ಕೋಮಲ್ ಕರಗಿದ ಕ್ಷಣ ದೇಹ ಸುಂದರ !

ಕೋಮಲ್ ಕರಗಿದ ಕ್ಷಣ ದೇಹ ಸುಂದರ !

ಕೋಮಲ್ ಯೌವ್ವನ ವಾಪಾಸ್ ಆಗಿದೆ. ಗುಂಡ್ ಗುಂಡಾಗಿದ್ದ ದೇಹ ಬಿಲ್ಲಿನಂತೆ ಆಗಿದೆ. ನೋಡಿದಾಕ್ಷಣ ಇದು ನಟ ಕೋಮಲ್ಲಾ ? ಅನ್ನೋ ಹಾಗೆ ಕೋಮಲ್ ಬದಲಾಗಿದ್ದಾರೆ. ಈ ಬದಲಾವಣೆ ಹಿಂದಿದೆ ಒಂದು ರಹಸ್ಯ. ಅದು ಏನೂ.? ಮುಂದೆ ಇದೆ. ಓದುತ್ತಾ ಹೋಗಿದೆ.
----
ಒಂದು ಸಿಟ್ಟು. ಒಂದು ದ್ವೇಷ. ಒಂದು ನೋವು. ಎಲ್ಲ ಭಾವಗಳೂ ಅರ್ಥ ಹೊಂದಿವೆ. ಒಂದು ಛಲ. ಏನೇಲ್ಲ ಮಾಡಿಸುತ್ತದೆ. ಯಾರೋ ನೀನು ದಪ್ಪ ಅಂದ್ರೆ ಸಾಕು. ನೋವು ಆಗುತ್ತದೆ. ಬೆಳಗ್ಗೆ ಎದ್ದು ಜಾಗಿಂಗ್ ಸೂಟ್ ಹಾಕಿಕೊಂಡು ಒಡಿದ್ದೇ ಓಡಿದ್ದು. ಎಷ್ಟ ದಿನ. ಆಡಿದವರ ಮಾತು ಮರೆತು ಹೋಗೊವರೆಗೂ. ಇನ್ಯಾರೋ ನೀನು ಕಡ್ಡಿ ಥರ ಸಣ್ಣ ಅಂದ್ರೆ ಮುಗಿದೇ ಹೋಯಿತು. ಸಿಕ್ಸ್ ಪ್ಯಾಕ್ ಸಲ್ಮಾನ್ ನೆನಪಿಗೆ ಬರ್ತಾರೆ. ಮುಂಜಾನೆದ್ದು ನೇರವಾಗಿ ಜಿಮ್ ಗೆ ಹೋಗೋದೆ.

ಆದರೆ, ಸಿನಿಮಾ ನಟರ ಜೀವನ ಹಾಗಲ್ಲ. ದೇಹವನ್ನ ದಂಡಿಸಬೇಕು. ಬೇಕು ಅಂದ್ರೆ, ಸಣ್ಣಗೆ ಹಾಕಬೇಕು. ಇದು ಅವರ ಜೀವನ ಶೈಲಿನೇ ಆಗಿ ಬಿಡುತ್ತದೆ. ದೇಹದ ತೂಕ ಇಳಿಸೋದು. ಹೆಚ್ಚಿಸೋದು. ಹೀಗೆ ಮಾಡೋದರಿಂದ ಆರೋಗ್ಯದಲ್ಲೂ ಏರು ಪೇರು ಆಗುತ್ತದೆ. ಅಂತಹ ಅನೇಕ ಕಲಾವಿದರು ನಮ್ಮ ಕನ್ನಡದಲ್ಲಿದ್ದಾರೆ. ಆದರೆ, ಯಾವುದಕ್ಕೂ ತೆಲೆ ಕೆಡೆಸಿಕೊಳ್ಳದೇನೆ, ಪ್ರತಿಭೆಯಿಂದಲೇ ಮೇಲೆ ಬಂದು, ಚಿತ್ರದಿಂದ ಚಿತ್ರಕ್ಕೆ ಖ್ಯಾತಿನೂ ಪಡೆದ ನವರಸ ನಾಯಕ ಜಗ್ಗೇಶ್ ಕೀರ್ತಿ ಜತೆಗೆ ದೇಹದ ತೂಕವನ್ನೂ ಗಳಿಸಿಬಿಟ್ಟಿದ್ದರು.

ಆದರೆ, ಅದ್ಯಾರೋ ಜಗ್ಗೇಶ್ ದೇಹವನ್ನ ನೋಡಿ ಅಂದೇ ಬಿಟ್ಟರು. ಹೊಟ್ಟೆ ಬಿಟ್ಟುಕೊಂಡು ಅದೇನ್ ಆಕ್ಟ್ ಮಾಡ್ತಾರೋ. ಇವರೂ ಒಬ್ಬರು ಹೀರೋನಾ ಅಂತ. ಅಲ್ಲಿಗ್ಗೆ ಜಗ್ಗೇಶ್ ಪಣತೊಟ್ಟರು. ಸಣ್ಣ ಆಗಬೇಕು ಅಂತ. ಅದು ಕಠಿಣ ಪರಿಶ್ರಮದಿಂದ ಫಲಿಸಿದೆ. ಮೊದಲಿನ ಚಿತ್ರಗಳಲ್ಲಿ ಸಣ್ಣಗೆ ಇದ್ದ, ಅದೇ ಜಗ್ಗೇಶ್ ನಿಮಗೆ ಈಗ ಕಂಡು ಬರುತ್ತಾರೆ. ಕಠಿಣ ಆಹಾರ ಪದ್ಧತಿ. ಪೌಷ್ಟಿಕ ಆಹಾರ ಸೇವನೆ. ಸತತ ವ್ಯಾಯಾಮ. ಜಗ್ಗೇಶ್ ಸ್ಲಿಮ್ ಆದ ಹಿಂದಿನ ರಹಸ್ಯೆ.

ಸೋದರ ಕೋಮಲ್ ಕುಮಾರ್ ಕೂಡ ಅಂತಹ ಅಚ್ಚರಿ ಮೂಡಿಸಿದ್ದಾರೆ. ಕೋಮಲ್ ಅಭಿನಯದ ಡೀಲ್ ರಾಜಾ ಚಿತ್ರದ ಪ್ರೆಸ್ ಮೀಟ್ ಇತ್ತು. ಅಲ್ಲಿ ಕೋಮಲ್ ಬಂದಿದ್ದರು. ಬಂದಿರೋರಿಗೆ, ಕಂಡೋರಿಗೆ ಒಂದು ಅಚ್ಚರಿ. ಇದು ಕೋಮಲ್ಲೇ ಅನ್ನೋ ಪ್ರಶ್ನೆ. ಆ ಪ್ರಶ್ನೆಗಳ ಮಧ್ಯೇನೆ ಪ್ರೆಸ್ ಮೀಟ್ ಕೂಡ ಮುಗಿದು ಹೋಯ್ತು. ಕೋಮಲ್ ಮಾತಿಗೆ ಸಿಕ್ಕರು ನೋಡಿ. ಆಗ ಬಿಚ್ಚಿಕೊಂಡ ಸತ್ಯ, ನಿಜಕ್ಕೂ ಸ್ಪೂರ್ತಿದಾಯಕ. ಗುಂಡ್​ ಗುಂಡಾಗಿದ್ದ ಕೋಮಲ್ ತಳ್ಳಗೆ ಆಗಿದ್ದಾರೆ. ಹೊಟ್ಟೆ ಕರಗಿ ಹೋಗಿದೆ. ಅದರ ಕುರುಹೂ ಇಲ್ಲ. ಗಲ್ಲದ ಮೇಲೆ ಇದ್ದ ಕೊಬ್ಬ ಕರಗಿದೆ. ಕೋಮಲ್ ಯೌವ್ವನ ವಾಪಾಸಾಗಿದೆ. ದೇಹ ಹಗುರಗೊಂಡಿದೆ. ಮಾತಲ್ಲಿ ವಿಶ್ವಾಸ ಮೂಡಿದೆ.

ಕೋಮಲ್ ಯೋಗದಿಂದ ಸ್ಲಿಮ್ ಆಗಿದ್ದಾರೆ. ಸತತ ಜಿಮ್​ನ್ಯಾಸ್ಟಿಕ್ ದಿಂದ ದೇಹ ಕರಗಿದೆ. ಕಠಿಣ ಆಹಾರ ಪದ್ಧತಿಗೆ ದೇಹ ಬಿಲ್ಲಿನಂತೆ ಬಾಗಿದೆ. ಸುಮಾರು 6 ತಿಂಗಳ ಕಷ್ಟಪಟ್ಟದಕ್ಕೆ ಕೋಮಲ್ ಸಣ್ಣ ಆಗಿದ್ದಾರೆ. ದೇಹದಲ್ಲಿದ್ದ ಅಷ್ಟೂ ಕೊಬ್ಬು ಕರಗಿದೆ.

ಕೋಮಲ್ ಈ ರೂಪ ಕಂಡರೋ ಅಚ್ಚರಿ ಪಡುತ್ತಿದ್ದಾರೆ. ಕಥೆ ಹೇಳೊಕೆ ಬರೋರು ಕೋಮಲ್ ಕಂಡು, ಬೇರೆ ಥರದ ಕಥೆಯನ್ನೇ ಮಾಡಿಕೊಳ್ತಿದ್ದಾರೆ. ಕೋಮಲ್ ತಮ್ಮ ಜೀವನದ ಈ ಬದಲಾವಣೆ ಕಂಡು ಖುಷಿಪಟ್ಟಿದ್ದಾರೆ. ತಮ್ಮ ಈ ಭಾರೀ ಬದಲಾವಣೆಗೆ ನೆರವಾದ ಪತ್ನಿಯನ್ನ, ಮಗಳನ್ನ ನೆನಪಿಸಿಕೊಳ್ತಾರೆ. ಕೋಮಲ್ ಚಿತ್ರ ಜೀವನ ಈಗ ಮತ್ತೊಂದು ದಿಕ್ಕು ಪಡೆಯೋ ಸಾಧ್ಯತೆ ಇದೆ.ನೋಡುಗರೂ ಅದನ್ನ ನಿಜಕ್ಕೂ ಅಲ್ಲಗಳೆಯೋದಿಲ್ಲ.
-ರೇವನ್ ಪಿ.ಜೇವೂರ್​