ಕೋಳಿಯ ಹಾಡು

ಕೋಳಿಯ ಹಾಡು

ಬರಹ

"ನಿನ್ನಯ ಆಟ ನಿನ್ನಯ ಓಟ
ಬಿಳಿಯ ಬಣ್ಣದ ಮುಖದಿ ಮಾಟ
ಸಹೋದರರೊಳಗೆ ನೀನೇ ಸುಂದರ"
ಎನ್ನುತ ಮುದ್ದಿಸುವಳು ಹಡೆದವಳು

ಮೊಟ್ಟೆಯು ಒಂದುಸುತ್ತಿನ ಕೋಟೆಯಾದರೆ
ಹಡೆದವಳ ಪ್ರೀತಿ ಎಳು ಸುತ್ತಿನದು
ಆಟ ಓಟದಿ ನಾನೆ ಮೊದಲಿಗನಾದರು
ಪ್ರೀತಿಯಲಿ ಅವಳೆ ಮೊದಲಿಹಳು
ಹಸಿವೆಯಲಿ ಕಾಳನು ಹೆಕ್ಕಿತಂದು
ಹಸಿದ ಹೊಟ್ಟೆಯನು ತುಂಬುವಳು
ಕತ್ತಲಲಿ ಕಣ್ಣೀರಿಟ್ಟರೂ ಕೂಡ
ಬೆಳಕಿನಲಿ ಎಂದೂ ತೋರ್ಗೊಡಳು

"ನಾನು ಹುಟ್ಟಿದ ದಿನದಂದೆ
ಶೇಖ್ ರು ಡಂಗುರ ಹೋಡೆಸಿದರಂತೆ
ಶೇಖ್ ರ ಮನೆಯಲಿ ಸಲೀಂ ಹುಟ್ಟಿರುವಾಗ
ನಮ್ಮ ಮನೆಯಲಿ ನಾನು ಹುಟ್ಟಿದೆನಂತೆ
ಸಲೀಂ ಮತ್ತು ನಾನು ಅವಳಿಜವಳಿಗಳು"
ಎಂದು ಅಪ್ಪನು ಎಲ್ಲರೊಳಗೆ ಹೇಳಿದನಂತೆ"
ಎಂಬ ಕಥೆಯನು ಹೇಳುತ ಅವಳು
ದಿನವು ನನ್ನನು ಮಲೆಗಿಸಿಹಳು

ಅವಳ ಮುಖವನು ನೋಡುತ ನಲೆಯುತ
ಶೇಖ್ ರು ಹಾಕಿದ ಕಾಳನು ತಿಂದು ತೆಗುತ
ಸಂತಸದಿಂದ ಬೆಳೆಯುತ್ತಿದ್ದೆವು ನಾವು

ಅಂದು ಶೇಖ್ ರ ಮನೆಯಲಿ ಸಡಗರವೇಕೊ ತುಂಬಿತ್ತು
ಇತ್ತ ನಮ್ಮ ಮನೆಯಲಿ ಸ್ಮಶಾನ ಮೌನ ಕವೆದಿತ್ತು
ಇಂದು ನನ್ನ ಜನ್ಮದಿನವೆ ಆದರು
ಕಣ್ಣೀರಿಡುತಿಹಳು ಹಡೆದವಳು
ಕಾರಣವೆನೆಂದು ಕೇಳಿದೆನಾದರೂ
ಮೌನದಿ ತೆವಳುತ ಸವೆದಿಹಳು
ಅಣ್ಣನ ಹುಡುಕುತ ಹೋರಗಡೆ ಬಂದೆನಾದರು
ಕಾಣಿಸದೆ ಹೋದನು ಸಹೋದರನು
ಎಲ್ಲಿಗೆ ಹೋದನು ಅಣ್ಣನು ಎಂದು
ಅಪ್ಪನ ಹತ್ತಿರ ಕೇಳಿದೆನು
ಅಣ್ಣನು ಇನ್ನು ಬರನು ಎಂದು
ದುಃಖದ ಕಟ್ಟೆಯನು ಒಡೆಸಿದರು
ಅವನನು ಅವ್ವನ ಎದುರಿಗೆ ಕೊಂದು
ಅಡುಗೆ ಮಾಡಿ ಬಡಿಸಿದರು
ಎನ್ನುವ ಅಪ್ಪನ ಮಾತನು ಕೇಳಿ ನನಗೆ
ಮೊಡದ ಸಿಡಿಲು ಬಡೆದಿತ್ತು
ಸಲೀಂ ನ ಮುಗ್ಧ ಮುಖದಲ್ಲೂ ಕೂಡ
ಕೊಲೆಗಾರನ ನಗೆಯು ಇಣುಕಿತ್ತು...
"ಕೋಳಿಯ ಗೋಳನು ಕೇಳುವವರಾರು
ಕೋಳಿಯ ಕಣ್ಣೀರನು ನೋಡುವವರಾರು
ರಕ್ಷಿಸುವವನೇ ಭಕ್ಷಿಸುವಾಗ
ಕೋಳಿಯ ಬಾಳಿಗೆ ದೇವರು ಯಾರು???"
ಎಂಬ ಚಿಂತೆಯ ಭಯವು ಮನದಲಿ ಗೂಡು ಕಟ್ಟಿತ್ತು