ಕೊತ್ತಂಬರಿಬೀಜ ಚಟ್ನಿಪುಡಿ

ಕೊತ್ತಂಬರಿಬೀಜ ಚಟ್ನಿಪುಡಿ

ತಯಾರಿಸುವ ವಿಧಾನ

ಕೊತ್ತಂಬರಿ ಬೀಜವನ್ನು ಸುವಾಸನೆ ಬರುವವರೆಗೂ ಹುರಿದುಕೊಳ್ಳುವುದು. ಕೊಬ್ಬರಿತುರಿಯನ್ನೂ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಕರಿಬೇವು ಎಲೆ ಗರಿಗರಿಯಾಗಿ ಹುರಿಯಬೇಕು. ನಾಲ್ಕು ಚಮ್ಮಚ ಎಣ್ಣೆ ಕಾಯಿಸಿ ಸಾಸಿವೆ ಸಿಡಿದ ನಂತರ ಹಿಂಗು ಹಾಕಿ ಅದರಲ್ಲಿ ಒಣಮೆಣಸಿನಕಾಯಿ ಹುರಿದು ತೆಗೆಯಬೇಕು. ಕೊತ್ತಂಬರಿ ಬೀಜದ ಜೊತೆಗೆ ಕರಿಬೇವು, ಕೊಬ್ಬರಿ, ಹುಣಸೇಹಣ್ಣಿನ ಪುಡಿ, ಉಪ್ಪು ಹಾಗೂ ಒಂದು ಸಣ್ಣ ತುಂಡು ಬೆಲ್ಲ ಮತ್ತು ಕರಿದು ತೆಗೆದ ಒಣಮೆಣಸಿನಕಾಯಿ ಸೇರಿಸಿ ತರಿತರಿಯಾಗಿ ಪುಡಿ ಮಾಡಿಟ್ಟುಕೊಳ್ಳುವುದು. ಬಾಂಡಲೆಯಲ್ಲಿರುವ ಒಗ್ಗರಣೆ ಎಣ್ಣೆಯಲ್ಲಿ ಇವನ್ನು ಕಲಸಿ ಡಬ್ಬಿಗೆ ತುಂಬಿಡಿ. ಸೂ: ಅಸಿಡಿಟಿ ಇರುವವರಿಗೆ ಊಟಕ್ಕೆ ಮೊದಲು ಮೊದಲನೆಯ ತುತ್ತಿಗೆ ಇದನ್ನು ತುಪ್ಪದ ಜೊತೆ ಬಳಸಿದರೆ ತುಂಬ ಒಳ್ಳೆಯದು.

ಸಾಂಪ್ರದಾಯಿಕ ಅಡುಗೆ

ತಿಂಗಳಾರುಗಟ್ಟಲೆ ಇಟ್ಟು ತಿನ್ನಬಹುದು

30

ಸಾಂಪ್ರಾದಾಯಿಕ ಚಟ್ನಿ ಪುಡಿ

ಕೊತ್ತಂಬರಿ ಬೀಜ - ನಾಲ್ಕು ಕಪ್ಪು

ಎರಡು ಕಪ್ಪು ಕೊಬ್ಬರಿ ತುರಿ

ಒಂದೆರಡು ಕಪ್ಪು ಕರಿಬೇವು ಎಲೆ

ಹುಣಸೆ ಹಣ್ಣಿನ ಪುಡಿ - ಒಂದೆರಡು ಚಮ್ಮಚ

ಉಪ್ಪು

ಹಿಂಗು

ಮೂರು ಚಮ್ಮಚ ಎಣ್ಣೆ, ಸಾಸಿವೆ

Comments