ಕೋದಂಡ ರಾಮ

ಕೋದಂಡ ರಾಮ

ಕವನ

ಶ್ರೀರಾಮ ಜಯರಾಮ ಜಯಜಯ ರಾಮ

ರಘುಕುಲೋತ್ತಮ ಸೀತಾರಾಮ

ಕೌ‌ಸಲ್ಯಾನಂದನ ರಾಜಾರಾಮ

ಅನುಜ ಲಕ್ಷ್ಮಣನ ಪ್ರೀತಿಯ ರಾಮ

 

ಅಯೋಧ್ಯೆಯ ಕುಲತಿಲಕ ರಾಮ

ಶರಣ ವಿಭೀಷಣನ ಹರಸಿದ ರಾಮ

ವೀರ ಹನುಮನು ಭಜಿಸಿದ ರಾಮ

ಭಕ್ತರ ಹೃದಯದ ಆನಂದ ರಾಮ

 

ರಕ್ಕಸರ ಹುಟ್ಟಡಗಿಸಿದ ಧೀರಕಲಿ ರಾಮ

ದುರುಳೆ ಶೂರ್ಪನಕಿಗೆ ಬುದ್ಧಿಕಲಿಸಿದ ರಾಮ

ತಾಟಕಿಯ ಸಂಹರಿಸಿ ಕ್ಷೇಮ ನೀಡಿದ ರಾಮ

ಮುನಿಜನ ವಂದಿತ ಮಹಾಮಹಿಮ ರಾಮ

 

ಸಾಗರಕೆ ಸೇತುವೆ ನಿರ್ಮಿಸಿದ ರಾಮ

ಕಪಿಗಡಣ ಸಹಕಾರ ಪುಣ್ಯವದು ರಾಮ

ಸುಗ್ರೀವನ ಸಖ್ಯ ಬೆಳೆಸಿದ ರಾಮ

ಕಪಿವೀರ ವಾಲಿಗೆ ಮೋಕ್ಷ ನೀಡಿದ ರಾಮ

 

ರಾಮನಾಮದ ಮಹಿಮೆ ಅಪಾರ ರಾಮ

ಬೇಡುವೆವು ಸ್ಮರಿಸುವೆವು ದಿನನಿತ್ಯ ರಾಮ

ಕೃಪೆದೋರು ಅನವರತ ದಶರಥಾತ್ಮಜ ರಾಮ

ಪಿತೃವಾಕ್ಯ ಪಾಲನಾ ಕೋದಂಡರಾಮ

-ರತ್ನಾ ಕೆ ಭಟ್,ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್