ಕೋಡುಬಳೆ

ಕೋಡುಬಳೆ

ಕವನ

ಅಮ್ಮ ಅಮ್ಮ ನನಗೆ ಕೊಡೆ

ಕೊಡದಿರೆ ನಾನು ನಿನ್ನ ಬಿಡೆ

ಗುಂಡಗೆ ಇರುವ ಕೋಡುಬಳೆ

ಎರಡು ಕೈಯಲ್ಲಿ ತುಂಬಿಬಿಡೆ.

 

ಕುರುಂ ಕುರುಂ ಕೋಡುಬಳೆ

ಗರಿಗರಿಯಲ್ಲಿ ಕೋಡಿಲ್ಲದ ಬೇಳೆ

ಬಿಸಿಬಿಸಿ ಕಾಫಿಯ ಜೊತೆಯಲ್ಲಿ

ಚುಮುಚಮು ಚಳಿಯ ವೇಳೆಯಲಿ.

 

ಧಪಧಪ ಸುರಿಯುವ ಮಳೆಯಲ್ಲಿ

ಕೋಡುಬಳೆ ಮೆಲ್ಲಲು ಬಳಿಯಲ್ಲಿ

ಒಂದರ ಮೇಲೆ ಇನ್ನೊಂದರಲ್ಲಿ

ಬಟ್ಟಲು ಖಾಲಿಯು ಆಗುವುದಲ್ಲಿ.

 

ಕಾವೇರಿ ಮಾಡಿದ ಕೋಡುಬಳೆ

ರುಚಿಗೆಲ್ಲಿದೆ ಸರಿಸಾಟಿ ನೀ ಹೇಳೆ

ಕೈಗೊಲಿದಿದೆ ಮಾಡುವ ಕಲೆ

ತಿಂದವರೆನ್ನುವರು ಭಲೇ ಭಲೇ.

 

ಹೊಸೆದೊಸೆದು ಮಾಡುವ ಕೋಡುಬಳೆ

ಮಧುರ ನೆನಪಿಗಲ್ಲಿಹುದು ವೇಳೆ

ಕೋಡುಬಳೆಯದೋ ಬಲು ರುಚಿಯಲ್ಲಿ

ಅಮ್ಮನ ಕೈ ರುಚಿಗೆ ಸರಿಸಾಟಿಯು ಎಲ್ಲಿ??

                            (ಅಮ್ಮನ ನೆನಪಿನಲ್ಲಿ)

-ವೀಣಾ ಕೃಷ್ಣಮೂರ್ತಿ, ದಾವಣಗೆರೆ.

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್