ಕೊಲೆಸ್ಟ್ರಾಲ್‌ ಇರುವವರು ಹಲಸಿನಹಣ್ಣು ತಿನ್ನಬಹುದಾ?

ಕೊಲೆಸ್ಟ್ರಾಲ್‌ ಇರುವವರು ಹಲಸಿನಹಣ್ಣು ತಿನ್ನಬಹುದಾ?

ಹಲಸಿನ ಹಣ್ಣಿನ ಘಮ ನಿಧಾನವಾಗಿ ಮನೆ ಮನೆಗಳಲ್ಲಿ ಆವರಿಸುತ್ತಿದೆ. ಬಹಳಷ್ಟು ಹಲಸಿನ ಕಾಯಿಗಳು ಹಣ್ಣಾಗುವುದೇ ಒಂದೆರಡು ಮಳೆ ಬಿದ್ದಬಳಿಕವೇ. ನಗರೀಕರಣಕ್ಕೆ ಗುರಿಯಾಗಿ ಬಹಳಷ್ಟು ಹಲಸಿನ ಮರಗಳು ಕಡಿಯಲ್ಪಟ್ಟಿವೆ. ಈ ಕಾರಣದಿಂದ ಒಂದು ಕಾಲದಲ್ಲಿ ಗಲ್ಲಿಗಲ್ಲಿಗಳಲ್ಲಿ ಇದ್ದ ಹಲಸಿನ ಮರಗಳು ನಗರಕ್ಕೆ ನಾಲ್ಕು ಎಂಬಂತಾಗಿದೆ. ನೂರಾರು ವರ್ಷ ಹಳೆಯ ಮರಗಳು ಧರೆಗೆ ಉರುಳಿ ಬಹಳ ಸಮಯವೇ ಆಗಿದೆ. ಆಗೆಲ್ಲಾ ಹಲಸಿನ ಹಣ್ಣುಗಳು ಮರದ ಕೆಳಗೆ ಬಿದ್ದು ಕೊಳೆತು ಹೋದರೂ ಕೇಳದಿರುವ ಕಾಲವಿತ್ತು. ಆದರೆ ಈಗ ಹಲಸಿನ ಹಣ್ಣಿನ ಸೊಳೆಗಳನ್ನು ಅಂದವಾಗಿ ಕತ್ತರಿಸಿ ತೆಗೆದು ಗಾಜಿನ ಪೆಟ್ಟಿಗೆಯಲ್ಲಿಟ್ಟು ೨೦೦-೨೫೦ ರೂ. ಕೆಜಿಗೆ ಮಾರುವ ಕಾಲಬಂದಿದೆ. ಕೆಟ್ಟ ಮೇಲೆ ಬುದ್ಧಿ ಬಂದರೇನು ಫಲ? ಹಲಸಿನಲ್ಲೂ ಬಹಳಷ್ಟು ಪೌಷ್ಟಿಕಾಂಶಗಳಿವೆ. ಅವುಗಳ ಬಗ್ಗೆ ಗಮನಿಸೋಣ. 

ಹಲಸಿನ ಹಣ್ಣು ರುಚಿಕರವಾದ ಹಣ್ಣಾಗಿದ್ದು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದೆ. ಆದರೆ ಇದು ಮಧುಮೇಹಿಗಳಿಗೆ ಒಳ್ಳೆಯದಲ್ಲ. ಆದರೆ ಕೊಲೆಸ್ಟ್ರಾಲ್ (ಅಧಿಕ ಕೊಬ್ಬಿನಾಂಶ) ಇರುವವರು ಹಲಸಿನಹಣ್ಣು ತಿನ್ನಬಹುದೇ? ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಹೃದಯ ಸಂಬಂಧಿ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಹಾಗಾಗಿ ಕೊಲೆಸ್ಟ್ರಾಲ್‌ನ್ನು ಹಿಡಿತದಲ್ಲಿರುವುದು ಮುಖ್ಯ ಕೊಲೆಸ್ಟ್ರಾಲ್ ಇರುವ ವ್ಯಕ್ತಿ ಹಲಸಿನಹಣ್ಣನ್ನು ತಿನ್ನಬಹುದೇ ಎನ್ನುವುದನ್ನು ನೋಡೋಣ ಹಲಸಿನಹಣ್ಣಿನ ಸೀಸನ್ ಇದೀಗ ಬಂದಿರುವುದರಿಂದ ಹಲಸು ಯಥೇಚ್ಛವಾಗಿ ಮಾರುಕಟ್ತೆಯಲ್ಲಿ ಸಿಗುತ್ತಿದೆ.

ಹಲಸಿನ ಹಣ್ಣಿನಲ್ಲಿರುವ ಪೋಷಕಾಂಶಗಳು: ಹಲಸಿನ ಹಣ್ಣು ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿದ್ದು, ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹಲಸಿನ ಹಣ್ಣಿನಲ್ಲಿ ಕಾರ್ಬೋಹೈಡ್ರೆಟ್‌ಗಳು, ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದರಲ್ಲಿ ಪೊಟ್ಯಾಸಿಯಮ್, ಉತ್ಕರ್ಷಣ ನಿರೋಧಕಗಳು, ಒಮೆಗಾ ೩ ಮತ್ತು ಒಮೆಗಾ ೬ ಕೊಬ್ಬಿನಾಮ್ಲಗಳು ಕಂಡುಬರುತ್ತವೆ. ಇದರ ಸೇವನೆಯು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಹಲಸಿನ ಹಣ್ಣಿನಲ್ಲಿ ನಾರಿನಂಶ ಹೆಚ್ಚಿದೆ: ಹಲಸಿನ ಹಣ್ಣಿನಲ್ಲಿರುವ ಹೆಚ್ಚಿನ ಫೈಬರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನಲ್ಲಿರುವ ನಾರಿನಂಶವು ಕರುಳಿನಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಿಂದ ಅದನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ: ಹಲಸಿನ ಹಣ್ಣಿನಲ್ಲಿ ಪ್ಲೇವನಾಯ್ಡ್ ಗಳು ಮತ್ತು ಫೈಟೋನ್ಯೂಟ್ರಿಯೆಂಟ್ ಗಳಂತಹ ಉತ್ಕರ್ಷಣ ನಿರೋಧಕಗಳು ಇರುತ್ತವೆ, ಇದು ನರಗಳನ್ನು ಆರೋಗ್ಯವಾಗಿಡುತ್ತದೆ ಮತ್ತು ಕೊಲೆಸ್ಟ್ರಾಲ್‌ ಆಕ್ಸಿಡೀಕರಣವನ್ನು ತಡೆಯುತ್ತದೆ. ಆಕ್ಸಿಡೀಕೃತ ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಸಂಗ್ರಹವಾಗಬಹುದು ಮತ್ತು ಅಡಚಣೆಗಳನ್ನು ಉಂಟುಮಾಡಬಹುದು, ಇದು ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಕೊಲೆಸ್ಟಾಲ್ ಅನ್ನು ನಿಯಂತ್ರಣದಲ್ಲಿಡುವುದು ಬಹುಮುಖ್ಯ. 

ಪೊಟ್ಯಾಸಿಯಮ್ ಮತ್ತು ಮೆಗ್ರೀಸಿಯಮ್: ಪೊಟ್ಯಾಸಿಯಮ್ ಮತ್ತು ಮೆಗ್ನಿಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಹೆಚ್ಚಾಗಿ ಜೊತೆಯಾಗೇ ಇರುತ್ತದೆ. ಇವೆರಡು ಹೆಚ್ಚಾದರೆ ಹೃದಯದ ಕಾಯಿಲೆಯ ಅಪಾಯದ ಪ್ರಮಾಣ ಹೆಚ್ಚಾಗುತ್ತದೆ. ಹಲಸಿನ ಹಣ್ಣು ಸೇವಿಸುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯವನ್ನು ಸುರಕ್ಷಿತವಾಗಿಡಲು ಸಹಾಯವಾಗುತ್ತದೆ. ಹಲಸಿನ ಕಾಯಿ ಕಡಿಮೆ ರೈಸೆಮಿಕ್ ಸೂಚಿಯನ್ನು ಹೊಂದಿದ್ದು, ಇದರಿಂದಾಗಿ ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆದರೆ ಮಧುಮೇಹ ರೋಗಿಗಳಿಗೆ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯ ಹೆಚ್ಚು, ಆದ್ದರಿಂದ ಹಲಸಿನ ಹಣ್ಣಿಗಿಂತ ಹಲಸಿನ ಕಾಯಿಯನ್ನು ಪಲ್ಯದ ಮೂಲಕ ಮಧುಮೇಹಿಗಳು ತಿನ್ನುವುದು ಉತ್ತಮ ಎನ್ನಲಾಗುತ್ತದೆ.

ಅಧಿಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಆಹಾರಕ್ರಮದ ಬದಲಾವಣೆಗಳು ಹಲಸಿನಹಣ್ಣು ಪೋಷಕಾಂಶಗಳಿಂದ ಕೂಡಿದ ಹಣ್ಣಾಗಿದ್ದು, ಇದು ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೈಬರ್, ಉತ್ಕರ್ಷಣ ನಿರೋಧಕಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ನೀವು ಅಧಿಕ ಕೊಲೆಸ್ಟ್ರಾಲ್ ನಿಂದ ಬಳಲುತ್ತಿದ್ದರೆ, ನಿಮ್ಮ ಆಹಾರದಲ್ಲಿ ಹಲಸಿನ ಹಣ್ಣನ್ನು ಸೇರಿಸುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಹಲಸಿನ ಹಣ್ಣಿನ ಸೀಸನ್ ನಲ್ಲಿ ನಿಯಮಿತವಾಗಿ ಹಲಸನ್ನು ತಿನ್ನುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಿ. 

‘ಹಸಿದು ಹಲಸು, ಉಂಡು ಮಾವು’ ಈ ಮಾತನ್ನು ಯಾವಾಗಲೂ ನೆನಪಿನಲ್ಲಿ ಇಟ್ಟುಕೊಂಡಿರಿ. ಬೆಳಿಗ್ಗೆಯ ಸಮಯ ಹೊಟ್ಟೆಯು ಖಾಲಿ ಇರುವಾಗ ಹಲಸು ತಿನ್ನಿ. ಏಕೆಂದರೆ ಹಲಸು ಜೀರ್ಣವಾಗುವುದು ನಿಧಾನ. ಸಂಜೆ ಅಥವಾ ರಾತ್ರಿಯ ಹೊತ್ತು ತಿಂದರೆ ಅಜೀರ್ಣದ ಸಮಸ್ಯೆ ಪ್ರಾರಂಭವಾಗಬಹುದು. ಊಟದ ಬಳಿಕ ಮಾವಿನ ಹಣ್ಣಿನ ಸೇವನೆ ಸೂಕ್ತ. ಏಕೆಂದರೆ ಮಾವು ಬೇಗನೇ ಜೀರ್ಣವಾಗುತ್ತದೆ. ಮಾವಿನ ಹಣ್ಣಿನಲ್ಲಿರುವ ಆಮ್ಲವು ನಿಮ್ಮ ಹೊಟ್ಟೆ ಖಾಲಿ ಇದ್ದರೆ ವ್ಯತಿರಿಕ್ತ ಪರಿಣಾಮವನ್ನು ಬೀರಬಲ್ಲದು. ಈ ಕಾರಣಕ್ಕೇ ಹಸಿವಿರುವಾಗ ಹಲಸು, ಉಂಡಾಗ ಮಾವು ಸೇವಿಸಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ