ಕೈ ಕಟ್ಟಿ ಕುಳಿತರೆ ಆಗದು ನಿನ್ನಿಂದ ಸಾಧನೆ...

ಕೈ ಕಟ್ಟಿ ಕುಳಿತರೆ ಆಗದು ನಿನ್ನಿಂದ ಸಾಧನೆ...

ಕವನ

ದಾರಿಗಳು ನಮ್ಮ ದಾರಿಗಳು

ಬದುಕಿನ ಬಗೆಗೆ ದಾರಿಗಳು

ಚಿಂತೆಗಳು ಬರಿ ಚಿಂತೆಗಳು

ದಾರಿ ಉದ್ದಕ್ಕೂ ಚಿಂತನೆಗಳು

 

ಜೀವನ ಎಂದರೆ ಹಣವಲ್ಲ

ಹಣವಿದ್ದರೆ ಜೀವನವಲ್ಲ

ಹಣ ಇದ್ದರೂ ತೊಂದರೆ

ಇಲ್ಲದಿದ್ದರೂ ತೊಂದರೆ

 

ಗೊಂದಲ ಬರಿ ಗೊಂದಲ

ತಲೆ ತುಂಬಾ ಗೊಂದಲ

ಚಿಂತಿಸಿ ಬಾರಿ ಚಿಂತಿಸಿ

ಕಾಣದು ಮುಂದೆ ದಾರಿ ಕಾಣದು

 

ಕಷ್ಟ ಬರಲಿ ದುಃಖಗಳು

ಆದರೆ ಆಗಲಿ ನೋವುಗಳು 

ಬರಲಿ ನೆಮ್ಮದಿಯ ಚಿಂತನಗಳು

ಹೊರಗೆ ಬರಲಿ ಧೈರ್ಯದ ಮಾತುಗಳು

 

ಕೈ ಕಟ್ಟಿ ಕುಳಿತರೆ

ಆಗದು ನಿನ್ನಿಂದ ಸಾಧನೆ

ಸಹನೆ ನಿನ್ನೊಳಗೆ ಇದ್ದರೆ

ಮಾಡೆ ಮಾಡುವೆ ಸಾಧನೆ

 

-ಎಚ್.ವ್ಹಿ.ಈಟಿ., ಸಾ.ನರೇಗಲ್ಲ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್