ಕೊತ್ತಂಬರಿ ಸೊಪ್ಪಿನ ವಡೆ
ಬೇಕಿರುವ ಸಾಮಗ್ರಿ
ಹೆಚ್ಚಿದ ಕೊತ್ತಂಬರಿ ಸೊಪ್ಪು ೨ ಕಪ್, ಸಣ್ಣಗೆ ಕತ್ತರಿಸಿದ ಹಸಿಮೆಣಸಿನ ಕಾಯಿ - ೫-೬, ಕಡಲೇ ಹಿಟ್ಟು - ೨ ಕಪ್, ಅಕ್ಕಿ ಹಿಟ್ಟು - ೧ ಕಪ್, ತುರಿದ ಬೆಲ್ಲ - ೧ ಚಮಚ, ಕರಿಯಲು ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ
ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ, ಎರಡು ಚಮಚ ಬಿಸಿ ಎಣ್ಣೆ, ಸ್ವಲ್ಪ ನೀರು ಹಾಕಿ, ವಡೆಯ ಹದಕ್ಕೆ ಕಲಸಿಡಿ. ಹಿಟ್ಟಿನ ಮಿಶ್ರಣದಿಂದ ವಡೆಗಳನ್ನು ತಟ್ಟಿ. ಇಡ್ಲಿ ತಟ್ಟೆಯಲ್ಲಿ ಬೇಯಿಸಿ. ನಂತರ, ಬೇಯಿಸಿದ ವಡೆಗಳನ್ನು ಎಣ್ಣೆ ಸವರಿದ ಕಾಯಿಸಿದ ತವಾಕ್ಕೆ ವರ್ಗಾಯಿಸಿ. ಎರಡೂ ಬದಿಗಳನ್ನು ಬೇಯಿಸಿದರೆ, ರುಚಿಯಾದ ಕೊತ್ತಂಬರಿ ಸೊಪ್ಪಿನ ವಡೆ ಸವಿಯಲು ಸಿದ್ಧ.