ಕೊಂಕಣಿಯಲ್ಲೂ ಲೇಖನ, ದೇವರ ಹಾಡು, ಕಥೆ, ಸಂಭಾಷಣಾ ರೂಪ ಇದನ್ನು ಬರೆಯಬಹುದೇ?

ಕೊಂಕಣಿಯಲ್ಲೂ ಲೇಖನ, ದೇವರ ಹಾಡು, ಕಥೆ, ಸಂಭಾಷಣಾ ರೂಪ ಇದನ್ನು ಬರೆಯಬಹುದೇ?

Comments

ಬರಹ

ನಮ್ಮ ಕೊಂಕಣಿಯಲ್ಲೂ ಈಗ ತುಂಬಾ ಪುಸ್ತಕಗಳು ಪ್ರಕಟವಾಗುತ್ತವೆ. ನಮ್ಮ ಕೊಂಕಣಿ ಭಾಷೆ ಮಾತನಾಡುವವರು ಎಲ್ಲಾ ಧರ್ಮದಲ್ಲೂ ಇದ್ದಾರೆ. ಕೊಂಕಣಿಗರು- ಗೌಡ ಸಾರಸ್ವತ ಬ್ರಾಹ್ಮಣರು, ಸಾರಸ್ವತರು, ಕ್ರೈಸ್ತರು, ಮುಸ್ಲಿಮರು, ಕುಡುಬಿಗಳು, ಗೋವಾದಲ್ಲಿರುವ ಎಲ್ಲರೂ ಹೀಗೆ ಕೊಂಕಣಿ ಭಾಷೆ ತುಂಬಾ ಜನಮಾತನಾಡುತ್ತಾರೆಂದು ಅದಕ್ಕೆ ಸಂವಿಧಾನದಲ್ಲೂ ಸ್ಥಾನ ಸಿಕ್ಕಿದೆ. ವಿಶ್ವಕೊಂಕಣಿ ಸಮ್ಮೇಳನ ನಡೆದಿದೆ. ಹಲವಾರು ದೇಶಗಳಲ್ಲಿ ನಮ್ಮ ಕೊಂಕಣಿ ಮಾತನಾಡುವ ಜನರು ಇದ್ದಾರೆ. ತುಳು ಕೊಂಕಣಿ ಸಾಹಿತ್ಯ ಅಕಾಡಮಿಯು ಸ್ಥಾಪನೆಯಾದಂದಿನಿಂದ ಹಲವಾರು ಕೊಂಕಣಿ ಪುಸ್ತಕಗಳು ಪ್ರಕಟವಾಗಿರುತ್ತದೆ. ನಮ್ಮ ಜಿಲ್ಲೆಯಲ್ಲಿ ಕೊಂಕಣಿಯನ್ನು ಶಾಲೆಗಳಲ್ಲೂ ಕಲಿಸುತ್ತಿದ್ದಾರೆ. ಕೊಂಕಣಿಗೆ ಕನ್ನಡಲಿಪಿ ಮತ್ತು ದೇವನಾಗರಿ ಲಿಪಿಯನ್ನು ಉಪಯೋಗಿಸುತ್ತಿದ್ದಾರೆ. ಕೊಂಕಣಿ ನಿಘಂಟನ್ನು ಅಭಿವೃದ್ಧಿ ಪಡಿಸಲು ಪ್ರಯತ್ನಗಳು ನಡೆಯುತ್ತಾ ಇದೆ.
ನಾನು ಕೊಂಕಣಿಗನಾದರೂ ಕೊಂಕಣಿಯಲ್ಲಿ ಮಾತನಾಡುವುದು ಮಾತ್ರ ಗೊತ್ತಲ್ಲದೇ ಬರಹ ರೂಪದಲ್ಲಿ
ಕೊಂಕಣಿಯನ್ನು ಬರೆಯಲು ಸುರುಮಾಡು ವಿಚಾರವಿದೆ. ಆದರೆ ನಮ್ಮ ಕೊಂಕಣಿ ಭಾಷೆ ಮಾತನಾಡುವ ಎಲ್ಲಾ ಜನರು ಒಂದೇ ರೀತಿಯಲ್ಲಿ ಮಾತನಾಡುವುದಿಲ್ಲಾ. ಉಚ್ಚಾರದಲ್ಲಾಗಲೀ, ಬರಹದಲ್ಲಾಗಲೀ ಬೇರೆ ಬೇರೆ ಕಡೆ ವಾಸಿಸುವವರು ಬೇರೆ ಬೇರೆ ರೀತಿಯಲ್ಲಿ ಮಾತನಾಡುತ್ತಾರೆ. ಕೊಚ್ಚಿ, ಮಂಗಳೂರು , ಉಡುಪಿ, ಕುಂದಾಪುರ, ಉತ್ತರ ಕನ್ನಡ, ಗೋವಾ ದಲ್ಲಿ ವಾಸಿಸುವ ಗೌಡಸಾರಸ್ವತರು ಮಾತನಾಡುವುದರಲ್ಲಿ ವ್ಯತ್ಯಾಸಗಳಿವೆ. ಹಾಗೆ ಕ್ರೈಸ್ತರ ಕೊಂಕಣಿಗೂ ಗೌಡ ಸಾರಸ್ವತರ ಕೊಂಕಣಿಗೂ ವ್ಯತ್ಯಾಸವಿದೆ. ಭಟ್ಕಳದಲ್ಲಿರುವ ಮುಸ್ಲಿಮರು, ಉತ್ತರ ಕನ್ನಡದಲ್ಲಿರುವ ಹಲವಾರು ಪಂಗಡದವರು ಕೂಡಾ (ಕುಡುಬಿ ಜನಾಂಗ ಮುಂತಾದವರು) ಮಾತನಾಡುವ ಕೊಂಕಣಿ ಬೇರೆ ಬೇರೆಯಾಗಿರುತ್ತದೆ. ಇದಕ್ಕೆಲ್ಲಾ ಒಂದೇ ರೀತಿಯ ರೂಪಕೊಡುವ ಸಲುವಾಗಿ ಕೆಲಸಗಳು ನಡೆಯುತ್ತಿವೆ. ೧೯೯೫ರಲ್ಲಿ ಮಂಗಳೂರಿನಲ್ಲಿ ಏಳು ದಿವಸಗಳ ವಿಶ್ವಕೊಂಕಣಿ ಸಮ್ಮೇಳನ ನಡೆದಿತ್ತು. ಅದಕ್ಕೆ ಸಹಸ್ರಾರು ಕೊಂಕಣಿಗರು (ಕೊಂಕಣಿ ಮಾತನಾಡುವ ಎಲ್ಲಾ ಧರ್ಮದವರು) ಭಾಗವಹಿಸಿ ಅಲ್ಲಿ ತೆಗೆದುಕೊಂಡ ತೀರ್ಮಾನದಂತೆ ಮಂಗಳೂರಿನ ಶಕ್ತಿನಗರದಲ್ಲಿ "ಕೊಂಕಣಿ ಗಾಂವ್" ನಲ್ಲಿ ೨ ಕೋಟಿ ರೂ. ವೆಚ್ಚದಲ್ಲಿ 'ವಿಶ್ವ ಕೊಂಕಣಿ ಕೇಂದ್ರ' ಒಂದು ಬೃಹತ್ ಕಟ್ಟಡ ಎದ್ಧು ನಿಂತಿದೆ. ಉದ್ಘಾಟನೆಯ ಸಮಯಕ್ಕೆ ಕ್ಷಣಗಣನೆ ಸುರುವಾಗಿದೆ. ಕೊಂಕಣಿ ಸಾಹಿತ್ಯವನ್ನು ವಿಶ್ವದಾದ್ಯಂತ ತಲಪಿಸುವ ನಿಟ್ಟಿನಲ್ಲಿ ದೇಶದ ನಾನಾ ಕಡೆ ವಾಸಿಸಿರುವ ಅತ್ಯುತ್ತಮ ಕೊಂಕಣಿ ಸಾಹಿತಿಗಳನ್ನು ಸದಸ್ಯರನ್ನಾಗಿ ಮಾಡಿ ಹಿಂದಿ, ಇಂಗ್ಲೀಷ್ ಮತ್ತು ದೇಶದ ಇತರ ಭಾಷೆಗಳಿಗೆ ಭಾಷಾಂತರಿಸುವ ಯೋಜನೆ ಹಾಕಿಕೊಂಡಿರುವ "ವಿಶ್ವ ಸಾಹಿತ್ಯ ಕೊಂಕಣಿ ಅಕಾಡಮಿ" ರೂ.೪೦ ಲಕ್ಷ ವೆಚ್ಚದಲ್ಲಿ ' ಬೃಹತ್ ವಿಶ್ವ ಕೊಂಕಣಿ ಪರಿಚಯ ಕೋಶ'ವನ್ನು ಮೂರು ಸಂಪುಟಗಳಲ್ಲಿ ಪ್ರಕಟಿಸುವ ಕಾರ್ಯವನ್ನು ಪ್ರಾರಂಭಿಸಿದೆ.
ವಿಶ್ವ ಕೊಂಕಣಿ ಅಭಿಯಾನ ಯೋಜನೆ ಮೊನ್ನೆ ದೇಶದ ರಾಜಧಾನಿ ದಿಲ್ಲಿಯಲ್ಲಿ ಉದ್ಘಾಟನೆಗೊಂಡು ಅಲ್ಲಿಂದ ದೇಶದ ಹಲವಾರು ನಗರಗಳಲ್ಲಿ ಕೊಂಕಣಿ ಸಾಹಿತಿಗಳ 'ಮುಲಾಖಾತ್' ನಡೆಸುವ ನಿಟ್ಟಿನಲ್ಲಿ
ಕಾರ್ಯವನ್ನು ಆರಂಭಿಸಿದೆ. ಇಷ್ಟೇಲ್ಲಾ ಕಾರ್ಯವು ಉತ್ಸಾಹದಿಂದ ಮಾಡುತ್ತಿರುವ ನವತರುಣ ೭೫ರ ಹರಯದ ವಿಶ್ವ ಕೊಂಕಣಿ ಕೇಂದ್ರದ ರುವಾರಿ ಬಸ್ತಿ ವಾಮನ ಶೆಣೈ ಯವರು.

ಇಷ್ಟೆಲ್ಲಾ ಉತ್ಸಾಹದಿಂದ ಕೆಲಸ ಮಾಡುತ್ತಿರುವ ಇವರು ಇಂದು ಅಂದರೆ ೨೮-೧೦-೨೦೦೮ರಂದು ತಮ್ಮ ಪತ್ನಿಯನ್ನು ಅಗಲಿರುತ್ತಾರೆ. ಅವರಿಗೆ ದೇವರು ಈ ದುಃಖವನ್ನು ಸಹಿಸುವ ಮತ್ತು ಇನ್ನು ಮುಂದೆಯೂ ಕೊಂಕಣಿ ಕಾರ್ಯವನ್ನು ಮುನ್ನಡೆಸಲು ಶಕ್ತಿಯನ್ನು ಕೊಡಲಿ ಎಂದು ಕೊಂಕಣಿಗರೆಲ್ಲಾ ಹಾರೈಸುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet