ಕೋಡುಬಳೆ

ಕೋಡುಬಳೆ

ತಯಾರಿಸುವ ವಿಧಾನ

ಅಕ್ಕಿಹಿಟ್ಟನ್ನು ಬಾಂಡಲೆಯಲ್ಲಿ ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ಹುರ್ಗಡ್ಲೆ ಪುಡಿ ಮಾಡಿಕೊಂಡು ಒಂದು ಸೇರಿಗೆ ಒಂದು ಪಾವು ಹುರ್ಗಡ್ಲೆ ಪುಡಿ ಬೆರೆಸಬೇಕು. ಒಂದು ಕಪ್ಪು ಎಣ್ಣೆ ಬಾಂಡಲೆಯಲ್ಲಿಟ್ಟು ಒಂದು ಚಮಚ ಸಾಸಿವೆ ಹಾಕಿ, ಸಿಡಿದ ಮೇಲೆ ಇಂಗು ಹಾಕಿ ಒಣ ಮೆಣಸಿನಕಾಯಿ ಹುರಿದು ತೆಗೆಯಬೇಕು. ಇದರ ಜೊತೆ ಕೊಬ್ಬರಿ ಅಥವಾ ತೆಂಗಿನಕಾಯಿ ತುರಿಯನ್ನು (ಕಾಯಿ ಹಾಕುವಾಗ ಸ್ವಲ್ಪ ಬಿಸಿ ಮಾಡಿಕೊಂಡರೆ ಒಳಿತು) ಸೇರಿಸಿ ಪುಡಿ ಮಾಡಿಕೊಳ್ಳಬೇಕು. ಅದನ್ನು ಹಿಟ್ಟಿಗೆ ಬೆರೆಸಿ ರುಚಿಗೆ ತಕ್ಕಂತೆ ಉಪ್ಪು ಬೆರೆಸಿ ಬಾಂಡಲೆಯಲ್ಲಿ ಉಳಿದಿರುವ ಎಣ್ಣೆಯನ್ನು ಹಿಟ್ಟಿಗೆ ಬೆರೆಸಿ ಕಲಸಿಕೊಳ್ಳುವುದು. ಸ್ವಲ್ಪ ಸ್ವಲ್ಪವಾಗಿ ಹಿಟ್ಟನ್ನು ನಾದಿಕೊಂಡು ಕೋಡುಬಳೆ ಆಕಾರದಲ್ಲಿ ಒತ್ತುಮಣೆಯ ಮೇಲೆ ಹೊಸಿದುಕೊಂಡು ಕಾದ ಎಣ್ಣೆಯಲ್ಲಿ ಹದವಾಗಿ ಸಂಪಿಗೆ ಬಣ್ಣ ಬರುವಂತೆ ಕರೆಯುವುದು.

ಸಾಂಪ್ರದಾಯಿಕ ತಿನಿಸು

೧೫ ದಿವಸಗಳವರೆಗೂ ಇಟ್ಟು ತಿನ್ನಬಹುದು

90

ತಲೆತಲಾಂತರದಿಂದ ರೂಢಿಗೆ ಬಂದಿರುವ ಸಾಂಪ್ರದಾಯಿಕ ತಿನಿಸು.

ಒಂದು ಸೇರು ಅಕ್ಕಿ ಹಿಟ್ಟು

ಒಂದು ಪಾವು ಹುರಿಗಡಲೆ

ಒಣಮೆಣಸಿನಕಾಯಿ - ಒಂದು ಸೇರಿಗೆ ೧೦೦ ಗ್ರಾಮಿನಂತೆ

ಉಪ್ಪು

ಇಂಗು

ಎಳ್ಳು ಅಥವಾ ಜೀರಿಗೆ ಇಷ್ಟಕ್ಕನುಸಾರ

ಒಣ ಕೊಬ್ಬರಿ - ಒಂದು ಹೋಳು ಅಥವಾ ತೆಂಗಿನಕಾಯಿ ತುರಿ