ಕೊಂಚ ಹಳೆಯದು
ಕವನ
ಒಂದು ಕಾಲದಿ ಮೆರೆದ ಮನೆಯಿದು
ಚಂದ ಪ್ರಕೃತಿಯು ಸುತ್ತಲು
ಬಂಧು ಬಳಗವು ಸೇರಿ ನಲಿದಿಹ
ಬಂಧ ಬೆಳೆಸಿದ ದೇಗುಲ
ಹೆಂಚು ಹಾಸಿದ ಸೂರು ಮೇಲ್ಗಡೆ
ಅಂಚು ಸುಂದರ ಕಂಡಿದೆ
ಸಂಚು ಮತ್ಸರವಿರದ ತಾಣವು
ಕೊಂಚ ಹಳೆಯದು ಇಂದಿಗೆ
ಎಷ್ಟು ಮಂದಿಯ ಜನನವಾಯಿತು
ಇಷ್ಟು ಚಂದದ ಮನೆಯಲಿ
ಕಷ್ಟವಾದರು ಜೊತೆಯಲಿದ್ದರು
ನಿಷ್ಠೆಯಿದ್ದಿತು ಬಾಳಲಿ
ಮಾಡು ನಾಲ್ಕಿದೆ ಬಹಳ ಸುಂದರ
ಮೂಡು ದಿಕ್ಕಿಗೆ ಮುಖವಿದೆ
ನೋಡುತಿದ್ದರೆ ಮನವ ಸೆಳೆವುದು
ಬೀಡು ಪರಿಸರ ನಡುವಿದೆ||
-ಪೆರ್ಮುಖ ಸುಬ್ರಹ್ಮಣ್ಯ ಭಟ್
ಚಿತ್ರ್