ಕೊನೆಗೆ ಉಳದದ್ದು
ಕವನ
ಕತ್ತಿ
ಹಿಡಿಕೆಯ ಕಡೆ
ಹರಿತವಾಗಿರುವುದಿಲ್ಲವೆಂದಲ್ಲವೇ
ನೀನು ಆ ಕಡೆಗೆ ಹೋದದ್ದು?
ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ
ಅದೆಷ್ಟು ಬಾರಿ ಬೀಸಿದ್ದೀಯೇ
ಮೊಣಚನ್ನು ಕಳೆದುಕೊಂಡಿದೆ
ಸ್ವಲ್ಪ ಹೀಗೆ ಬಾ
ಈ ಎದೆಯಮೇಲೇ
ನುರಿಸುಕೊಂಡು ಮೊಣಚುಮಾಡಿಕೊ!
ಗಾಯವಾಗದಿದ್ದರೇ ಅದು
ಎದೆ ಯಾಗಲಾರದೆನ್ನುವ
ನಿಜ ತಿಳಿದಮೇಲೆ
ನಿನ್ನ ತೇಯುವ ಬಿಸಿಯಲ್ಲಿ
ನೋವು ತಿಳಿಯದಿರುವ ಅಮಲಿನಲ್ಲಿ
ನನ್ನನ್ನು ಕಳೆದುಕೊಳುವದೊಂದೇ
ಉಳಿದಿದೆ!
Comments
"ಸ್ವಲ್ಪ ಹೀಗೆ ಬಾ
"ಸ್ವಲ್ಪ ಹೀಗೆ ಬಾ
ಈ ಎದೆಯಮೇಲೇ
ನುರಿಸುಕೊಂಡು ಮೊಣಚುಮಾಡಿಕೊ!"
ಈ ಸಾಲುಗಳನ್ನು ಕಲ್ಪಿಸಿಕೊಳ್ಳಲು ತುಸು ಭಯವಾಯ್ತು....!
ಉಳಿದಂತೆ ಬರಹ ಸೂಪರ್...
ಶುಭವಾಗಲಿ..
\।
In reply to "ಸ್ವಲ್ಪ ಹೀಗೆ ಬಾ by venkatb83
ವೆಂಕಟ್ ಅವರೇ, ಭಯವು ಬಹಳ
ವೆಂಕಟ್ ಅವರೇ, ಭಯವು ಬಹಳ ಮುಖ್ಯವೆಂದು ಶಾಸ್ತ್ರ ಹೇಳುವದುಂಟು (ಭಯಮ್ ತತ್ವ ವಿಮರ್ಶನಾತ್). ಆಗಿಂದಾಗ್ಗೆ ತುಸು ಭಯಪಡುವುದು ಒಳ್ಳೇದೇ :)
ನಿಮ್ಮ ಪ್ರತಿಕ್ರಿಯಗೆ ಧನ್ಯವಾದಗಳು.