ಕ್ಯಾಂಟೀನೋ...ಕ್ಯಾ 'ಟೀನ್'

ಕ್ಯಾಂಟೀನೋ...ಕ್ಯಾ 'ಟೀನ್'

ಕಾಲೇಜ್ ಲೈಫ್ ಅಂದ್ರೆ ಹಾಗೆನೇ. ನವೀನ ಆಲೋಚನೆಗಳು ಮತ್ತು ಕ್ರೀಯಾಶೀಲತೆಯ ಬೀಡು. ಅವುಗಳ ಜೊತೆ ಜೊತೆಗೇ 'ಎಕ್ಷ್ಟ್ರಾ ಕರಿಕುಲಂ' ಸ್ವಲ್ಪ ಇದ್ರೆ ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್. ಕಾಲೇಜಿನಿಂದ ಹೊರ ಹೋದ ಮೇಲೆ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ತಾವು ಕಲಿತು ಬೆರೆತ ಕಾಲೇಜನ್ನು ನೆನಪಿನ ದೋಣಿ JAಬ ನೆನಪಿನ ದೋಣಿಯಲ್ಲಿ ಜೀವನ ಪರ್ಯಂತ ಒಯ್ಯುತ್ತಾರೆ.
  ಪ್ರತಿದಿನ ಮನೆಯಿಂದ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ಎಂದರೆ ಯಾರಿಗೆ ತಾನೆ ಕಸಿವಿಸಿಯಾಗಲ್ಲ ಹೇಳಿ. ಅನುಕ್ಷಣವೂ ಒದಿನಲ್ಲೆ ಮೈಮರೆತರೆ ವಿದ್ಯಾರ್ಥಿ ಜೀವನಕ್ಕೆ ಎಲ್ಲಿದೆ ಅರ್ಥ. ಅಲ್ವಾ? . ಕಾಲೇಜಿನಲ್ಲಿ ನಮಗರಿಯದೇ ಅರಿವಿದ್ದೂ ಅನೇಕ ಸಂಗತಿಗಳು ಘಟಿಸುತ್ತದೆ. ನೋಡುವ ಕಣ್ಣಿದ್ದರೆ ಮನರಂಜನೆಗೆ ಯಾವುದೇ ಬರ ಎದುರಾಗದು.
  ಪ್ರತಿಯೊಂದು ಕಾಲೇಜಿನ ಕ್ಯಾಂಪಸ್ ನಲ್ಲಿ 'ಕ್ಯಾಂಪಸ್ ಕ್ಯಾಂಟೀನ್' ಅಂತ ಒಂದು ಉಪಹಾರ ಕೇಂದ್ರ ಇದ್ದೇ ಇದೆ. ಕ್ಯಾಂಟೀನ್ ಗಳು ಇರುವುದು ಬರೀ ಹಸಿವು ನೀಗಿಸಿಕೊಳ್ಳಲು ಮಾತ್ರ ಎಂದು ಅರಿತುಕೊಂಡಿದ್ದರೆ ಬಹುಶಃ ಅದು ನಮ್ಮ ತಪ್ಪುಗಳ ತಿಳುವಳಿಕೆ. ಪ್ರತಿದಿನ ಅದೇ ಲೆಕ್ಚರ್,  ಅದೇ ಕ್ಲಾಸ್, ತುಂಬಾ ಸೆಕೆ ಬೇರೆ ಇದೆ ಕ್ಲಾಸ್ ಗಳಲ್ಲಿ ಕುಳಿತುಕೊಳ್ಳಲು ಅದೇನೋ ಕಸಿವಿಸಿಯಾಯಿತೋ ಅಥವಾ ಬೋರ್ ಹೋಡಿಯಿತೋ ಏನೋ ಗೊತ್ತಿಲ್ಲ. ಬಂಕ್ ಹಿಡಿದು ಬೇಕು ಅನ್ನೋ ಭಾವನೆ ಮೂಡುತ್ತದೆ. ಹೀಗೆ ಖುಷಿ ಬಂದಾಗ ಕ್ಲಾಸ್ ಗೆ ಚಕ್ಕರ್ ಹಾಕಿ ಕ್ಯಾಂಟೀನ್ ಗಳಲ್ಲಿ ಕುಳಿತುಕೊಂಡು ತರಗತಿ ಕುರಿತು ಕಮೆಂಟ್ ಮಾಡುತ್ತಾ ಕುಳಿತುಕೊಳ್ಳುವುದು ಮಾಮೂಲಿ. ಹೀಗೆ ಬಂಕ್ ಮಾಡಿ ಎಟೆಂಡೆನ್ಸ್ ಶಾರ್ಟೇಜ್ ಮಾಡಿಸಿಕೊಂಡು ಪುನಃ ಬಂದು ಚರ್ಚಿಸುವುದು ಮತ್ತದೇ ಭಾವನಾತ್ಮಕ ಸೆಲೆತವಿರುವ ಜಾಗದಲ್ಲಿ. ಬರ್ತ್ ಡೇ ಸೆಲೆಬ್ರೇಷನ್ ಗಳು ಇದ್ದಾಗ ಸ್ನೇಹಿತ ಸಮುದಾಯಕ್ಕೆ ಪಾರ್ಟಿ ನೀಡುವ ಕೃಪೆ. ಇನ್ನು ಇಂಟರ್ನಲ್ ಪರೀಕ್ಷೆ ಎದುರಾದಾಗ ಕ್ಯಾಂಟೀನ್ ಗಳೆ ವಿದ್ಯಾರ್ಥಿಗಳ ಅಪತ್ಬಾಂದವ. ಒಂದು ಪುಸ್ತಕವನ್ನು ಏಳೆಂಟು ಮಂದಿ ಕುಳಿತುಕೊಂಡು ನೋಡುವ ಪರಿ ಅದ್ಭುತ. ಶುಕ್ರವಾರ ಬಂತು ಎಂದಾಗ ಸಿನಿಪ್ರಿಯರಿಗೆ ಶುಭ ಶುಕ್ರವಾರವಾಗಿ ಬಿಡುತ್ತದೆ. ತೆರೆಕಾಣುವ ಹೊಸ ಚಲನ ಚಿತ್ರಗಳ ನೋಡುವ ಕಾತರ ಎಲ್ಲೆ ಮೀರುತ್ತದೆ. ಚಿತ್ರ ವೀಕ್ಷಿಸಲು ಸದಭಿರುಚಿಯ ಗೆಳೆಯನ ಹುಡುಕಾಟ. ಯಾರೂ ಬರಲೊಪ್ಪದ ಸನ್ನಿವೇಶ ಎದುರಾದಾಗ ಕ್ಯಾಂಟೀನತ್ತ ತರಾತುರಿಯ ಹೆಜ್ಜೆ. ಅಲ್ಲಿ ಯಾರೋ ಥೀಯೆಟರ್ ಪ್ರತಿಯನ್ನು ನೋಡ್ತಾ ಸಮಯವನ್ನು ವ್ಯಯಿಸುತ್ತಾರೆ. ಕ್ಯಾಂಟೀನ್ ನಲ್ಲಿ ಸಿನಿಪ್ರಿಯರ ಅಡ್ಡಾ ನೆ ಇದೆ. ಹೀಗೆ ಕ್ಯಾಂಟೀನ್ ವಿಭಿನ್ನ ಪ್ರತಿಭೆಗಳ,ಭಿನ್ನ ರುಚಿಗಳು ಒಟ್ಟು ಸೇರುವ ತಾಣ.
  ಹೇಗೋ ಆಸನ ಇದ್ದೇ ಇರುತ್ತದೆ. ಆರಾಮವಾಗಿ ಬಂದು ಕುಳಿತುಕೊಂಡು ಮೊಬೈಲ್ ನಲ್ಲಿ ಹರಿದಾಡಿ, ಚಾರ್ಜ್ ಮುಗಿದಾಗ ರಿಚಾರ್ಜ್ ಮಾಡಿ. ಸಂಜೆ ಕಾಲೇಜು ಲಾಕ್ ಆದ ನಂತರ ಮನೆಗೆ ಹಿಂದಿರುಗುವವರೂ  ಅನೇಕ ತಲೆಗಳು ಗಣನೆಗೆ ಸಿಗುತ್ತದೆ. ಹಾಗಂತ ಅವರು ಮೆಲ್ಲಲು ಬಂದಿದ್ದಾರೆ ಎಂದರೆ ದೇವರಾಣೆಯಾಗಿಯೂ ಅಲ್ಲ. ನೀನೇನು ಇಲ್ಲಿ ಎಂದರೆ ಒಂದೇ ರಾಗ 'ಜಸ್ಟ್ ಟೈಮ್ ಪಾಸ್ ಗೆ' ನೋಡಿ!. ಇನ್ನೊಂದು ವರ್ಗ ಇದೆ ಸಾಚಾಗಳು ಅವರು. ಬೆಳಿಗ್ಗೆ ಕ್ಯಾಂಟೀನ್ ತೆರೆದಾಗ ಬಂದು, ಹಿಂದಿನ ದಿನ ಕೊಟ್ಟ ಹೋಂ ವರ್ಕ್ ಗಳನ್ನು ಅಲ್ಲೆ ಮಾಡಿ ಮುಗಿಸಿ ಹೋಗುವಾಗ ತಿಂಡಿ ತಿಂದು 'ಕೈ ತೊಳೆದುಕೊಂಡು' ಹೋಗುತ್ತಾರೆ. ಇದು ಸ್ವಲ್ಪ ಬೆಟರ್ ಅಂತ ಅನ್ನಿಸುತ್ತೆ ಬಿಡಿ.
  ಇಂದು ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ ಫೋನುಗಳು ಇದ್ದೇ ಇದೆ. ಕ್ಯಾಂಟೀನ್ ನಲ್ಲಿ ಕುಳಿತುಕೊಂಡು ಒಂದಷ್ಟು ಸ್ನೇಹಿತರನ್ನ ಬಲವಂತದಿಂದ ಖರೀದಿಸಿ ವಿಡಿಯೋ ಗೇಮ್ ಆಡುವ ಸಂಪ್ರದಾಯಕ್ಕೆ ಇತ್ತೀಚೆಗೆ ಯಾವನೊಬ್ಬ ಮಹಾನುಭಾವ ನಾಂದಿ ಹಾಡಿದ್ದಾನೆ. ಹೀಗೆ ಮೋಬೈಲ್ ನ 'ಹಾಟ್ ಸ್ಪಾಟ್ ' ಆನ್ ಮಾಡಿ ಸ್ನೇಹಿತ ವರ್ಗ ಸೇರಿಸಿ ಮನರಂಜನೆಯ ಕೇಂದ್ರವಾಗಿಯೂ ಕ್ಯಾಂಟೀನ್ ಗಳು ಇತ್ತೀಚೆಗೆ ಬದಲಾಗುತ್ತಿದೆ. ಬಹುಶಃ ಬರೀ ಕಾಲೇಜಿಗೆ ಮಾತ್ರ ಹೋಗಿದಿದ್ದರೆ ಇಂತಹದೆಲ್ಲಾ ಅನುಭವಗಳು ಬರ ಎದುರಿಸುತ್ತಿತ್ತು. ಅಲ್ವಾ.  ವಿಶ್ವವಿದ್ಯಾನಿಲಯಗಳು ಪಠ್ಯೇತರ ಚಟುವಟಿಕೆಗಳು ಎಂದು ಕರೆಯುವುದು ಇದನ್ನು ಎಂಬುದಾಗಿದ್ದರೆ ಎಷ್ಟುಅನುಕೂಲ. ಅನ್ನೋ ಭಾವನೆ ಮಿಂಚಿನಂತೆ ಕಣ್ಣೆದುರಿಗೆ ಹಾದು ಹೋಗುವುದಿದೆ. ಕ್ಯಾಂಪಸ್ ಗಳಲ್ಲಿ ಬಹುಸಂಖ್ಯೆಯೊಂದಿಗೆ ಗೂಡು ಬಿಟ್ಟ ಹಕ್ಕಿಗಳಂತೆ  ಸ್ವಚ್ಛಂದವಾಗಿ ಹಾರಾಡುತ್ತಿರುವ ಪ್ರಣಯಿಗಳು. ಇವರುಗಳು ಜಂಟಿಯಾಗಿ  ಕ್ಯಾಂಟೀನತ್ತ ಪಯಣ ಬೆಳೆಸುವುದಿದೆ. ಅವರ ಪಾಲಿಗೆ ಇದು ಕನ್ಯಾ ಕುಮಾರಿಯೋ? ಅಥವ ಉತ್ತರದ ಮನಾಲಿಯೋ ಎಂಬುದು ಭಾವನೆಗೆ ಸಿಲುಕಿದ ಸಂಬಂಧ. ಕ್ಯಾಂಟೀನ್ ಇಂದು ನೂತನವಾಗಿ ಪ್ರಣಯಿಸಲು ಆರಂಭಿಸಿದವರಿಗೆ ಒಂದು ಅತ್ಯುತ್ತಮ ತಾಣ ಎಂದರೆ ಅತಿಶಯೋಕ್ತಿಯಲ್ಲ.ಕಾಲೇಜ್ ಲೈಫ್ ಅಂದ್ರೆ ಹಾಗೆನೇ. ನವೀನ ಆಲೋಚನೆಗಳು ಮತ್ತು ಕ್ರೀಯಾಶೀಲತೆಯ ಬೀಡು. ಅವುಗಳ ಜೊತೆ ಜೊತೆಗೇ 'ಎಕ್ಷ್ಟ್ರಾ ಕರಿಕುಲಂ' ಸ್ವಲ್ಪ ಇದ್ರೆ ಕಾಲೇಜ್ ಲೈಫ್ ಈಸ್ ಗೋಲ್ಡನ್ ಲೈಫ್. ಕಾಲೇಜಿನಿಂದ ಹೊರ ಹೋದ ಮೇಲೆ ವಿದ್ಯಾರ್ಥಿಗಳು ವಿವಿಧ ಕಾರಣಗಳಿಂದ ತಾವು ಕಲಿತು ಬೆರೆತ ಕಾಲೇಜನ್ನು ನೆನಪಿನ ದೋಣಿ JAಬ ನೆನಪಿನ ದೋಣಿಯಲ್ಲಿ ಜೀವನ ಪರ್ಯಂತ ಒಯ್ಯುತ್ತಾರೆ.
  ಪ್ರತಿದಿನ ಮನೆಯಿಂದ ಕಾಲೇಜಿಗೆ, ಕಾಲೇಜಿನಿಂದ ಮನೆಗೆ ಎಂದರೆ ಯಾರಿಗೆ ತಾನೆ ಕಸಿವಿಸಿಯಾಗಲ್ಲ ಹೇಳಿ. ಅನುಕ್ಷಣವೂ ಒದಿನಲ್ಲೆ ಮೈಮರೆತರೆ ವಿದ್ಯಾರ್ಥಿ ಜೀವನಕ್ಕೆ ಎಲ್ಲಿದೆ ಅರ್ಥ. ಅಲ್ವಾ? . ಕಾಲೇಜಿನಲ್ಲಿ ನಮಗರಿಯದೇ ಅರಿವಿದ್ದೂ ಅನೇಕ ಸಂಗತಿಗಳು ಘಟಿಸುತ್ತದೆ. ನೋಡುವ ಕಣ್ಣಿದ್ದರೆ ಮನರಂಜನೆಗೆ ಯಾವುದೇ ಬರ ಎದುರಾಗದು.
  ಪ್ರತಿಯೊಂದು ಕಾಲೇಜಿನ ಕ್ಯಾಂಪಸ್ ನಲ್ಲಿ 'ಕ್ಯಾಂಪಸ್ ಕ್ಯಾಂಟೀನ್' ಅಂತ ಒಂದು ಉಪಹಾರ ಕೇಂದ್ರ ಇದ್ದೇ ಇದೆ. ಕ್ಯಾಂಟೀನ್ ಗಳು ಇರುವುದು ಬರೀ ಹಸಿವು ನೀಗಿಸಿಕೊಳ್ಳಲು ಮಾತ್ರ ಎಂದು ಅರಿತುಕೊಂಡಿದ್ದರೆ ಬಹುಶಃ ಅದು ನಮ್ಮ ತಪ್ಪುಗಳ ತಿಳುವಳಿಕೆ. ಪ್ರತಿದಿನ ಅದೇ ಲೆಕ್ಚರ್,  ಅದೇ ಕ್ಲಾಸ್, ತುಂಬಾ ಸೆಕೆ ಬೇರೆ ಇದೆ ಕ್ಲಾಸ್ ಗಳಲ್ಲಿ ಕುಳಿತುಕೊಳ್ಳಲು ಅದೇನೋ ಕಸಿವಿಸಿಯಾಯಿತೋ ಅಥವಾ ಬೋರ್ ಹೋಡಿಯಿತೋ ಏನೋ ಗೊತ್ತಿಲ್ಲ. ಬಂಕ್ ಹಿಡಿದು ಬೇಕು ಅನ್ನೋ ಭಾವನೆ ಮೂಡುತ್ತದೆ. ಹೀಗೆ ಖುಷಿ ಬಂದಾಗ ಕ್ಲಾಸ್ ಗೆ ಚಕ್ಕರ್ ಹಾಕಿ ಕ್ಯಾಂಟೀನ್ ಗಳಲ್ಲಿ ಕುಳಿತುಕೊಂಡು ತರಗತಿ ಕುರಿತು ಕಮೆಂಟ್ ಮಾಡುತ್ತಾ ಕುಳಿತುಕೊಳ್ಳುವುದು ಮಾಮೂಲಿ. ಹೀಗೆ ಬಂಕ್ ಮಾಡಿ ಎಟೆಂಡೆನ್ಸ್ ಶಾರ್ಟೇಜ್ ಮಾಡಿಸಿಕೊಂಡು ಪುನಃ ಬಂದು ಚರ್ಚಿಸುವುದು ಮತ್ತದೇ ಭಾವನಾತ್ಮಕ ಸೆಲೆತವಿರುವ ಜಾಗದಲ್ಲಿ. ಬರ್ತ್ ಡೇ ಸೆಲೆಬ್ರೇಷನ್ ಗಳು ಇದ್ದಾಗ ಸ್ನೇಹಿತ ಸಮುದಾಯಕ್ಕೆ ಪಾರ್ಟಿ ನೀಡುವ ಕೃಪೆ. ಇನ್ನು ಇಂಟರ್ನಲ್ ಪರೀಕ್ಷೆ ಎದುರಾದಾಗ ಕ್ಯಾಂಟೀನ್ ಗಳೆ ವಿದ್ಯಾರ್ಥಿಗಳ ಅಪತ್ಬಾಂದವ. ಒಂದು ಪುಸ್ತಕವನ್ನು ಏಳೆಂಟು ಮಂದಿ ಕುಳಿತುಕೊಂಡು ನೋಡುವ ಪರಿ ಅದ್ಭುತ. ಶುಕ್ರವಾರ ಬಂತು ಎಂದಾಗ ಸಿನಿಪ್ರಿಯರಿಗೆ ಶುಭ ಶುಕ್ರವಾರವಾಗಿ ಬಿಡುತ್ತದೆ. ತೆರೆಕಾಣುವ ಹೊಸ ಚಲನ ಚಿತ್ರಗಳ ನೋಡುವ ಕಾತರ ಎಲ್ಲೆ ಮೀರುತ್ತದೆ. ಚಿತ್ರ ವೀಕ್ಷಿಸಲು ಸದಭಿರುಚಿಯ ಗೆಳೆಯನ ಹುಡುಕಾಟ. ಯಾರೂ ಬರಲೊಪ್ಪದ ಸನ್ನಿವೇಶ ಎದುರಾದಾಗ ಕ್ಯಾಂಟೀನತ್ತ ತರಾತುರಿಯ ಹೆಜ್ಜೆ. ಅಲ್ಲಿ ಯಾರೋ ಥೀಯೆಟರ್ ಪ್ರತಿಯನ್ನು ನೋಡ್ತಾ ಸಮಯವನ್ನು ವ್ಯಯಿಸುತ್ತಾರೆ. ಕ್ಯಾಂಟೀನ್ ನಲ್ಲಿ ಸಿನಿಪ್ರಿಯರ ಅಡ್ಡಾ ನೆ ಇದೆ. ಹೀಗೆ ಕ್ಯಾಂಟೀನ್ ವಿಭಿನ್ನ ಪ್ರತಿಭೆಗಳ,ಭಿನ್ನ ರುಚಿಗಳು ಒಟ್ಟು ಸೇರುವ ತಾಣ.
  ಹೇಗೋ ಆಸನ ಇದ್ದೇ ಇರುತ್ತದೆ. ಆರಾಮವಾಗಿ ಬಂದು ಕುಳಿತುಕೊಂಡು ಮೊಬೈಲ್ ನಲ್ಲಿ ಹರಿದಾಡಿ, ಚಾರ್ಜ್ ಮುಗಿದಾಗ ರಿಚಾರ್ಜ್ ಮಾಡಿ. ಸಂಜೆ ಕಾಲೇಜು ಲಾಕ್ ಆದ ನಂತರ ಮನೆಗೆ ಹಿಂದಿರುಗುವವರೂ  ಅನೇಕ ತಲೆಗಳು ಗಣನೆಗೆ ಸಿಗುತ್ತದೆ. ಹಾಗಂತ ಅವರು ಮೆಲ್ಲಲು ಬಂದಿದ್ದಾರೆ ಎಂದರೆ ದೇವರಾಣೆಯಾಗಿಯೂ ಅಲ್ಲ. ನೀನೇನು ಇಲ್ಲಿ ಎಂದರೆ ಒಂದೇ ರಾಗ 'ಜಸ್ಟ್ ಟೈಮ್ ಪಾಸ್ ಗೆ' ನೋಡಿ!. ಇನ್ನೊಂದು ವರ್ಗ ಇದೆ ಸಾಚಾಗಳು ಅವರು. ಬೆಳಿಗ್ಗೆ ಕ್ಯಾಂಟೀನ್ ತೆರೆದಾಗ ಬಂದು, ಹಿಂದಿನ ದಿನ ಕೊಟ್ಟ ಹೋಂ ವರ್ಕ್ ಗಳನ್ನು ಅಲ್ಲೆ ಮಾಡಿ ಮುಗಿಸಿ ಹೋಗುವಾಗ ತಿಂಡಿ ತಿಂದು 'ಕೈ ತೊಳೆದುಕೊಂಡು' ಹೋಗುತ್ತಾರೆ. ಇದು ಸ್ವಲ್ಪ ಬೆಟರ್ ಅಂತ ಅನ್ನಿಸುತ್ತೆ ಬಿಡಿ.
  ಇಂದು ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ ಫೋನುಗಳು ಇದ್ದೇ ಇದೆ. ಕ್ಯಾಂಟೀನ್ ನಲ್ಲಿ ಕುಳಿತುಕೊಂಡು ಒಂದಷ್ಟು ಸ್ನೇಹಿತರನ್ನ ಬಲವಂತದಿಂದ ಖರೀದಿಸಿ ವಿಡಿಯೋ ಗೇಮ್ ಆಡುವ ಸಂಪ್ರದಾಯಕ್ಕೆ ಇತ್ತೀಚೆಗೆ ಯಾವನೊಬ್ಬ ಮಹಾನುಭಾವ ನಾಂದಿ ಹಾಡಿದ್ದಾನೆ. ಹೀಗೆ ಮೋಬೈಲ್ ನ 'ಹಾಟ್ ಸ್ಪಾಟ್ ' ಆನ್ ಮಾಡಿ ಸ್ನೇಹಿತ ವರ್ಗ ಸೇರಿಸಿ ಮನರಂಜನೆಯ ಕೇಂದ್ರವಾಗಿಯೂ ಕ್ಯಾಂಟೀನ್ ಗಳು ಇತ್ತೀಚೆಗೆ ಬದಲಾಗುತ್ತಿದೆ. ಬಹುಶಃ ಬರೀ ಕಾಲೇಜಿಗೆ ಮಾತ್ರ ಹೋಗಿದಿದ್ದರೆ ಇಂತಹದೆಲ್ಲಾ ಅನುಭವಗಳು ಬರ ಎದುರಿಸುತ್ತಿತ್ತು. ಅಲ್ವಾ.  ವಿಶ್ವವಿದ್ಯಾನಿಲಯಗಳು ಪಠ್ಯೇತರ ಚಟುವಟಿಕೆಗಳು ಎಂದು ಕರೆಯುವುದು ಇದನ್ನು ಎಂಬುದಾಗಿದ್ದರೆ ಎಷ್ಟುಅನುಕೂಲ. ಅನ್ನೋ ಭಾವನೆ ಮಿಂಚಿನಂತೆ ಕಣ್ಣೆದುರಿಗೆ ಹಾದು ಹೋಗುವುದಿದೆ. ಕ್ಯಾಂಪಸ್ ಗಳಲ್ಲಿ ಬಹುಸಂಖ್ಯೆಯೊಂದಿಗೆ ಗೂಡು ಬಿಟ್ಟ ಹಕ್ಕಿಗಳಂತೆ  ಸ್ವಚ್ಛಂದವಾಗಿ ಹಾರಾಡುತ್ತಿರುವ ಪ್ರಣಯಿಗಳು. ಇವರುಗಳು ಜಂಟಿಯಾಗಿ  ಕ್ಯಾಂಟೀನತ್ತ ಪಯಣ ಬೆಳೆಸುವುದಿದೆ. ಅವರ ಪಾಲಿಗೆ ಇದು ಕನ್ಯಾ ಕುಮಾರಿಯೋ? ಅಥವ ಉತ್ತರದ ಮನಾಲಿಯೋ ಎಂಬುದು ಭಾವನೆಗೆ ಸಿಲುಕಿದ ಸಂಬಂಧ. ಕ್ಯಾಂಟೀನ್ ಇಂದು ನೂತನವಾಗಿ ಪ್ರಣಯಿಸಲು ಆರಂಭಿಸಿದವರಿಗೆ ಒಂದು ಅತ್ಯುತ್ತಮ ತಾಣ ಎಂದರೆ ಅತಿಶಯೋಕ್ತಿಯಲ್ಲ.