ಕೊಂಚ ಸೈರಿಸು ಬಾಲೆ
ಕವನ
ಎಳೆಯ ಬಾಲೆಯು ಕರದಲಿರುವುದು
ಎಳೆಯ ಮಾವಿನ ಮಿಡಿಗಳು
ಕಿತ್ತು ತಂದಳೆ,ಹೇಗೆ ದೊರೆಯಿತು
ಮಾವು ಮಿಡಿಗಳ ಗೊಂಚಲು
ಒಂದು ಮಿಡಿಯನು ಬಾಯಲಿಟ್ಟಳು
ಮುದ್ದು ಮುಖದಲಿ ನಗುವಿದೆ
ಮುಗ್ಧ ಬಾಲೆಯು ಮಿಡಿಯ ಕಡಿದರೆ
ಮೇಣವಿರುವುದು ಅರಿಯದೆ?
ಕೊಂಚ ಸೈರಿಸು ಚೂರಿ ಜೊತೆಯಲಿ
ಉಪ್ಪಿನೊಂದಿಗೆ ಬರುವೆನು
ಹೋಳನಾಗಿಸಿ ಉಪ್ಪು ಬೆರೆಯಿಸಿ
ನಿನಗೆ ತಿನ್ನಲು ಕೊಡುವೆನು||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್