ಕೊನೆಯದಿನ

ಕೊನೆಯದಿನ

ಕವನ

 


 


 ಕೊನೆಯದಿನ


ಗುರುತಿಲ್ಲದ, ಪರಿಚಯವಿಲ್ಲದ ಆಫೀಸಿನಲ್ಲಿ ಕೆಲಸ
ಹೇಗಿರುವೊದೋ, ಏನೋ ಎಂಬ ಆತಂಕ.
ಬರಿ ಹಾಯ್, ಬಾಯಿ, leaving ಫಾರ್ ದಿ ಡೇ
ವಿಲ್ ಕ್ಯಾಚ್ ಅಪ್ tomorrow ಗಳ ಮಧ್ಯ
ಒಮ್ಮೆ ನಮಸ್ಕಾರ, ತಿಂಡಿ ಆಯ್ತಾ ಎನ್ನೋದು ಕೇಳಿ
ಅಬ್ಬ.. ನಾನ್ಯೋವುದೋ ದೇಶದಲ್ಲಿ ಇಲ್ಲ ಅನಿಸಿತು...
 
ಓಹೋ.. ನೀವು ಕನ್ನಡದವರಾ? ನೈಸ್...
ಮನೆ ಎಲ್ಲಿ? ಊರೆಲ್ಲಿ? ಎಂದು ಕೇಳೋ ಸಲಿಗೆ
ಹೇಗಿದೆ ಕೆಲಸ ಇವತ್ತು?  ಎಂದು ಕೇಳೋ ತವಕ
ಅಬ್ಬ!!! ಮರಳುಗಾಡಿನಲ್ಲಿ   ಒಯಸಿಸ್ ಸಿಕ್ಕಿದ ಹಾಗೆ
ಏನೋ ಒಂದು ಧನ್ಯಾತಭಾವ...
ಇವರು ಕನ್ನಡದವರೆಂಬುದು
 
ರಿಪೋರ್ಟ್ ಬೇಕು, ಡಾಟಾ ಬೇಕು, details ಬೇಕು,
i  am on fire ... ಬೇಗ ಡಾಟಾ ಕಳಿಸಕ್ಕೆ  ಆಗತ್ತಾ
escalations   ಬೇರೆ , ತಲೆ ಕೆಟ್ಟು ಹೋಗಿದೆ......
ಹೆಲ್ಪ್ ಮಾಡಬೇಕ? ಅಂತ ಕೇಳಬೇಕು ಅನಿಸಿದರು
ಕೇಳಲಾಗದೆ, ಮನಸಲ್ಲಿ ಒನೋ ಒಂದು ಮರುಕ
ಓ.. ಪಾಪ ಎಷ್ಟು ಕಷ್ಟವೇನೋ ಕೆಲಸ!!!
 
ಕೆಲಸದ ಮಧ್ಯದ ಆ ತುಂಟ ಮಾತುಗಳು...
' ನೀನಿನ್ನೂ ಎಳೇ ನಿಂಬೆಕಾಯಿ !!!',
'ನಿಮ್ಮ ಮ್ಯಾನೇಜರ್ ಗೆ escalate ಮಾಡ್ತೀನಿ '
ಮೊದಮೊದಲಿಗೆ ಆತಂಕ.. ಏನಪ್ಪಾ ಇವರು?
ನಿಜವಾಗಿ ಹೇಳಬಹುದ? ಏನು ಮಾಡುವುದು?
ಎನ್ನೋ ಅವ್ಯಕ್ತ ಭಾವ ಸಂಜೆವರಗೆ...
 
 
ಒಮ್ಮೆ ವಿಚಿತ್ರ ಅನ್ನಿಸಿದ್ರೂ ಸತ್ಯ.. 
ಎಂದು ಸಿಟ್ಟಾಗದೆ, ಅoದು ಸಿಟ್ಟಾಗಿ ಫೋನ್ ಕಟ್ ಮಾಡಿದಾಗ
ಕಂಬನಿ ಕೋಡಿಯಾಗಿ ಹರಿದಿದ್ದು ಮರೆಯಲಾಗದ ದಿನ.
ಛೆ! ನಾನೆ ರೇಗಿಸಿ ತಪ್ಪು ಮಾಡಿದನೇನೋ ಎಂಬ ಭಾವನೆ
ಇಸ್ಟ್ ಲ್ಲರ  ನಡುವೆ ಮುಖತ ಭೇಟಿ ಮಾತ್ರ ಮೂರುವರ್ಷಗಳ ನಂತರ
ಟೆಕ್ನಾಲಜಿ ಎಸ್ಟೊಂದು ಅಡ್ವಾನ್ಸ್ ಅಲ್ಲವೆ?
 
'ಕೀಪ್ ಇನ್ ಟಚ್ .. ಸ್ವಲ್ಪ ದಿನಕ್ಕೆ ಔಟ್ ಆಫ್ ಟಚ್ ಆಗೋದು  ನಿಜ'
ಆದ್ರೆ ನೆನಪುಗಳು ಎಂದು ಮಾಸುವುದಿಲ್ಲ ಅನ್ನೋದು ಕೂಡ ನಿಜ..
ಭೇಟಿ ಆಕಸ್ಮಿಕ, ಅಗಲಿಕೆ ಅನಿವಾರ್ಯ ಎನ್ನೋದು ಸರಿಯೇ..
ಅದೆಲ್ಲ ವೇದಾಂತವು  ಹೌದು.. ಆದರೆ ಇಷ್ಟು ಬೇಗ ಎನ್ನುವುದೇ ಬೇಸರ.
ಏನಾದರಾಗಲಿ.... ಹೊಸ ಬದುಕಿನ ದಾರಿಯು ಹೂವಿನ ಹಾಸಿಗೆ ಆಗಿರಲಿ
ಎಂಬುದೊಂದೆ ಕೊನೆಯ ಸಾಲಿನಲ್ಲಿರುವ ಹಾರೈಕೆ...
 

 


 - ಅನಿತ ಬಿ ಎಸ್

 
 - ಅನಿತ ಬಿ ಎಸ್

Comments