ಕೊಚ್ಚೆಯಲ್ಲಿ ಬಿದ್ದವರ ಕಚ್ಚೆ ಪರಿಶಿಲನೆ!

ಕೊಚ್ಚೆಯಲ್ಲಿ ಬಿದ್ದವರ ಕಚ್ಚೆ ಪರಿಶಿಲನೆ!

ಬರಹ

 ಕೊನೆಬೆಂಚಿನಲ್ಲಿ ಕುಳಿತು ಚುಕ್ಕೆ ಆಟ ಆಡುವ ವಿದ್ಯಾರ್ಥಿಗಳನ್ನು, ಮಾಸ್ತರು ’ಗೆಟ ಔಟ್’ ಮಾಡುವಂತೆ ಬಿಜೆಪಿ ಉನ್ನತೋನ್ನತ ಪ್ರಾಧಿಕಾರ ಕರ್ನಾಟಕದ ಮೂವರು ಮಂತ್ರಿಗಳನ್ನು ’ರಾಜೀನಾಮೆಗೊಳಿಸಿದೆ’.
 ಕಲಾಪದ ವೇಳೆ ಅವರು ಸೆಕ್ಸ್ ಚಿತ್ರಗಳನ್ನು ನೋಡುತ್ತಿದ್ದ ಪರಿ, ಮಾಧ್ಯಮಗಳಿಗೇನೋ ಬಣ್ಣಬಣ್ಣದ ಮಸಾಲೆಯಾಯಿತು; "ನೈತಿಕ ಹೊಣೆ ಹೊತ್ತು" ರಾಜೀನಾಮೆ ನೀಡಿರೆಮದು ಹೈಕಮಾಂಡ್ ಆದೇಶಿಸಿತು. ಅದರೆ ಮೊತ್ತದಲ್ಲಿ, ಅವರು ಚುಕ್ಕೆ ಆಟವಾಡುತ್ತಿದ್ದರೂ, ಪದಬಂಧ, ಸುಡುಕೋ ತುಂಬುತ್ತಿದ್ದರೂ, ಬೇರೆ ಗಾಸಿಪ್ ಮಾಡುತ್ತಿದ್ದರೂ ಸದನಕ್ಕೂ ಅದರ ಕಲಾಪಕ್ಕೂ ಮೌಲ್ಯವರ್ಧನೆಯೇನೂ ಸಿಗುತ್ತಿರಲಿಲ್ಲ. ಪ್ರೌಢಿಮೆ ಹೋಗಲಿ, ಪ್ರೌಢತನ-ಪ್ರಬುದ್ಧತೆಗಳೂ ನಮ್ಮ ಸಚಿವ-ಶಾಸಕರುಗಳಿಗಿಲ್ಲವಲ್ಲಾ ಎಂದು ನೊಂದುಕೊಳ್ಳಬೇಕಾಗಿದೆ. ಇಡಿಯಾಗಿ ಕೊಚ್ಚೆಯಲ್ಲೇ ಬಿದ್ದಿರುವವರ ಕಚ್ಚೆ ಮಾತ್ರ ಪರಿಶುದ್ಧವಾಗಿರಬೇಕೆಂದು ನಿರೀಕ್ಷಿಸುವುದಾದರೂ ಪ್ರಬುದ್ದತೆಯಾದೀತೇ?!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet