ಕೈಯ್ಯಿ

0

ವೃತ್ತಿಯಿಂದ ನಿವೃತ್ತಿಯಾದರು ಅತ್ರಿ
ಅಂದಿನಿಂದ ಅವರ ಜೀಬಿಗೆ ಬಿತ್ತು ಕತ್ರಿ
ದಿನಗಳು ಉರುಳಿದವು, ಎಲ್ಲಿ ನಿಮ್ಮ ಪಿಂಚಣಿ
ಎಂದಳು ರಾಯರ ಐವತ್ತರ ಹೃದಯ ರಾಣಿ

ಅರ್ಜಿ ಸಲ್ಲಿಸಿ ತಿಂಗಳುಗಳಾದರೂ ಸುಮ್ಮನಿತ್ತು ಸರಕಾರೀ treasury
ಉತ್ತರ ಸಿಗದೇ ದಿಕ್ಕು ತೋಚದೆ ರಾಯರಿಗೆ ಆಯಿತು ತುಂಬಾ worry
ಕೆಲಸದ ಕೊನೆಯ ದಿನ ಮಿತ್ರರು ಕೊಡಿಸಿದ ಹೊಸ ಬೂಟು ಜ್ಞಾಪಕಕ್ಕೆ ಬಂತು
ಓಪನ್ ಮಾಡಿದಾಗ ಹೊಚ್ಚ ಹೊಸ ಬೂಟು ಇಣುಕಿ ನನ್ನನು ಧರಿಸು  ಅಂತು

ಇನ್ನುಯೇನು  ಬಿದ್ದು ಹೋಗುವುದೋ ಅನ್ನುವ ಕಟ್ಟಡದೊಳಗೆ ಪ್ರವೇಶ
ನಿಂತು ನೋಡಲು ಕಣ್ಣಿಗೆ ಕಾಣಿಸಿತು ಸರಕಾರೀ ಕಛೇರಿಯ ರಮಣೀಯ ದೃಶ್ಯ
polish ಹೋಗಿದ್ದ ಹಳೆ ಮೇಜು
ಅದರಮೇಲೆ  ಜೀವಜಂತುಗಳ  ಮೋಜು

ಹಳೆಯ ಕಡಿತಗಳು ಹೇಳುತಿದ್ದಂತೆ ಇತ್ತು ಅದರ ಗೋಳು
ನನ್ನನು ಯಾರು ನೋಡಲಂತಾಗದೆ  ಆವರಿಸಿದೆ  ಧೂಳು
ರಾಯರು ನೋಡುತ್ತಿದಂತೆ ಕಡೆತಗಳ ಮಧ್ಯೆ ಕೆರೆಯುತ ಬಂದಿತು ಒಂದು ಕೈಯ್ಯಿ
ಗರಿ ಗರಿ ಗಾಂಧಿ ಹಾಳೆಗಳನ್ನು  ಇಟ್ಟರೆ ಎಂಥ ಕೆಲಸಕ್ಕೂ ನಾನು ಸಯ್ಯಿ

ಶಿಸ್ತಿನ ಸಿಪಾಯಿ ಆದ ರಾಯರು ಧಿಕ್ಕರಿಸಿದರು ಆ ಕೈಯನ್ನು
ಪಿಂಚಣಿ ಸಿಗದೇ ವಯಸ್ಸಾಗಿ ಅಲೆಯುತಿದ್ದಾರೆ ಇನ್ನು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.