ಕೋಟಿ ವಚನಗಳು??

ಕೋಟಿ ವಚನಗಳು??

Comments

ಬರಹ

ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ.
ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ.

ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ
ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು ಸಾಸಿರ (ಬಸವಣ್ಣನ ವಚನಬಗ್ಗೆ)
ಎಮ್ಮಯ್ಯಗಳ ವಚನ ವಚನಕ್ಕೊಂದು (???..)
ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾವಿರ
ಗಂಗಾಂಬಿಕೆಯ ವಚನ ಲಕ್ಷದ ಎಂಟು ಸಾಸಿರ,
ಎಮ್ಮ ನಾಗಾಯಿಯ ವಚನ ಮೂರು ಲಕ್ಷದ ತೊಂಬತ್ತಾರು ಸಾಸಿರ
ಮಡಿವಾಳಣ್ಣನ ವಚನ ಮೂರು ಕೋಟಿ ಮುನ್ನೂರು
ಹಡಪದಪ್ಪಯ್ಯಗಳ ವಚನ ಹನ್ನೊಂದು ಸಾವಿರ
ಮರಳುಸಿದ್ಧನ ವಚನ ಅರವತ್ತೆಂಟು ಸಾವಿರ
ಇಂತಪ್ಪ ವಚನದ ರಚನೆಯ ಬಿಟ್ಟು
ಕುತ್ಸಿತ ವಾಕ್ಯಾಲಂಕಾರ (ಕಾವ್ಯಾಲಂಕಾರ)ವ ನೋಡುವರ ನೋಡಿ
ಹುಡಿಮಣ್ಣ ಹೊಯ್ಯದೆ ಮಾಬನೆ ಮಹಾದೇವ
ಕಪಿಲಸಿದ್ಧ ಮಲ್ಲಿಕಾರ್ಜುನ
-ಸಿದ್ಧರಾಮೇಶ್ವರ

ಅರವತ್ತೆಂಟು ಸಹಸ್ರ ವಚನಗಳ ಹಾಡಿ ಹಾಡಿ
ಸೋತಿತೆನ್ನ ಮನ ನೋಡಯ್ಯ
ಹಾಡುವದೊಂದೇ ವಚನ, ನೋಡುವದೊಂದೇ ವಚನ
ವಿಷಯ ಬಿಟ್ಟು ನಿರ್ವಿಷಯವಾಗುದೊಂದೇ ವಚನ
ಕಪಿಲಸಿದ್ಧ ಮಲ್ಲೇಶನಲ್ಲಿ
-ಸಿದ್ಧರಾಮೇಶ್ವರ

ಈವರೆಗೂ ಅಲ್ಲಿ ಇಲ್ಲಿ ಕೂಡಿ ಕಲೆ ಹಾಕಿದ್ದು ಕೇವಲ 20 ಸಾವಿರವೂ ದಾಟುವುದಿಲ್ಲ. ಒಂದು ವೇಳೆ ಎಲ್ಲ ವಚನ ಭಂಡಾರವನ್ನು ಕಾಪಾಡಿಕೊಂಡು ಬಂದಿದ್ದರೆ ಕನ್ನಡ ಸಾಹಿತ್ಯದ ಸಿರಿತನ ಎವರೆಸ್ಟನ್ನು ಮೀರಿ ನಿಲ್ಲುತ್ತಿತ್ತು ಅಲ್ಲವೆ.
ಅದಕ್ಕೆ ಅನಿಸುತ್ತೆ ಹರಿಹರ,ರಾಘವಾಂಕ, ಷಡಕ್ಷರ, ಭೀಮಕವಿ ಮೊದಲಾದವರು ಶರಣರ ಮೇಲೆ ಪುರಾಣ, ರಗಳೆ, ಹಿರಿಗಬ್ಬಗಳನ್ನು ಬರೆದು ಕೊಂಡಾಡಿದ್ದು... :)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet