ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ
ನನ್ನ ಹಿಂದಿನ ಕೊಂಡಜ್ಜಿ ವರದರಾಜಸ್ವಾಮಿ ದೇವಾಲಯ ಲೇಖನದಂತೆ ಈ ಭವ್ಯ ಮೂರ್ತಿ ನನ್ನ ಅಜ್ಜಿಯ ಊರಲ್ಲಿ ನೆಲೆಯಗಿರುವುದು .ಒಂದು ಅಜ್ಜಿ ಈ ಮೂರ್ತಿಯನ್ನು ಕೊಂಡು ಪ್ರತಿಸ್ತಾಪನೆ ಮಾಡಿದುದರಿಂದ ಊರಿಗೆ ಕೊಂಡಜ್ಜಿ ಎಂದು ಹೆಸರಾಗಿದ್ದು ಎಂಬ ಇತಿಹಾಸವಿದೆ .
ಇದೇ ರೀತಿ ವರದರಾಜಸ್ವಾಮಿ ಈ ಊರಿನಲ್ಲಿ ಅಲೆನಾಥ ಎಂದು ಕರೆಯುವುದುಂಟು . ಊರಲ್ಲಿ ಕೇವಲ ೨೫% ಜನಕ್ಕೆ ಮಾತ್ರ ಈ ಮೂರ್ತಿಯ ಹೆಸರು ವರದರಾಜಸ್ವಾಮಿ ಎಂದು ಗೊತ್ತಿದ್ದೂ ಇನ್ನುಳಿದವರಿಗೆ ಈ ಮೂರ್ತಿ ಅಲೆನಾಥಸ್ವಾಮಿಯೇ .ಅದು ಕಳೆದ ೬-೭ ವರ್ಷಗಳ ಹಿಂದೆ ಒಬ್ಬ ಕೇರಳದ ಭಕ್ತ ಅವರನ್ನು ಕಷ್ಟದಲ್ಲಿ ಈ ದೇವರನ್ನು ನೆನೆದು ಒಳಿತಾದುದರ ಸಲುವಾಗಿ ಬಂದು ಇಲ್ಲಿ ವಾರನುಗಟ್ಟಲೆ ಹೋಮ ಪೂಜೆ ಮಾಡಿಸಿದರು ,ಅನಂತರ ವರದರಾಜ ಎಂದೂ ಕರೆಯುತ್ತಾರೆಂದು ತಿಳಿಯಲ್ಪಟ್ಟಿತು..
ಹಿನ್ನಲೆ :
ಊರಿನ ಹಿರಿಯರು ಹೇಳುವಂತೆ ವಿಷ್ಣು ಮೂರು ದೇವರುಗಳಿಗೆ ಲೋಕಕಲ್ಯಾಣಕ್ಕಾಗಿ ಭೂಲೋಕಕ್ಕೆ ಹೋಗಿ ನೆಲೆಸುವಂತೆ ಆಜ್ಞೆ ಮಾಡಿ ,ಒಂದಿಷ್ಟು ಅವಧಿ ಕೊಟ್ಟು ಆ ಅವಧಿ ಮುಗಿಯುವ ಮುನ್ನ ಅವರುಗಳಿಗೆ ಇಷ್ಟವಾದ ಸ್ಥಳಗಳಲ್ಲಿ ನೆಲೆಸುವಂತೆಯು,ಆ ಅವಧಿ ಮುಗಿದ ನಂತರ ಅವರು ಇದ್ದಲ್ಲಿಯೇ ಶಿಲಾಮೂರ್ಥಿಗಳಾಗಿಬಿಡುವರೆಂದು ಆಜ್ನೆಮಾಡಿ ಕಳುಹಿಸಿದರಂತೆ .
ವರದರಾಜಸ್ವಾಮಿ ತನ್ನ ಪತ್ನಿಯೊಂದಿಗೆ ಕೊಂಡಜ್ಜಿ ಊರ ಹತ್ತಿರ ಬಂದಾಗ,ಅವರಿಗೆ ಬಂಗಿ ಸೇದುವ ಆಸೆಯಾಗಿ ತನ್ನ ಹೆಂಡತಿಗೆ ಹೋಗಿ ಊರೊಳಗೆ ಬೆಂಕಿಯನ್ನು ತರಲು ಹೇಳಿದರಂತೆ,ಬೆಂಕಿತರಲು ಹೋದ ಪತ್ನಿ ಅಲ್ಲಿ ಮಡಿಕೆ ಮಾಡುವ ಕುಂಬಾರನ ನಿಪುಣತೆ , ಮಚ್ಚು , ಕುಡುಗೋಲು , ಈಳಿಗೆ , ಕತ್ತರಿ ಮುಂತಾದ ಕಬ್ಬಿಣದ ಹತಾರಗಳನ್ಮಾಡಲು ಕಬ್ಬಿಣವನ್ನುಮುಂಜಾನೆಯ ಸೂರ್ಯನ ಬಣ್ಣಕ್ಕೆ ಕಾಯಿಸಿ ಬಗ್ಗಿಸುವರ ಚತುರನ ಕುಲುಮೆಕಾರನ ಕೆಲಸವನ್ನು ನೋಡುತ್ತ ಮೈಮರೆತಳಂತೆ ,ಕೊನೆಯಲ್ಲಿ ಪತಿಯ ಆಜ್ಞೆ ನೆನಪಾಗಿ ಬೆಂಕಿಯನ್ನು ತರುವಷ್ಟರಲ್ಲಿ ವಿಷ್ಣು ನೀಡಿದ ಅವಧಿಯಲ್ಲಿ ಕೆಲವೇ ಕ್ಷಣಗಳು ಉಳಿದಿತ್ತಂತೆ ,ಹಾಗಾಗಿ ಕೋಪಗೊಂಡ ವರದರಾಜಸ್ವಾಮಿ ಪತ್ನಿಗೆ ಜೋರಾಗಿ ಕಾಲಲ್ಲಿ ಒದ್ದಿದ್ದಾಗಿ ಆಕೆಯ ರುಂಡ ,ಮುಂಡಗಳು ದೂರದಲ್ಲಿ ಬಿದ್ದವಂತೆ .ಅವಧಿ ಮುಗಿದಿದ್ದರಿಂದ ಆಕೆಯ ರುಂಡ ಮುಂಡ ಹಾಗು ವರದರಾಜ ಸ್ವಾಮಿ ಅಲ್ಲಿಯೇ ಶಿಲ್ಪಾಮುರ್ತಿಯಾದರಂತೆ .ವರದರಾಜಸ್ವಾಮಿ ಗರ್ಭಗುಡಿಯಲ್ಲಿದ್ದು ಹೊರಕೊಣೆಯಲ್ಲಿ ರುಂಡ ,ಮುಂಡಗಳ ಭಾಗಗಳಿವೆ , ಹೀಗಾಗಿ ಅಲೆಮಾರಿಯಾಗಿ ಬಂದ ವರದರಾಜಸ್ವಾಮಿ ಇಲ್ಲಿ ಅಲೆನಾಥ ಸ್ವಾಮಿ ಎಂದು ಪ್ರಸಿದ್ದಿಯಾಗಿದ್ದಾರೆ.
ಹಾಗು ವಿಷ್ಣುವಿನ ನಾಮಗಳಲ್ಲಿ ಒಂದಾದ ಅಲ್ಲಾಳನಾಥನೆಂದೂ ಕರೆಯಲಾಗುತ್ತದೆ .
ಪ್ರಸನ್ನರವರ ವೀಡಿಯೊ ಸಂಗ್ರಹ ದ ಲಿಂಕ್ ಇದಾಗಿದೆ -- http://vimeo.com/17017341
Comments
ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ
In reply to ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ by venkatb83
ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ
In reply to ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ by Vinutha B K
ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ
ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ
In reply to ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ by ಗಣೇಶ
ಉ: ಕೊಂಡಜ್ಜಿ ವರದರಾಜಸ್ವಾಮಿ -->ಅಲೆನಾಥಸ್ವಾಮಿಯಾಗಿ