ಕ್ಯಾನ್ಸ‌ರ್ ತಡೆಯಲು ‘ಇರೋಳ್’ ಸೇವಿಸಿ !

ಕ್ಯಾನ್ಸ‌ರ್ ತಡೆಯಲು ‘ಇರೋಳ್’ ಸೇವಿಸಿ !

ಮಂಗಳೂರು ಮತ್ತು ಸುತ್ತಮುತ್ತಲಿನಲ್ಲಿ ‘ಇರೋಳ್’ ಎಂದು ಕರೆಯಲ್ಪಡುವ ತಾಳೆ ಹಣ್ಣು, ತಾಟಿ ನುಂಗು ಬೇಸಿಗೆ ಸಮಯದಲ್ಲಿ ಮಾತ್ರ ಲಭ್ಯವಿರುತ್ತದೆ. ಇಂಗ್ಲೀಷ್ ನಲ್ಲಿ ಐಸ್ ಆಪಲ್ ಎಂದು ಕರೆಯಲ್ಪಡುವ ಈ ಹಣ್ಣಿನ ರುಚಿಯನ್ನು ತಿಂದವನೇ ಬಲ್ಲ. ಮಂಜುಗಡ್ಡೆಯಂತೆ ಬಿಳುಪಾಗಿರುವ ತಿರುಳನ್ನು ಹೊರ ತೆಗೆಯುವುದೇ ಒಂದು ಸಾಹಸ. ಅದಕ್ಕೆಂದು ತಯಾರಾದ ಹರಿತ ಚೂರಿ ಮತ್ತು ನಿಪುಣತೆ ಅತ್ಯಗತ್ಯ. ತಾಳೆ ಹಣ್ಣು ಕತ್ತರಿಸುವಾಗ ತುಂಬಾ ಜಾಗೃತೆ ಬೇಕು. ಇಲ್ಲವಾದಲ್ಲಿ ಬೆರಳು ಕತ್ತರಿಸಲ್ಪಡುವ ಸಾಧ್ಯತೆ ಇರುತ್ತದೆ. ತಾಳೆ ಹಣ್ಣಿನ ಒಳಗಡೆ ಸಾಮಾನ್ಯವಾಗಿ ಮೂರು ಕಣ್ಣುಗಳು (ತಿನ್ನುವ ಭಾಗ) ಇರುತ್ತವೆ. ಒಂದು, ಎರಡು, ನಾಲ್ಕು ಕಣ್ಣುಗಳು ಇರುವ ಸಾಧ್ಯತೆಗಳೂ ಇರುತ್ತವೆ. ಒಳಗಿನ ತಿರುಳಿಗೆ ಗಾಯವಾಗದಂತೆ ತೆಗೆಯುವುದೇ ದೊಡ್ಡ ಸಾಹಸ. ಗಾಯವಾದಲ್ಲಿ ಅದರ ಒಳಗೆ ಇರುವ ಸಿಹಿಯಾದ ನೀರು ಚೆಲ್ಲಿ ಹೋಗುತ್ತದೆ. ತುಂಬಾ ಎಳೆಯ ಅಥವಾ ತುಂಬಾ ಬಲಿತಿರದ ಕಾಯಿಗಳು ತಿನ್ನಲು ಉತ್ತಮ.  

ಬೇಸಿಗೆಯಲ್ಲಿ ಮಾತ್ರ ಲಭ್ಯವಿರುವ ತಾಳೆ ಹಣ್ಣು ಅಥವಾ ಐಸ್ ಸೇಬುಗಳನ್ನು ನೀವು ನೋಡಿರಬಹುದು. ಬೇಸಿಗೆ ಬಂದಾಗ, ಈ ಹಣ್ಣುಗಳನ್ನು ಹೆಚ್ಚಾಗಿ ರಸ್ತೆ ಬದಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ತಾಳೆ ಹಣ್ಣುಗಳಲ್ಲಿ ಪೋಷಕಾಂಶಗಳು ಸಮೃದ್ಧವಾಗಿರುತ್ತದೆ. ಜೊತೆಗೆ ದೇಹಕ್ಕೂ ತುಂಬಾ ಒಳ್ಳೆಯದು. ಈ ಹಣ್ಣುಗಳು ಬೇಸಿಗೆಯ ಶಾಖದಿಂದ ನಮ್ಮನ್ನು ರಕ್ಷಿಸುವುದಲ್ಲದೆ ದೇಹಕ್ಕೆ ಅಗತ್ಯವಿರುವ ವಿಟಮಿನ್ ಗಳನ್ನು ನೀಡುತ್ತದೆ. ಇನ್ನು ಈ ಹಣ್ಣಿನಲ್ಲಿ ಸತು ಮತ್ತು ಪೊಟ್ಯಾಸಿಯಮ್ ನಂತಹ ಅಮೂಲ್ಯ ಖನಿಜಗಳಿವೆ. ಹಾಗಾಗಿ ಬೇಸಿಗೆಯಲ್ಲಿ ತಾಳೆ ಹಣ್ಣುಗಳನ್ನು ಆಗಾಗ ಸೇವನೆ ಮಾಡುವುದರಿಂದ ನಿರ್ಜಲೀಕರಣ ಸಮಸ್ಯೆಯನ್ನು ಕೂಡ ತಡೆಯಬಹುದು. ಹಾಗಾದರೆ ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಉಪಯೋಗವಿದೆ ಎಂಬುದರ ಬಗ್ಗೆ ತಿಳಿಯೋಣ.

ತಾಳೆ ಹಣ್ಣು ಅಥವಾ ಐಸ್ ಸೇಬುಗಳಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಸತು ಮತ್ತು ವಿಟಮಿನ್ ಬಿ ನಂತಹ ಸಾಕಷ್ಟು ಪೋಷಕಾಂಶಗಳಿವೆ. ಇದು ಆರೋಗ್ಯ ಕಾಪಾಡಿಕೊಳ್ಳಲು ವರದಾನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಿಗೆ ಸಹ, ತಾಳೆ ಹಣ್ಣುಗಳು ತುಂಬಾ ಒಳ್ಳೆಯದು. ಈ ಹಣ್ಣುಗಳ ಸೇವನೆಯಿಂದ ಆಮ್ಮಿಯತೆಯಂತಹ ಸಮಸ್ಯೆಗಳು ಕಡಿಮೆಯಾಗುತ್ತವೆ. ಜೊತೆಗೆ ಹೃದಯರಕ್ತನಾಳದ ಕಾಯಿಲೆಗಳನ್ನು ತಡೆಯಲು ಸಹಾಯ ಮಾಡುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಎಂದು ವೈದ್ಯರು. ಹೇಳುತ್ತಾರೆ.

ಆರೋಗ್ಯ ತಜ್ಞರ ಪ್ರಕಾರ, ತಾಳೆ ಹಣ್ಣು ಆಂಥೋಸಯಾನಿನ್ ನಂತಹ ಸ್ತನ ಕ್ಯಾನ್ಸರ್ ಕೋಶಗಳನ್ನು ಅಭಿವೃದ್ಧಿಪಡಿಸುವ ವಿವಿಧ ಗೆಡ್ಡೆಗಳು, ಫೈಟೊಕೆಮಿಕಲ್ ಗಳನ್ನು ತಡೆಯುತ್ತದೆ ಹಾಗಾಗಿ ಮಹಿಳೆಯರು ಈ ಹಣ್ಣುಗಳ ಸೇವನೆ ಮಾಡಬೇಕು. ಹಿಮೋಗ್ಲೋಬಿನ್ ಕಡಿಮೆ ಇರುವವರಿಗೆ ಈ ಹಣ್ಣು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ರಕ್ತಹೀನತೆಯ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.

ತಾಳೆ ಹಣ್ಣು, ಬೇಸಿಗೆಯಲ್ಲಿ ಉಂಟಾಗುವ ಚರ್ಮದ ಕಾಯಿಲೆಗಳನ್ನು ತಡೆಗಟ್ಟಲು ಬಹಳ ಉಪಯುಕ್ತವಾಗಿವೆ. ಈ ಹಣ್ಣುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಮಲಬದ್ಧತೆ ಮತ್ತು ಅತಿಸಾರ ಸಮಸ್ಯೆ ಇರುವವರಿಗೆ ತುಂಬಾ ಒಳ್ಳೆಯದು..

ತಾಳೆ ಹಣ್ಣುಗಳ ಸೇವನೆ ಮಾಡುವುದರಿಂದ ಕರುಳಿನಲ್ಲಿನ ಹುಣ್ಣುಗಳನ್ನು ಸಹ ಗುಣಪಡಿಸಬಹುದು. ನಾಲಿಗೆಯ ಮೇಲೆ ಆಗಾಗ ಕಂಡು ಬರುವ ಹುಣ್ಣುಗಳನ್ನು ಕೂಡ ಕಡಿಮೆ ಮಾಡುವ ಶಕ್ತಿ ಈ ಹಣ್ಣಿಗಿದೆ. ಬೇಸಿಗೆಯಲ್ಲಿ ಹೆಚ್ಚಾಗಿ ಕಂಡು ಬರುವ ಮೊಡವೆಗಳಿಂದ ಮುಕ್ತಿ ಪಡೆಯುವುದರ ಜೊತೆಗೆ ಕೂದಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಈ ಹಣ್ಣುಗಳ ಸೇವನೆ ಮಾಡಬಹುದು. ಅಲ್ಲದೆ ತಾಳೆ ಹಣ್ಣುಗಳು ಬಿಸಿಲಿನಿಂದ ಉಂಟಾಗುವ. ಬೆವರು ಗುಳ್ಳೆಗಳು ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿರುವ ನೀರನ್ನು ಚರ್ಮಕ್ಕೆ ಹಚ್ಚಿದರೆ, ಬೆವರು ಬೇಗನೆ ಕಡಿಮೆಯಾಗುತ್ತದೆ.

ಎದೆ ಹಾಲುಣಿಸುವ ತಾಯಂದಿರ ಆರೋಗ್ಯಕ್ಕೆ ಈ ಹಣ್ಣು ಬಹಳ ಒಳ್ಳೆಯದು. ಇದಲ್ಲದೆ, ಮಗುವಿಗೂ ಪೋಷಕಾಂಶಗಳು ಚೆನ್ನಾಗಿ ಸಿಗುತ್ತವೆ. ಈ ಹಣ್ಣಿನ ಸೇವನೆಯಿಂದ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟಿನ ಸಮಸ್ಯೆಯೂ ಕಡಿಮೆಯಾಗುತ್ತದೆ. ಗರ್ಭಿಣಿ ಹಾಗೂ ಬಾಣಂತಿಯರು ಈ ಹಣ್ಣನ್ನು ಸೇವಿಸುವ ಮುನ್ನ ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಏಕೆಂದರೆ ಕೆಲವರಿಗೆ ಈ ಹಣ್ಣು ತಿಂದರೆ ಆರೋಗ್ಯದ ಸಮಸ್ಯೆಯಾಗುವ ಸಾಧ್ಯತೆ ಇದೆ. ಆಯಾ ಕಾಲಕ್ಕೆ ಸಿಗುವ ಹಣ್ಣುಗಳನ್ನು ಸೇವಿಸಲು ಹಿಂದೆ ಮುಂದೆ ನೋಡಬೇಡಿ. ಹಣ್ಣಿನ ಬೆಲೆ ಸ್ವಲ್ಪ ಅಧಿಕ (ಒಂದು ಕಾಯಿಗೆ ೩೦.೦೦ರೂ.) ಎಂದು ಅನಿಸಿದರೂ ಅದನ್ನು ಕೀಳುವ, ಸಾಗಾಟ ಹಾಗೂ ಮಾರಾಟದ ಸಮಸ್ಯೆಗಳನ್ನು ನೋಡಿದರೆ ಹಣ ಹೆಚ್ಚು ಎಂದು ಅನಿಸುವುದಿಲ್ಲ. ಈ ಬೇಸಿಗೆಯಲ್ಲಿ ಬೀದಿ ಬದಿಯಲ್ಲಿ ತಾಳೆ ಹಣ್ಣು ಸಿಕ್ಕರೆ ಕೂಡಲೇ ತಿನ್ನಿರಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ