ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು

ಕೋಮುಗಲಭೆಗಳಲ್ಲಿ ಸಾಯುವುದು ಮನುಷ್ಯರು

ಬರಹ

ವರ್ತಮಾನದ ಸೋಷಿಯೋಪೊಲಿಟಿಕಲ್ (ಸಮಾಜೋರಾಜಕೀಯ?) ಸಂದರ್ಭದ ಅತಿದೊಡ್ಡ ಸಮಸ್ಯೆ ಎಂದರೆ ನಮಗರಿವಿಲ್ಲದಂತೆಯೇ ನಾವು ಜಾತೀವಾದಿಗಳೋ, ಮತೀಯವಾದಿಗಳೋ, ಕೋಮುವಾದಿಗಳೋ ಆಗಿಬಿಡುವುದು. ಅಂದರೆ ನಿರ್ದಿಷ್ಟ ವಾದವೊಂದನ್ನು ಸಮರ್ಥಿಸಲು ಹೊರಡು ಅದರ ಕುರುಡು ಸಮರ್ಥಕರಾಗಿಬಿಡುವ ಇಲ್ಲವೇ ಯಾವುದೋ ಒಂದು ವಾದವನ್ನು ಟೀಕಿಸಲು ಹೊರಟು ಅದರ ಕುರುಡು ವಿಮರ್ಶಕರಾಗಿಬಿಡುವುದು. ಕರ್ನಾಟಕದಲ್ಲಿ ಕೋಮುವಾದಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಎಲ್ಲಾ ಚರ್ಚೆಗಳಲ್ಲಿಯೂ ಈ ಅತಿಯನ್ನು ಕಾಣಬಹುದು.

ಈ ಅತಿಗಳನ್ನು ಮೀರಿ ನಮ್ಮ ಪರಂಪರೆಯೊಳಗೇ ನಿಂತು ಸಾಧ್ಯವಾಗುವ ಸಂವಾದದ ಹಾದಿಯೊಂದನ್ನು ತೆರೆಯಲು ಅನಂತಮೂರ್ತಿ ಪ್ರಯತ್ನಿಸುತ್ತಿದ್ದಾರೆ ಎಂಬುದು ಅವರ ಇತ್ತೀಚಿನ ಬರೆಹ 'ಓಟಿಗೋ? ಒಗ್ಗಟ್ಟಿಗೋ?'ದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಸಾಯುವವನು ಮನುಷ್ಯನಾಗುವುದರ ಬದಲಿಗೆ 'ಹಿಂದೂ' ಅಥವಾ 'ಮುಸ್ಲಿಮ್' ಮಾತ್ರ ಆಗುತ್ತಿರುವ ಈ ದಿನಗಳಲ್ಲಿ ಅನಂತಮೂರ್ತಿಯವರ ಚಿಂತನೆಗಳು ಬೆಳಕುಚೆಲ್ಲುತ್ತಿರುವ ಅಂಶಗಳು ಬಹಳ ಮುಖ್ಯವಾಗುತ್ತವೆ.

-ಇಸ್ಮಾಯಿಲ್

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet