ಕೈ ಜೋಡಿಸೋಣ
ಕವನ
ಉಳಿಸೋಣ ಉಳಿಸೋಣ
ನೀರಿನ ಮೂಲವ ಉಳಿಸೋಣ
ಹಿತ ಮಿತವಾಗಿ ಬಳಸೋಣ
ಎಲ್ಲರೊಂದಾಗಿ ಕೈ ಜೋಡಿಸೋಣ
ಸೋಗೆ ಮುಳಿಹುಲ್ಲು ಹೋಯ್ತಲ್ಲ
ಹಂಚಿನ ಮಾಡು ಬೇಡವಲ್ಲ
ಕಾಂಕ್ರೀಟ್ ಮನೆಯೇ ಬೇಕಲ್ಲ
ಫಲವ ಈಗ ಕಾಣ್ತೇವಲ್ಲ
ಮಳೆಯ ನೀರು ದೇವರ ಕೊಡುಗೆ
ಉಳಿಸುತ ನಡೆಯೋಣ ಅದರ ಕಡೆಗೆ
ಹನಿಹನಿ ನೀರು ಪೋಲುಮಾಡದೆ
ಜಲಸಂರಕ್ಷಣೆ ಮಾಡುವ ನಡಿಗೆ
ಮನೆಯ ಎದುರು ಗಿಡಗಳ ನೆಟ್ಟು
ನೀರು ಗೊಬ್ಬರ ಹಾಕಿ ಪೋಷಿಸಿ
ಅಂದ ಚಂದವ ನೋಡೋಣ
ಸುಂದರ ನಗುವನು ಕಾಣೋಣ
ಹಸಿರೇ ಉಸಿರು ಎನ್ನೋಣ
ಉಸಿರಲಿ ಜೀವವು ಇದೆಯಣ್ಣ
ಆರೋಗ್ಯ ಭಾಗ್ಯವ ಪಡೆಯೋಣ
ನೆಮ್ಮದಿ ಬಾಳು ಬದುಕೋಣ
-ರತ್ನಾ ಕೆ.ಭಟ್, ತಲಂಜೇರಿ
(ಮಾರ್ಚ್ ೨೨ ವಿಶ್ವ ಜಲದಿನ)
ಚಿತ್ರ್