ಕೊಲಂಬಿಯದ ಫುಲ್ಟನ್ ನಲ್ಲಿನ, ಸರ್, ವಿನ್ ಸ್ಟನ್ ಚರ್ಚಿಲ್ ಸ್ಮಾರಕಕ್ಕೆ ಭೇಟಿ !

ಕೊಲಂಬಿಯದ ಫುಲ್ಟನ್ ನಲ್ಲಿನ, ಸರ್, ವಿನ್ ಸ್ಟನ್ ಚರ್ಚಿಲ್ ಸ್ಮಾರಕಕ್ಕೆ ಭೇಟಿ !

 

ಅಮೆರಿಕದಲ್ಲಿ  ನಾವಿದ್ದ ಕೊಲಂಬಿಯ ಊರಿನಲ್ಲಿ ನೋಡಲು ಜಾಗಗಳು ಒಂದೇ ಎರಡೇ ? ಇಲ್ಲಿನ ಫಲವತ್ತಾದ ನದಿಪ್ರದೇಶದ ಭೂಮಿಯಲ್ಲಿ ಮೆಕ್ಕೆಜೋಳ, ಹಾಗೂ ಅನೇಕ ತರಕಾರಿ, ಹಣ್ಣು-ಹಂಪಲುಗಳನ್ನು ಯತೇಚ್ಛವಾಗಿ ಬೆಳೆಯುತ್ತಾರೆ. ದ್ರಾಕ್ಷಿ ತೋಟಗಳು ದಾರಿಯುದ್ದಕ್ಕೂ ಪರ್ಯಟಕರನ್ನು ಕೈಬೀಸಿ ಸ್ವಾಗತಿಸುತ್ತವೆ. ಹತ್ತಿರದ ಡಿಸ್ಟಲರಿಗಳಲ್ಲಿ ತಯಾರಿಸಿದ ತಾಜಾ ಶುದ್ಧವಾದ, ದ್ರಾಕ್ಷಾರಸ (ಮದ್ಯ)ಹೋಟೆಲ್ ಗಳಲ್ಲಿ ಸಿಗುತ್ತದೆ. ದಾರಿಯುದ್ದ, ಬದಿಯ ದಿಬ್ಬಗಳಿಂದ ಕೆಳಗೆ ಇಳಿದು, ಹರಿಯುವ ಝರಿಗಳು ಜುಳು-ಜುಳು ಕಲರವಮಾಡುತ್ತವೆ. ಎಲ್ಲೆಲ್ಲೂ ನಿಶ್ಶಬ್ದ, ಜನಸಂದಣಿಯಿಲ್ಲ. ಪಕ್ಷಿಗಳ ಚಿಲಿ-ಪಿಲಿಯೂ ಇಲ್ಲ. ಇದು ನಮಗೆ ಖೇದವನ್ನುಂಟುಮಾಡಿತು. ಕೆಲವೇ ಕಾಗೆಗಳು ಯಾವಾಗಲೋ ಕಾಣಿಸುತ್ತಿದ್ದವು. ನನ್ನ ತಮ್ಮ ಅನೇಕ ಸುಂದರ ಸ್ಥಳಗಳಿಗೆ ನಮ್ಮನ್ನು ಕರೆದುಕೊಂಡು ಹೋಗಿ ತೋರಿಸಿಕೊಂಡುಬಂದನು. ಅದರಲ್ಲಿ ಚಿರ-ಸ್ಮರಣೀಯವಾದ ಸ್ಥಳವೊಂದು ನಮ್ಮೆಲ್ಲರ ಮನಸ್ಸಿನಲ್ಲಿ ಮರೆಯಲಾರದ ಅಚ್ಚೊತ್ತಿದೆ. ಅದೇ, ಫುಲ್ಟನ್ ನಲ್ಲಿರುವ ’ವಿನ್ಸ್ಟನ್ ’ಚರ್ಚಿಲ್’ ರ ಸ್ಮರಣಮಂದಿರ’ ! ' : ೧೮೫೧ ರಲ್ಲಿ "ಫುಲ್ಟನ್ ವಿವಿದ್ಯಾಲಯ" ಹೆಸರನ್ನು ಪಡೆಯಿತು. ಖಾಸಗೀ ವಿಶ್ವ ವಿದ್ಯಾಲಯದ  ಹುಡುಗ-ಹುಡುಗಿಯರಿಗೆ, ಸಹವಿದ್ಯಾಭ್ಯಾಸಕ್ಕೆ ಆದ್ಯತೆ. ವಾಸಕ್ಕೆ ವ್ಯವಸ್ಥೆಕಲ್ಪಿಸಿದ್ದಾರೆ. ಮುಕ್ತಮನಸ್ಸಿನ, ಕಲೆಸಾಹಿತ್ಯ, ಗಳಿಗೆ ಪ್ರಾಮುಖ್ಯತೆಕೊಡುತ್ತದೆ. ವಿದ್ಯಾರ್ಥಿ-ಶಿಕ್ಷಕರ ಅನುಪಾತ ೧೪ ; ೧ ರಷ್ಟಿದೆ. ೧೩,೦೦೦ ಜನವಾಸಿಸುವ ಫುಲ್ಟನ್ ಹಳ್ಳಿ ಕೊಲಂಬಿಯಕ್ಕೆ ೨೫ ಮೈಲಿದೂರದಲ್ಲಿದೆ. ಇಲ್ಲಿಂದ ಜೆಫರ್ಸನ್ ಸಿಟಿಗೂ ಅಷ್ಟೇದೂರವಿದೆ.
 
ಬರ್ಲಿನ್ ಗೋಡೆಯನ್ನು ಕೆಡವಿದ ನಂತರ, ಅದರ ಕೆಲವು ಚೂರುಗಳನ್ನು ಸಂಗ್ರಹಿಸಿ, ಒಂದು ನೆನಪಿನ ಭವ್ಯ ಶಿಲ್ಪವನ್ನು ನಿರ್ಮಿಸಲಾಯಿತು. ಅದನ್ನು ಮಾಡಿದ್ದು ವಿನ್ ಸ್ಟನ್ ಚರ್ಚಿಲ್ ರವರ ಮೊಮ್ಮಗಳು, ಎಡ್ವಿನಾಸ್ಯಾಂಡೀಸ್ ಬ್ರೇಕ್ ಥ್ರೂ ಎಂಬ ಹೆಸರಿನ, ಎಡ್ವಿನಾಸ್ಯಾಂಡೀಸ್ ಳ’ ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ, ಬರ್ಲಿನ್ ವಾಲಿನ ಏಳು ಭಾಗಗಳಿಂದ ಹೆಕ್ಕಿತೆಗೆದು ತಂದು ನಿರ್ಮಿಸಿದ ಗೋಡೆ ರಚಿಸಿದ್ದಾರೆ.  ಐರನ್ ಕರ್ಟನ್ ಎಂದು ಸಂಬೋಧಿಸಿ ಮಾಡಿದ ಭಾಷಣನ ನಂತರ. ವೆಸ್ಟ್ ಮಿನ್ಸ್ಟರ್ ಕಾಲೇಜಿನ ಕ್ವಾಡ್ರಾಂಗಲ್ ನಲ್ಲಿ ವೀಕ್ಷಿಸಬಹುದು.  ಚರ್ಚಿಲ್ ಕಬ್ಬಿಣದ ತೆರೆಯೆಂದು ವರ್ಣಿಸಿಮಾಡಿದ ಭಾಷಣದ ಧ್ವನಿ-ಸುರಳಿಯನ್ನು ಈಗಲೂ ನಾವು ಸ್ಪಷ್ಟವಾಗಿ ಆಲಿಸಬಹುದು.’ಗ್ಯಾಲೊವೆ ಕೌಂಟಿ,’ ಯಲ್ಲಿರುವ ’ಫುಲ್ಟನ್ ಹಳ್ಳಿಯ ವೆಸ್ಟ್ ಮಿನ್ಸ್ಟರ್ ಕಾಲೇಜ್ ಚರ್ಚ್, ನ ಬದಿಯಲ್ಲಿರುವ, ಜಿಮ್ನೇಶಿಯಮ್,’ ನಲ್ಲಿ, ’ಬ್ರೇಕ್ ಥ್ರೂ’ ಎಂಬ ಶಿಲ್ಪವಿನ್ಯಾಸ ರೂಪುಗೊಂಡಿತು.
 
ವಿಶ್ವಯುದ್ಧದಲ್ಲಿ ವಿನಾಶದಹಂತದಲ್ಲಿದ್ದ ೧೭ನೇ ಶತಮಾನದ, ಆಲ್ಡರ್ಮನ್ ಬರಿ, ’ಸೇಂಟ್ ವರ್ಜಿನ್ ಮೇರಿ ಚರ್ಚ್ ನ್ನು’, ಕ್ರಿಸ್ಟೋಫರ್ ರೆನ್ ಎಂಬುವರು, ೧೬೭೭ ರಲ್ಲಿ ಲಂಡನ್ ನಲ್ಲಿ ಮರು-ಸ್ಥಾಪಿಸಿದರು. ರೆನ್ ಗ್ರೇಟ್ ಬ್ರಿಟನ್ ನಲ್ಲಿ ಸುಮಾರು ೫೩ ಚರ್ಚ್ ಗಳನ್ನು ನಿರ್ಮಿಸಿ ಎಲ್ಲರ ಪ್ರಸಂಶೆಗೆಪಾತ್ರರಾಗಿದ್ದರು. ಆದರೆ ಪುನಃ ೧೯೪೧ ರಲ್ಲಿ ಬ್ರಿಟನ್ ಮೇಲೆ ಜರ್ಮನ್ ದೇಶದ ಬಾಂಬ್ ದಾಳಿಯಿಂದ ಅನೇಕ ಕಟ್ಟಡಗಳು ಸ್ಮಾರಕಗಳೂ ನೆಲಸಮವಾದವು. ಅವುಗಳಲ್ಲಿ ಮೇರಿ ಚರ್ಚ್ ಕೂಡ  ಸಂಪೂರ್ಣವಾಗಿ ನಾಶಗೊಂಡಿತು. ಲಂಡನ್ ಚರ್ಚ್ ಬಿದ್ದ ಮೇಲೆ ಅದರ ಪುಟ್ಟಪುಟ್ಟ ಕಲ್ಲುಗಳ ಚೂರುಗಳನ್ನೂ, ಗೋಡೆಗಳ ಮುರಿದು ಬಿದ್ದ ಭಾಗಗಳನ್ನೂ ಸಂಗ್ರಹಿಸಿ, ಅಮೆರಿಕದ ಫುಲ್ಟನ್ ಗೆ ಹಡಗಿನಲ್ಲಿ ಸಾಗಿಸಿ, ಪುನರ್ನಿರ್ಮಿಸಿದರು. ಚರ್ಚಿಲ್ ರವರ ಭೇಟಿಯನ್ನು ಸ್ಮರಿಸಲು, ಕಿಂಗ್ಡಮ್ ಆಫ್ ಕ್ಯಾಲವೇ ಶುರುವಾದ ದಿನಗಳ ಮ್ಯೂಸಿಯೆಮ್ ನಲ್ಲಿ ದಾಖಲಾಗಿವೆ.ಹಾಗೂ ಅಲ್ಲಿ ಕೈಗೆ-ಸಿಕ್ಕ ಮರಮುಟ್ಟುಗಳನ್ನು ತಂದು, ಅತ್ಯಂತ ಎಚ್ಚರಿಕೆಯಿಂದ ಮಿಸ್ಸೂರಿರಾಜ್ಯದ, ವೆಸ್ಟ್ ಮಿನ್ಸ್ಟರ್ ಕಾಲೇಜ್, ಫುಲ್ಟನ್ ಗ್ರಾಮದ ಪ್ರಾಂಗಣದಲ್ಲಿನ ವಿಶಾಲ ಮೈದಾನದಲ್ಲಿ 'ಸ್ಮರಣ ಮಂದಿರ,' ವನ್ನು, ೧೯೬೯ ರಲ್ಲಿ ಚರ್ಚ್ ನ ಕೆಳಮಹಡಿಯಲ್ಲಿನಿರ್ಮಾಣ ಮಾಡಲಾಯಿತು. ’ಸೇಂಟ್ ವರ್ಜಿನ್ ಮೇರಿ ಚರ್ಚ್ ನಲ್ಲಿ ಶೇಕ್ಸ್ ಪಿಯರ್ ಪ್ರತಿಮೆಯಿದೆ. ಸೇಂಟ್ ವರ್ಜಿನ್ ಮೇರಿ ಚರ್ಚ್ ನಲ್ಲಿ ಅನೇಕ ವಿವಾಹಗಳಾಗಿವೆ, ಕವಿ ಮಿಲ್ಟನ್ ಈ ಚರ್ಚ್ ನಲ್ಲೇ ವಿವಾಹವಾದರು. ಈಗಲೂ ಯಾರಾದರೂ ವಿವಾಹವಾಗಲು ಇಚ್ಛಿಸುವವರು ಅಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದು.
 
* ಅಲ್ಲಿಯೇ ಒಂದು ಮಿಸ್ಸೂರಿ ಸ್ಕೂಲ್ ಆಫ್ ಡೆಫ್ ನ ಚರಿತ್ರೆಯನ್ನೂ ಪ್ರತಿಪಾದಿಸುತ್ತದೆ. ಅದಲ್ಲದೆ ಸಾರಿಗೆ ವ್ಯವಸ್ಥೆಯಲ್ಲಿ ಅಗ್ರಮಾನ್ಯ ಕಾರ್ ಮ್ಯೂಸಿಯೆಮ್ ಕಾಣಬಹುದು. ಚಾರಿತ್ರ್ಯಿಕ ವಿಭಾಗದಲ್ಲಿ ಅಂದಿನ ದಿನಗಳ ಕೆಲವು ಮಹತ್ವದ ಫೋಟೋಗಳು, ಮತ್ತು ಆದಿನದ ಕೆಲವು ಪ್ರಮುಖ ಘಟನೆಗಳ ವಿವರಗಳೂ ಸಿಗುತ್ತವೆ. ಕಿಂಗ್ಸ್ ರೊ ಮೆಮೊರಬಿಲಿಯದಲ್ಲಿ ಕಿಂಗ್ಡಮ್ ಆಫ್ ಕ್ಯಾಲವೇ ಚೇಂಬರ್ ಆಫ್ ಕಾಮರ್ಸ್ ನೋಡಲು ಸಿಗುತ್ತದೆ.
 
ಹಿಟ್ಲರ್ ತನ್ನ  ವಿಚಿತ್ರದೇಶಪ್ರೇಮದ ವಿಚಾರಹೀನವಾದ, ಆಲೋಚನೆಗಳಿಂದ  ಯೂರೋಪ್ ನ ಹಲವು ರಾಷ್ಟ್ರಗಳ ಉಳಿವಿಕೆಗೇ ಒಂದು ದೊಡ್ದ ಸಮಸ್ಯೆಯನ್ನು ತಂದು ಒಡ್ಡಿದ್ದ. ಇಂತಹ   ದುಷ್ಟಶಕ್ತಿಯನ್ನು ಹತ್ತಿಕ್ಕಲು  ಇಂಗ್ಲೆಂಡ್ ಜೊತೆ ಫ್ರಾನ್ಸ್ ಮತ್ತು ಅಮೇರಿಕಗಳು  ಸಹಕರಿಸಿದವು. ಯೂರೋಪಿನ ರಾಸ್ತ್ರಗಳನ್ನೆಲ್ಲಾ ಒಟ್ಟು ಗೂಡಿಸಿ ಜರ್ಮನಿಯ ವಿರುದ್ಧ ಸಿದ್ಧಗೊಳಿಸಿದ ನಾಯಕರಲ್ಲಿ ಚರ್ಚಿಲ್ ಪ್ರಮುಖರು. 
 
ಫುಲ್ಟನ್ ನಲ್ಲಿರುವ ಸರ್ ವಿನ್ ಸ್ಟನ್ ಚರ್ಚಿಲ್ ರವರ ಸ್ಮರಣ ಮಂದಿರ:  (ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್', KG, OM, CH, TD, FRS, PC, PC (Can) (೩೦, ನವೆಂಬರ್, ೧೮೭೪-೨೪, ಜನವರಿ, ೧೯೬೫)
 
ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರ ತಂದೆ, ರ‍್ಯಾಂಡಾಲ್ಫ್   ಚರ್ಚಿಲ್, ಕನ್ಸರ್ವೇಟಿವ್ ಪಕ್ಷದ ರಾಜಕಾರಿಣಿ, ಲಂಡನ್ ನಗರದ, ಬ್ಲೆನ್ ಹೇಮ್ ಅರಮನೆ, ವುಡ್ ಸ್ಟಾಕ್ ನಲ್ಲಿ ೩೦ನೇ ನವೆಂಬರ್, ೧೮೭೪, ರಲ್ಲಿ ಜನಿಸಿದರು. ತಾಯಿ, ಜೆನ್ನಿ ಜೆರೋಮ್, ಅಮೆರಿಕದ, ನ್ಯೂಯಾರ್ಕ್ ನಗರದ ವ್ಯಾಪಾರಿ, ಲೆನಾರ್ಡ್ ಜೆರೋಮ್ ರವರ ಮಗಳು. ಚರ್ಚಿಲ್  ಬ್ರಿಟಿಷ್ ಸಾಮ್ರಾಜ್ಯದ ರಾಜಕೀಯಪಟು, ೨ ನೆಯ ವಿಶ್ವ ಯುದ್ಧದಲ್ಲಿ ಅವರು ಬ್ರಿಟನ್ ಗೆ  ನೀಡಿದ ನಾಯಕತ್ವ,ಚರಿತ್ರೆಯಲ್ಲಿ ದಾಖಿಸಲು ಯೋಗ್ಯವಾದದ್ದು.
 
2 ನೆಯ  ವಿಶ್ವಯುದ್ಧದ  ಸಮಯದ   ಬ್ರಿಟನ್ ನ, ಪ್ರಧಾನಿಯಾಗಿ (೧೯೪೦ ರಿಂದ ೧೯೪೫ ರ ವರೆಗೆ ಮತ್ತೆ ಪುನಃ ೧೯೫೧ ರಿಂದ ೧೯೫೫ ರ ವರೆಗೆ), ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದರು. ಈ ಹಿಂದೆ  ಭಾರತದಲ್ಲಿ ಪ್ರಥಮ ಮಹಾ   ಯುದ್ಧದ ಸಮಯದಲ್ಲಿ ಬೆಂಗಳೂರಿನ ಕಂಟೋನ್ಮೆಂಟ್ ನಲ್ಲಿ ಆರ್ಮಿ  ಆಫೀಸರ್ ಆಗಿ ದುಡಿದಿದ್ದರು.  ಅತ್ಯಂತ ಪ್ರಭಾವೀ ಬರಹಗಾರ, ಚಿತ್ರ-ಕಲಾಕಾರ, ಮಾತುಗಾರ,  ಚಾರಿತ್ರ್ಯಿಕ  ಹಾಗು  ಒಬ್ಬ ಮರೆಯಲಾರದ ವ್ಯಕ್ತಿ.  ಚರ್ಚಿಲ್, ತಮ್ಮ ಉತ್ತಮ ಬರಹಕ್ಕೆ  ' ನೋಬೆಲ್ ಪ್ರಶಸ್ತಿ,'ಪಡೆದರು. ಚರ್ಚಿಲ್ ಹುಟ್ಟಿನಿಂದಲೇ ಎಲ್ಲರನ್ನೂ ನಿಭಾಯಿಸಿಕೊಂಡು, ಪರಿಸ್ಥಿಯನ್ನು ಎದುರಿಸುವ ಸಾಹಸ ಪ್ರವೃತ್ತಿಯ ರವರು ಬಹುಶಃ ಯುದ್ಧದಲ್ಲಿ ಬ್ರಿಟನ್ ದೇಶವನ್ನು ಗೆಲ್ಲಿಸಲೆಂದೇ ಜನ್ಮವೆತ್ತಿರಬಹುದೆನ್ನಿಸುವಷ್ಟು ಸಕ್ರಿಯವಾಗಿ ಹೋರಾಡಿ ತಾಯ್ನಾಡಿನ ಪ್ರಜೆಗಳ ಜೀವವನ್ನು  ಕಾಪಾಡಿದರು. ೨೦ ನೆಯ ಶತಮಾನದ ಅತ್ಯಂತ ದಕ್ಷ ಹಾಗೂ ಧೀರ ದೇಶನಿರ್ಮಾಪಕ, ಚರ್ಚಿಲ್ ರವರ ವಿಚಾರ ಯಾರಿಗೆ ಗೊತ್ತಿಲ್ಲ ? 
 
ಬ್ರಿಟಿಷ್ ನಾಗರಿಕರು ತಮ್ಮ ಜೀವನದ ಪ್ರತಿಗಳಿಗೆಯಲ್ಲೂ ಸ್ಮರಿಸಬೇಕಾಗುವ ಈ ಆಪತ್ಬಾಂಧವ ಚರ್ಚಿಲ್ ರ ಸ್ಮರಣ ಮಂದಿರ, ಹಾಗೂ ಪುಸ್ತಕಸಂಗ್ರಹಾಲಯ, ೧೯೪೬ ನೇ ಇಸವಿಯಲ್ಲಿ, ಚರ್ಚಿಲ್ ಟ್ರೂಮನ್ ಒಟ್ಟಿಗೆ ಜೊತೆಯಲ್ಲಿ ಮೋಟಾರ್ ಕಾರಿನಲ್ಲಿ ವೆಸ್ಟ್ ಮಿನ್ಸ್ಟರ್ ವಿಶ್ವವಿದ್ಯಾಲಯಕ್ಕೆ ಭೇಟಿಕೊಟ್ಟ ವಿವರಗಳನ್ನು ಓದಿ, ನೋಡಿ-ಕೇಳಬಹುದು. ಸೇಂತ್ ಮೇರಿ ಚರ್ಚ್ ನ, ಕೆಳಭಾಗದ ಮಜಲಿನಲ್ಲಿದೆ. ಅಲ್ಲಿಯೇ ಚರ್ಚಿಲ್ ರವರು ಸೋವಿಯತ್ ರಷ್ಯಾದ ರಣನೀತಿಗಳನ್ನು ಖಂಡಿಸಿ, ಕಬ್ಬಿಣದ ತೆರೆಯೆಂದು ಕರೆದು ಮಾಡಿದ, ಸುಪ್ರಸಿದ್ಧ ಭಾಷಣದ, ಸ್ಥಳವಿರುವುದು ಇಲ್ಲೇ- ವೆಸ್ಟ್ ಮಿನ್ಸ್ಟರ್ ಕಾಲೇಜ್ ಫುಲ್ಟನ್  ಸರ್ ಲೆಯೊನಾರ್ಡ್ ಸ್ಪೆನ್ಸರ್ ಚರ್ಚಿಲ್ ರವರಿಗೆ ಅಮೆರಿಕ ಸರ್ಕಾರ ಗೌರವಸದಸ್ಯತ್ವವನ್ನು ಕೊಟ್ಟು ಆದರಿಸಿ ಗೌರವಿಸಿತು ! ಅಮೆರಿಕದ ಗೌರವಸದಸ್ಯತ್ವಕ್ಕೆ ಹಕ್ಕುದಾರರಾದ ಮತ್ತೊಬ್ಬ ಫ್ರೆಂಚ್ ಸೈನ್ಯಾಧಿಕಾರಿಯೆಂದರೆ, 'ಲಾಫಯೆಟ್,' ರವರು. ಚರಿತ್ರೆಯ ಪುಟಗಳಲ್ಲಿ ಈಗಾಗಲೇ ದಾಖಲಾಗಿರುವ ಅನೇಕಾನೇಕ ಸಂಗತಿಗಳನ್ನು ವಿವರಿಸುವಂತಹ ಸನ್ನಿವೇಷಗಳನ್ನು ವೀಕ್ಷಕರು ಅವಲೋಕಿಸಲು ಅನುವುಮಾಡ್ಕೊಟ್ಟಿದ್ದಾರೆ. ಪುಸ್ತಕಗಳು, ಅವರು ಬಳಸುತ್ತಿದ್ದ ವಸ್ತುಗಳ ಸಂಗ್ರಹಗಳು, ಇತ್ಯಾದಿ. ಗೆಳೆಯರಿಗೆ ಕೊಡಲು ಅನೇಕ ಉಡುಗೊರೆಸಾಮಾನುಗಳು ಲಭ್ಯ. ವೆಸ್ಟ್ ಮಿನ್ಸ್ಟರ್ ಕಾಲೇಜ್, ಗೆ ಮಾರ್ಗರೆಟ್ ಥ್ಯಾಚರ್, ರೋನಾಳ್ಡ್ ರೀಗನ್, ಮಿಖೇಲ್ ಗರ್ಬಚಾವ್ ರವರೇ ಮೊದಲಾದ ವಿಶ್ವ ನಾಯಕರ   ಭಾಷಣಗಳ ತುಣುಕುಗಳ ಟೇಪ್ ಗಳನ್ನು ಕೇಳಿ ಆನಂದಿಸಬಹುದು. ಹಿಟ್ಲರ್ ನ ಭಾಷಣದ ಭಾಗಗಳು, ಆಗಿನಸಮಯದಲ್ಲಿ ಲಂಡನ್ ನಗರದಮೇಲೆ ಆದ ಬಾಂಬ್ ದಾಳಿಯ ಚಿತ್ರಗಳು, ಲಂಡನ್ ಸೈನ್ಯದಳವನ್ನೂ, ಹಾಗೂ ನಾಗರಿಕರನ್ನು ಹುರಿದುಂಬಿಸಿ ಮಾಡಿದ ಭಾಷಣಗಳ ಮಾಲೆಗಳು, ಚರ್ಚಿಲ್ ರ ಹ್ಯಾಟ್, ಉಡುಪುಗಳು, ಬರೆದ ಪತ್ರಗಳು, ಉಪಯೋಗಿಸುತ್ತಿದ್ದ ವಸ್ತುಗಳು, 'ಮ್ಯಾಜಿಕ್ ಲ್ಯಾಂಟ್ರಿನ್,' ಅವರ ಆಟಿಗೆವಸ್ತು. ಇವೆಲ್ಲ ಸನ್ನಿವೇಷಗಳನ್ನು ಅತಿ ಆಸಕ್ತಿಯಿಂದಬಣ್ಣಿಸುವ ವಾಲ್ಟರ್ ಕಾಂಕ್ರೈಟ್ ರವದ್ವನಿಯ ಪರಿ, ನಮ್ಮನ್ನು ಎರಡನೆಯ ಮಹಾಯುದ್ಧದ ರಣಾಂಗಣಕ್ಕೆ ಕರೆದೊಯ್ಯುತ್ತವೆ.
 
ಬ್ರೇಕ್ ಥ್ರೂ  ಎಡ್ವಿನ ಸ್ಯಾಂಡಿಸ್ ತಂದ 8 ಪುಟ್ಟ ಗೋಡೆಯ ಚೂರೂಗಳನ್ನು 11 X 32 ಅಡಿಯ ಉದ್ದಳತೆಯ ಗೋಡೆಯನ್ನು ನಿರ್ಮಿಸಿದ್ದಾರೆ. ಇದನ್ನು ಜರ್ಮನಿಯ  ಬ್ರಾಂಡನ್ಬರ್ಗ್ ಗೇಟಿನ ಹತ್ತಿರದಲ್ಲಿದ್ದ ಗೋಡೆಯ ಮುರಿದ ಭಾಗಗಳಿಂದ ಕಿತ್ತು ತರಲಾಗಿದೆ. ಅದರ ಗ್ರಾಫಿಟಿ ಬಣ್ಣ, ಹಾಗೂ  ಪದೇ  ಪದೇ ಬಳಸಿದ ಅನ್ವಾಹರ್ ಎನ್ನುವ ಪದಗಳು (ಸುಳ್ಳು, ಬರೀ ಸುಳ್ಳು ಎನ್ನುವ ಪದಗಳು) ಅವರಿಗೆ ಬಲು  ಪ್ರಿಯವಾಯಿತು. ವೆಸ್ಟ್ ಮಿನ್ಸಟರ್ ಕಾಲೇಜ್ ಕ್ಯಾಂಪಸ್  ಒಳಗಿನ ಹಾಲ್ ನಲ್ಲಿ ಸನ್. 1946 ರಲ್ಲಿ   ಐರನ್ ಕರ್ಟನ್ ಎಂದು ಸಂಬೋಧಿಸಿ ಭಾಷಣ ಮಾಡಿದ ಜಾಗದಲ್ಲಿಯೇ  ನಿರ್ಮಿಸಲಾಯಿತು. ಆಗ ಆ ಮಹತ್ವದ ಶಿಲ್ಪವನ್ನು  1990 ರ ನವೆಂಬರ್, 9 ರಂದು,  ಪ್ರೆಸಿಡೆಂಟ್ ರೋನಾಲ್ಡ್ ರೀಗನ್ ರವರ ರವಾರ್ಥವಾಗಿ  ಮುಡುಪಾಗಿಡಲಾಯಿತು. ಒಂದು ವರ್ಷದ ಹಿಂದೆ ಅಂದರೆ, 1989 ರ ನವೆಂಬರ್ 9 ರಂದು ಬರ್ಲಿನ ವಾಲ್ ನ್ನು  ಕೆಡವಲಾಗಿತ್ತು.