಾಲ್ ಬೊಗಳೆ ಬಿಟ್ಟಿದ್ದು ಮಾತ್ರ ಅಷ್ಟಿಷ್ಟಲ್ಲ. 
ಕೇಜ್ರಿವಾಲ್ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದೇ ನಾನು ಯಾವತ್ತೂ ರಾಜಕಾರಣಕ್ಕೆ ಬರೊಲ್ಲ ಎಂಬ ಸುಳ್ಳು ಹೇಳಿಕೆಗಳ ಮೂಲಕ. ಅಣ್ಣಾ ಹಜಾರೆಯವರ ಪರಿಶ್ರಮವನ್ನೆಲ್ಲ ಹ್ಶೆಜಾಕ್ ಮಾಡಿದ ಕೇಜ್ರಿವಾಲ್ ದೆಹಲಿ ಮುಖ್ಯಮಂತ್ರಿಯಾಗಿದ್ದೇ ಜನರನ್ನು ಹಾದಿ ತಪ್ಪಿಸುವ ಹೇಳಿಕೆಗಳಿಂದ. ಕೊಟ್ಟ ಕುದುರೆಯನೇರಲರಿಯದವ ಶೂರನೂ ಅಲ್ಲ, ಧೀರನೂ ಅಲ್ಲ ಅನ್ನುವಂತೆ ಮುಖ್ಯಮಂತ್ರಿ ಜವಾಬ್ದಾರಿಯಿಂದ ಓಡಿ ಹೋದ ಕೇಜ್ರಿವಾಲ್ ಮತ್ತದೇ ಸುಳ್ಳು ಹೇಳಿಕೆಗಳಿಂದ ಜನರ ಹಾದಿ ತಪ್ಪಿಸಿದ. ಕಾಂಗ್ಸೆಸ್‍ನ ಶೀಲಾ ದಿಕ್ಷಿತ್ ವಿರುದ್ಧ ಆಪಾಧನೆ ಮಾಡುತ್ತಲೇ ಬೆಳೆದ ಅರವಿಂದ ಕೇಜ್ರಿವಾಲ್ ಅದೇ ಪಕ್ಷದ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿ ಜನರ ಕಣ್ಣಿಗೆ ಮಣ್ಣರಚಿದ್ದಷ್ಟೇ ಅಲ್ಲ ಶಿಲಾ ದಿಕ್ಷಿತ್ ವಿರುದ್ಧ ಕ್ರಮ ಕೈಗೊಳ್ಳಲು ಸಾಕ್ಷಿಗಳೇ ಇಲ್ಲ ಎಂದ.

ಹೀಗೆ ಸುಳ್ಳುಗಳ ಸರಮಾಲೆಯನ್ನೇ ಸೃಷ್ಟಿಸುತ್ತ ಬಂದ ಅರವಿಂದ ಕೇಜ್ರಿವಾಲ್ ಈಗ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೇಲೆ ಮುಗಿಬಿದ್ದಿದ್ದಾನೆ. ಲಕ್ಷ ಲಕ್ಷ ಕೋಟಿ ಹಗರಣಗಳು ನಡೆಯಲು ಮೂಖ ಸಾಕ್ಷಿಯಾಗಿರುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಇತರ ಕಾಂಗ್ರೆಸ್ ನಾಯಕರ ವಿರುದ್ಧ ಯಾವುದೇ ಪ್ರತಿಕ್ರಿಯೆಯನ್ನು ಅರವಿಂದ ಕೇಜ್ರಿವಾಲ್ ನೀಡದೇ ಇರುವುದು ಅವರ ಭ್ರಷಾಚಾರದ ವಿರುದ್ಧದ ಹೋರಾಟದ ಬಗ್ಗೆ ಜನರಲ್ಲಿ ಸಂದೇಹ ಮೂಡುವಂತಾಗಿದೆ. 
ಕೇವಲ ನಾಲ್ಕು ದಿನಗಳಲ್ಲಿ ಗುಜರಾತನ್ನು ಪೂರ್ತಿಯಾಗಿ ಅಧ್ಯಯನ ಮಾಡಲು ಸಾಧ್ಯವೇ? ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎನ್ನುವಂತೆ, ಕಾಮಾಲೆ ಕಣ್ಣಿನಿಂದ ಗುಜರಾತನ್ನು ನೋಡಲು ಹೊರಟ ಕೇಜ್ರಿವಾಲ್‍ಗೆ ಅಲ್ಲಿ ಕಂಡಿರುವುದು ಹಳದಿಯೇ. ವಿಶಾಲ ಹೃದಯದಿಂದ, ಅರಿಯುವ ಮನಸ್ಸಿನಿಂದ ಹೋಗಿದ್ದರೆ ಗುಜರಾತಿನ ನಿಜವಾದ ಅಭಿವೃದ್ದಿ ಕಣ್ಣಿಗೆ ಕಾಣುತ್ತಿತ್ತು. ನಿದ್ದೆ ಮಾಡುತ್ತಿರುವವನನ್ನು ಎಬ್ಬಿಸಬಹುದು, ಆದರೆ ನಿದ್ರೆ ಮಾಡುವವನಂತೆ ನಟಿಸುತ್ತಿರುವವನನ್ನು ಎಬ್ಬಿಸುವುದು ಕಷ್ಟ. ಗುಜರಾತ್ ಅಭಿವೃದ್ಧಿ ಬಗ್ಗೆ ಗೊತ್ತಿಲ್ಲದವನಿಗೆ ತಿಳಿಹೇಳಬಹುದು ಆದರೆ ಗುಜರಾತ್ ಅಭಿವೃದ್ದಿ ಬಗ್ಗೆ ನಿಜ ಗೊತ್ತಿದ್ದೂ, ಗೊತ್ತಿಲ್ಲದವನಂತೆ ಸುಳ್ಳು ನಟನೆ ಮಾಡುವ ಕೇಜ್ರಿವಾಲ್ ವಿರುದ್ಧ ಮಾತನಾಡುವುದು ಕಲ್ಲಿನ ಮೇಲೆ ನೀರು ಸುರಿದಂತೆ. ಆದ್ದರಿಂದಲೇ ನರೇಂದ್ರ ಮೋದಿ ಯಾವುದೇ ಹೇಳಿಕೆ ನೀಡದೇ ಸುಮ್ಮನಿರುವುದು. ಆದರೆ ಅದನ್ನೇ ಅಸ್ತ್ರ ಮಾಡಿಕೊಂಡ ಕೇಜ್ರಿವಾಲ್, ಗುಜರಾತ್ ಮುಖ್ಯಮಂತ್ರಿ ಏನು ಅಭಿವೃದ್ದಿ ಮಾಡಿದ್ದಾರೆ ಹೇಳಲಿ ಎಂದು ಹೇಳಿಕೆ ನೀಡುತ್ತಿರುವುದು.
ನರೇಂದ್ರ ಮೋದಿ ಸಾಮಥ್ರ್ಯದ ಬಗ್ಗೆ ಮಾತನಾಡುವ ಅರವಿಂದ ಕೇಜ್ರಿವಾಲ್‍ರ ಸಾಮಥ್ರ್ಯವನ್ನು ದೇಶದ ಜನರೆಲ್ಲ ನೋಡಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸುವ ಸಾಮಥ್ರ್ಯವಿರದೇ ಪದತ್ಯಾಗ ಮಾಡಿದ ಕೇಜ್ರಿವಾಲ್‍ಗೆ ಮತ್ತೊಬ್ಬರ ಸಾಮಥ್ರ್ಯದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ? ಆಮ್ ಆದ್ಮಿ ಪಕ್ಷ ರಚನೆಯಾದಾಗಿನಿಂದ ಒಂದಿಲ್ಲೊ ಂದು ಗಲಭೆ, ಗಲಾಟೆ. ಎಲ್ಲದರ ಬಗ್ಗೆಯೂ ನಕಾರಾತ್ಮಕ ಚಿಂತನೆಯೇ. ಪ್ರತಿಯೊಂದರಲ್ಲೂ ಕಲ್ಲನ್ನು ಹುಡುಕುವುದೇ ಕೆಲಸ. ಅದೇ ರೀತಿ ಗುಜರಾತಿನ ವಿಷಯದಲ್ಲಿ ಕೇಜ್ರಿ ಟೀಮ್ ಅದೇ ನಿಲುವು ತಳೆದಿದೆ. ಗುಜರಾತಿನ ಅಭಿವೃದ್ದಿಯ ಬಗ್ಗೆ ಹಲವಾರು ಭಾರಿ ಗುಜರಾತಿನ ಜನ ಸ್ಪಷ್ಟ ತೀರ್ಪು ನೀಡಿದ್ದಾರೆ. ಗುಜರಾತಿನ ಜನ ನರೇಂದ್ರ ಮೋದಿಯ ನಿಜವಾದ ಸಾಮಥ್ರ್ಯ ಕಂಡಿದ್ದಾರೆ. ಆದ್ದರಿಂದಲೇ ಪ್ರತಿ ಚುಣಾವಣೆಯಲ್ಲಿಯೂ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಹೆಚ್ಚಿನ ಮತಗಳ ಅಂತರದಿಂದ ಜಯಭಾರಿ ಭಾರಿಸುತ್ತಿದೆ. ಆದರೆ ಕೇವಲ ನಾಲ್ಕು ದಿನಗಳಲ್ಲಿಯೇ ಗುಜರಾತಿನ ಅಭಿವೃದ್ದಿಯ ಮೌಲ್ಯಮಾಪನ ಮಾಡಿರುವುದು ದೊಡ್ಡ ಹಾಸ್ಯಸ್ಪದದ ಸಂಗತಿ. ನನಗನಿಸುವ ಹಾಗೆ ಕೇಜ್ರಿವಾಲ್ ಗುಜರಾತಿನ ಕಟ್ಟಾ ಕಾಂಗ್ರೆಸ್ಸಿಗರ ಮನೆಗೆ ಬೇಟಿ ನೀಡಿದ್ದಾರೆ. ಅದಕ್ಕಾಗಿಯೇ ಅವರಿಗೆ ನಕಾರಾತ್ಮಕ ಸಂಗತಿಗಳೇ ಗಮನಕ್ಕೆ ಬಂದಿವೆ. ಅದರ ಬದಲಿಗೆ ಒಬ್ಬ ಸಾಮಾನ್ಯ ಗುಜರಾತಿಯ ಮನೆಗೆ ಬೇಟಿ ನೀಡಿದ್ದರೆ ನಿಜವಾದ ಅಭಿವೃದ್ದಿ ಗಮನಕ್ಕೆ ಬರುತ್ತಿತ್ತು. 
ಅರವಿಂದ ಕೇಜ್ರಿವಾಲ್ ಇಷ್ಟು ದಿನ ನಿದ್ದೆಯಲ್ಲಿದ್ದರಾ? ಅವರಿಗೆ ಗುಜರಾತ್ ಅಭಿವೃದ್ದಿ ಈಗ ನೆನಪಿಗೆ ಬಂದಿರುವುದಾದರೂ ಏಕೆ? ಇದು ವೋಟ್ ಬ್ಯಾಂಕ್‍ಗೋಸ್ಕರ ಮಾಡುತ್ತಿರುವ ಸ್ಟಂಟ್ ಅಲ್ಲವಾ? ಗುಜರಾತ್ ಪ್ರವಾಸದಿಂದ ಕೇಜ್ರಿವಾಲ್‍ಗೆ ಸಾಕಷ್ಟು ಪ್ರಚಾರ ಮಾತ್ರ ಸಿಕ್ಕಿತು. ಜೊತೆಗೆ ಮಾತನಾಡಲಷ್ಟು ವಿಷಯ. ನಾನು ಗುಜರಾತನ್ನು ಕಣ್ಣಾರೆ ಕಂಡಿದ್ದೇನೆ, ಅಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಆಗಿಲ್ಲ ಎಂದು ಇನ್ನು ಮುಂದೆ ಮೈಕ್ ಮುಂದೆ ಚೀರಿ ಚೀರಿ ಸುಳ್ಳು ಹೇಳಬಹುದು. 
ಕೇಜ್ರಿವಾಲ್‍ಗೆ ಈ ದೇಶದ ಕಾನೂನುಗಳ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ ಎಂಬುದು ಅವರ ಗುಜರಾತ್ ಪ್ರವಾಸದಿಂದ ಕಂಡುಬಂದಿರುವ ಸಂಗತಿ. ದೇಶದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದು ಗೊತ್ತಿದ್ದರೂ ಗುಜರಾತ್‍ನಲ್ಲಿ ಪೊಲೀಸರ ಅನುಮತಿ ಇಲ್ಲದೇ ರ್ಯಾಲಿ ನಡೆಸಿದ್ದು ತಪ್ಪು. ಈ ಕಾರಣದಿಂದ ಪೊಲೀಸರು ಅವರನ್ನು ತಡೆಯಲು ಮುಂದಾದಾಗ ಅದನ್ನು ವಿರೋಧಿಸಿ ಆಪ್ ಕಾರ್ಯಕರ್ತರು ಪೊಲೀಸರ ಜೊತೆ ಜಗಳಕ್ಕಿಳಿದದ್ದು ತಪ್ಪು. ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಆರೋಪದ ಮೇಲೆ ಪೋಲಿಸರು ಕೇಜ್ರಿವಾಲ್‍ನನ್ನು ಬಂಧಿಸಿದಾಗ ಆಪ್ ಕಾರ್ಯಕರ್ತರು ದೆಹಲಿಯ ಬಿಜೆಪಿ ಕಚೇರಿಯ ಮುಂದೆ ಕಲ್ಲು ತೂರಾಟ ನಡೆಸಿದರು. ಕೇಜ್ರಿವಾಲ್‍ರ ಬಂಧನ ಮಾಡಿಸಿದ್ದೇ ಮೋದಿ ಎಂದು ಸುಳ್ಳು ಪ್ರಚಾರ ಮಾಡಲಾಯಿತು. ದೆಹಲಿ ಸೇರಿದಂತೆ ಹಲವಾರು ಕಡೆ ಬಿಜೆಪಿ ಕಾರ್ಯಕರ್ತರ ಜೊತೆ ಸಂಘರ್ಷಕ್ಕಿಳಿದ ಆಪ್ ಕಾರ್ಯಕರ್ತರು ಆ ತಪ್ಪನ್ನೆಲ್ಲ ಬಿಜೆಪಿ ಕಾರ್ಯಕರ್ತರ ಮೇಲೆ ಹಾಕಿದರು. ಇದು ಜನರ ಗಮನಕ್ಕೆ ಬರುವುದಿಲ್ಲ ಎಂದು ಕೇಜ್ರಿವಾಲ್ ತಿಳಿದಂತಿದೆ.
ತನ್ನ ಹದಿನಾರು ಪ್ರಶ್ನೆಗಳಿಗೆ ಮೋದಿ ಉತ್ತರ ನೀಡಬೇಕೆಂದು ಅವರನ್ನು ನೇರವಾಗಿ ಕಾಣಲು ಕೇಜ್ರಿವಾಲ್ ಹೊರಟಿದ್ದೂ ಒಂದು ಹಾಸ್ಯಾಸ್ಪದ ಸಂಗತಿ. ಈ ಪ್ರಶ್ನೆಗಳು ಚುಣಾವಣಾ ಸಮಯದಲ್ಲೇ ಏಕೆ ನೆನಪಿಗೆ ಬಂದವು ಎಂಬುದೇ ಜನರ ಪ್ರಶ್ನೆ. ಒಬ್ಬ ಮುಖ್ಯಮಂತ್ರಿಯನ್ನು ಬೆಟ್ಟಿಯಾಗಲು ಪೂರ್ವಾನುಮತಿ ಪಡೆಯಬೇಕೆಂಬ ಕಿಂಚಿತ್ತು ಜ್ಞಾನ ಕೇಜ್ರಿವಾಲ್‍ಗೆ ಇಲ್ಲವೇ? ಕಾನೂನಿಗೆ ವಿರುದ್ಧವಾಗಿ ವರ್ತನೆ ಮಾಡೋದು ಸರಿಯೇ?
ಅಷ್ಟಕ್ಕೂ ಕೋಟಿ ಕೋಟಿ ಹಗರಣಗಳ ಸರದಾರರಾದ ಕಾಂಗ್ರೆಸ್ಸಿಗರ ಬಗ್ಗೆ ಏಕೆ ಕೇಜ್ರಿವಾಲ್ ದ್ವನಿ ಎತ್ತುತ್ತಿಲ್ಲ? ಕಾಂಗ್ರೆಸ್ ಜೊತೆ ಒಳ ಒಪ್ಪಂದವನ್ನೇನಾದರೂ ಕೇಜ್ರಿವಾಲ್ ಮಾಡಿಕೊಂಡಿದ್ದಾರಾ? ಕೇಜ್ರಿವಾಲ್‍ರಿಗೆ ನಿಜಕ್ಕೂ ಈ ದೇಶದ ಜನರ ಬಗ್ಗೆ ಕಳಕಳಿ ಇದ್ದರೆ ಕಾಶ್ಮೀರಕ್ಕೆ ಭೇಟ್ಟಿ ನೀಡಿ ಅಲ್ಲಿನ ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆಯೂ ಧ್ವನಿ ಎತ್ತಲಿ ನೋಡೋಣ. ಹಾಗೇನಾದರೂ ಮಾಡಿದ್ರೆ ಈ ಸಲದ ನನ್ನ ಮತ ಆಪ್‍ಗೆ!
 By:
Basavaraj Kulali
M.Tech 4th sem
VTU Belgaum
 

Comments

Submitted by kavinagaraj Mon, 03/10/2014 - 14:33

ಕೆಟ್ಟವರು ಕೆಟ್ಟ ಕೆಲಸಗಳನ್ನು ಮಾಡುವುದರಲ್ಲಿ ವಿಶೇಷವಿಲ್ಲ. ಆದರೆ, ಏನೋ ಒಳ್ಳೆಯದನ್ನು ಮಾಡುತ್ತಾರೆಂದು ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಭ್ರಮನಿರಸನ ಮಾಡಿದ ಕೇಜ್ರಿವಾಲರ ನಡವಳಿಕೆ ಭ್ರಷ್ಠಾಚಾರದ ವಿರುದ್ಧದ ಹೋರಾಟಕ್ಕೆ ಒಂದು ದೊಡ್ಡ ಹಿನ್ನಡೆ ಎನಿಸುತ್ತದೆ.