ಕೋಪದ ಗೆಳತಿ

ಕೋಪದ ಗೆಳತಿ

ಬರಹ

ಎಲ್ಲಿಂದಲೋ ಬಂದೆ
ನನ್ನ ಮನದಲಿ ನಿಂದೆ
ಉಸಿರು ಉಸಿರಲೇ ಬೆರೆತೆ,
ನಾ ಅರಿಯುವಾ ಮೊದಲೆ
ನನ್ನೇ ನೀನು ಮರೆತೆ.........

ಅಡಿಗಡಿಗೆ ಕೂಗಾಡಿ
ಕೋಪವನು ನೀ ಮಾಡಿ
ನನ್ನ ನೀನೂ ಕಾಡಿ,
ಅರಿಯದಾದೆಯ ಗೆಳತಿ
ನನ್ನ ದುಃಖಕದೇ ದಾರಿ.....

ಮೌನವನು ನೀ ಮುರಿದು
ಪ್ರೀತಿಯಿಂದಲಿ ಎರಡು
ಮಾತುಗಳ ನೀ ಆಡು,
ಸೇರು ನನ್ಮನಸಾ ಗೂಡು
ಕೊಡದೆ ನನಗೆ ನೋವು.....