ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ

ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ

ಕವನ

ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ..

ನನ್ನೆದೆಯಲ್ಲಿ ಮಾಡಿಹೋದೆ ನೀ ಎಂದೂ ಆರದ ಗಾಯವ..

ನೀ ನನ್ನೊಡನೆ ಕಳೆದ ಮಧುರ ಕ್ಷಣಗಳೆಲ್ಲ ಹುಸಿಯೇ..

ನನ್ನೊಡನೆ ಮಾತಾಡಿದ ಮಾತುಗಳೆಲ್ಲ ಬರಿ ನಾಟಕವೇ...

ನನ್ನ ಭಾವನೆಗಳ ಜೊತೆ ಆಟವಾಡಿದೆ ಗೆಳತಿ..

ನನ್ನ ಮನದ ತೊಳಲಾಟವ ನೀ ಅರಿಯದಾದೆ ಗೆಳತಿ..

ಸಿಹಿಗಾಳಿಯಾಗಿ ಬಂದ ನೀ ಎಬ್ಬಿಸಿ ಹೋದೆ ಬಿರುಗಾಳಿಯ..

ಕಾಣಿಸದಾಯಿತೆ ನನ್ನೀ ಮನದ ಕಣ್ಣೀರ ಭೋರ್ಗರೆತ...

ನಿಸ್ವಾರ್ಥ ಪ್ರೀತಿಯ ಕೊಟ್ಟೆ ನಾ ನಿನಗೆ..

ಸ್ವಾರ್ಥಿಯಾಗಿ ಹೊರಟು ಹೋದೆಯಾ ಗೆಳತಿ..

ಹೇಳಿ ಹೋಗು ಕಾರಣವ ಒಮ್ಮೆ..

ಕೋಪವೇತಕೆ ಗೆಳತಿ ನನ್ನ ಮೇಲೆ ಕೋಪವೇತಕೆ

Comments