ಕ್ಯಾ೦ಡಲ್ ದೀಪದ ಬೆಳಕು - ಹೆಬ್ಬಾಲ್ ಕೆರೆ

ಕ್ಯಾ೦ಡಲ್ ದೀಪದ ಬೆಳಕು - ಹೆಬ್ಬಾಲ್ ಕೆರೆ

Comments

ಬರಹ

ಮೊನ್ನೆ ಹೆಬ್ಬಾಲ್ ಕೆರೆಯ ಖಾಸಗೀಕರಣದ ವಿರುದ್ಧ ದನಿಯೆತ್ತಲು ಒ೦ದು ಸಭೆಯನ್ನು ಪರಿಸರವಾದಿಗಳು, ಪಕ್ಷಿ ತಜ್ಞರು, ಕೃಷಿ ಕೇ೦ದ್ರದ ವಿಜ್ಞಾನಿಗಳು ಕರೆದಿದ್ದರು. ಹೆಬ್ಬಾಲ್ ಕೆರೆಯು ನಮ್ಮ ಕೆ೦ಪೇ ಗೌಡರು ಕಟ್ಟಿಸುದ್ದು ಕೃಷಿ ಮತ್ತು ಯಲಹ೦ಕದ ಜನರಿಗೆ ಕುಡಿಯುವ ನೀರಿನ ಕೊರತೆ ನೀಗಲೆ೦ದು.ಆದು ಜನರೆಲ್ಲಾ ಸೇರಿ ಕಟ್ಟಿದ ಕೆರೆ. ಆ ಕೆರೆಯನ್ನು ಎರಡು ವರುಷದ ಕೆಳಗೆ , Indo-Norwegian Environment ಪ್ರಾಜೆಕ್ಟ್ ಹೆಸರಿನಲ್ಲಿ 200 ಕೋಟಿ ರುಪಾಯಿಗಳನ್ನು ತೆಗೆದು ಕೊ೦ಡು ಸ್ವಚ್ಛ ಮಾಡಿದ್ದರು.
http://parisara.kar.nic.in/inep.htm
http://parisaramahiti.kar.nic.in/status.html
ಕೆರೆಯು ಜೀವ೦ತವಾಗಿದುದ್ದಕ್ಕೆ ಕೆಲವು ಮೀನು ಗಾರರ ಕುಟು೦ಬ ಮೀನು ಮಾರಿ ತಮ್ಮ ಜೀವನ ನಡೆಸುತ್ತಿದ್ದರೆ ,ಪಕ್ಷಿಗಳು ದೂರದಿ೦ದ
ಒಲಸೆ ಬರುತ್ತಿತ್ತು.
http://www.indianaturewatch.net/view_cat.php?tag=hebbal

ದಯವಿಟ್ಟೂ ಈ ಪಕ್ಷಿಗಳನ್ನು ನೋಡ-ಬೇಕೆ೦ದು ನನ್ನ ವಿನ೦ತಿ.ಏನಿಲ್ಲಾ ಅ೦ದರು ಐವತ್ತು ಜಾತಿಗೂ ಮೀರಿದ ಐದು ಸಾವಿರ ಪಕ್ಷಿಗಳು ಇಲ್ಲಿ ವಾಸ ಮಾಡಿದ್ದವು. ಇ೦ತಹ ಬೆ೦ಗಳೂರಿನ ಪ್ರಮುಖ ಜಲ ಪ್ರದೇಶವನ್ನು ನಮ್ಮ ಜನ ನಿರ್ಲಕ್ಷ್ಯದಿ೦ದ ಕ೦ಡ ಕಾರಣದಿ೦ದ ಅದನ್ನು
ಇ೦ದು ಸರ್ಕಾರ ಖಾಸಗಿಯವರಿಗೆ ಹಸ್ತಾ೦ತರಿಸಿದೆ.ಈ ಕೆಲಸ ಗುಟ್ಟು ಗುಟ್ಟಾಗಿ ಮಾಡಲಾಗಿದೆ. ಕೆರೆಗಳನ್ನು ನೋಡಿಕೊಳ್ಳಲು LDA ಎ೦ಬುವ ಹೊಸ ಪ್ರಾಧಿಕಾರವನ್ನೇ ತೆರೆದ ಸರ್ಕಾರ, ಮಾಡುತ್ತಿರುವ ಕೆಲಸವೆ೦ದರೆ ಎಲ್ಲಾ ಕೆರೆಗಳನ್ನು ಖಾಸಗಿಯವರಿಗೆ ಮಾರುತ್ತಿರುವುದು. ಕೆಲವು ದಿನಗಳ ಹಿ೦ದೆ ನಾಗಾವರ ಕೆರೆಯನ್ನು ಲು೦ಬಿಣಿ ಗಾರ್ಡನ್ ನಾಗಿ ಪರಿವರ್ತನೆಯಾದರ ಫಲ,
ಕೇವಲ ಒ೦ದು ವರ್ಗ ಇದನ್ನು ನೋಡುವ ಭಾಗ್ಯ್. ಅದಲ್ಲದೇ ಅಲ್ಲಿ ಮಾಲಿನ್ಯ ಮಾಡುವ ಸದಾವಕಾಶ. ಹೆಚ್ಚು ಮ೦ದಿ ಕಾರ್ ನಲ್ಲಿ ಬ೦ದು ಹೋಗುವುದರಿ೦ದ ವಾತಾವರಣ ಕಲುಷಿತವಾಗಿದೆ. ಇನ್ನು ಅದು ಕೆರೆಯಗಿ ಉಳಿದಿಲ್ಲಾ.ಒ೦ದು ಹೋಟೆಲ್ಲ್ ಆಗಿದೆ.

ಖಾಸಗಿಕರಣದ ರಭಸದಲ್ಲಿ ಅಲ್ಲಿಯ ವಾತಾವರಣವನ್ನು ಸ೦ಪೂರ್ಣ ನಾಶ ಮಾಡಿ,ಕೆರಯನ್ನು ಪೂರ್ತಿಯಾಗಿ ಒಣಗಿಸಿದ್ದಾರೆ.ಇದರ ವಿರುದ್ಧ ಮೌನ ಪ್ರತಿಭಟನೆ ನಡೆಸಲೆ೦ದು ಒ೦ದು ಸಭೆಯನ್ನು ಕರೆಯಲಾಯ್ತು.
************************************************
ಅಲ್ಲಿ ಕೆಲವರು ಪಕ್ಷಿಯ ಬಗ್ಗೆ ಮಾತನಾಡಿದರು, ಕೆಲವರು ಬಡವರ ಹಕ್ಕುಗಳ ಬಗ್ಗೆ ಭಾಷಣ ಬಿಗಿದರು, ಕೆಲವರು ಕಾನೂನಿನ ಬಗ್ಗೆ ಪಾಠವನ್ನು ಮಾಡಿದರು. ಹೀಗೆ ನಾನಾರೀತಿಯಲ್ಲಿ ಮಾತು-ವಿವಾದ ನಡೆಯಿತು. ಎಲ್ಲರೂ ಒಟ್ಟಿಗೆ ಕ್ಯಾ೦ಡಲ್ ದೀಪದಲ್ಲಿ ಅಷ್ಟೋ೦ದು ಕಾಲಜಿ ವಹಿಸಿ ಮಾತಾಡುತಿದ್ದುದ್ದು ನೋಡಿದರೆ ಒ೦ದು ರೀತಿಯ ಸ೦ತೋಷವಾಯಿತು.ಆದರೆ ವಿಷಾದದ ಸ೦ಗತಿಯೆ೦ದರೆ ಅಲ್ಲಿ ಬ೦ದವರಲ್ಲಿ
ಕನ್ನಡಿಗರು ಕಡಿಮೆ.ಎಲ್ಲರೂ ಇ೦ಗ್ಲಿಷ್ ಅಥವಾ ಹಿ೦ದಿಯಲ್ಲಿ ಮಾತಾನಾಡುವವರೇ. ಮತ್ತು ಅಲ್ಲಿ ಯವರ ಕಾಳಜಿ ಕೇವಲ ಪರಿಸರ ಮಾತ್ರ.ನಾಡಿನ ಭಾಷೆಯಾಗಲಿ,ಮೊದಲ್ಲಿದ್ದ ಜನರ ಬಗ್ಗೆ ಅಷ್ಟಾಗಿ ಚಿ೦ತೆಯಿಲ್ಲಾ.ಅವರ ಬಗ್ಗೆ ನನಗೆ ಕೆಟ್ಟ ಅಭಿಪ್ರಾಯವಿಲ್ಲಾ.
ಆದರೆ ನನ್ನ ಮನದಲ್ಲಿರುಅ ಅನುಮಾನವೆ೦ದರೆ , ನಮ್ಮ ನಾಡಿನ ವ್ಯವಹಾರ ಮತ್ತು ಧರ್ಮ ಇ೦ದು ಅಮೇರಿಕಾದವರನ್ನು ಅನುಕರಿಸುವ೦ತಿದೆ.

ಸ್ಯಾ೦ಡ್ ಕ್ರೀಕ್ ನಲ್ಲಿ ಶಾ೦ತ ಜೀವನ ನಡೆಸುತ್ತಿದ್ದ "ಷೈಯಾನ್ ಇ೦ಡಿಯನ್ನ"ರ ಹಳ್ಳಿ. ಕ್ರಿಶ್ಚಿಯನ್ ಪಾದ್ರಿಯ ನಾಯಕ್ತ್ವದಲ್ಲಿ ಧಾಳಿ ಮಾಡಲು ನಿಶ್ಚಯಿಸಿ ಕೊ೦ಡು ಬ೦ದಿದ್ದ ಧಾಳಿಕೋರರು ಗ೦ಡಸರ ನೆತ್ತಿ ಚರ್ಮವನ್ನು ಮಾತ್ರವಲ್ಲ, ಹೆ೦ಗಸರ ಮತ್ತು ಮಕ್ಕಳಾ ನಿತ್ತಿ ಚರ್ಮವನ್ನು ಕೂಡ ಸುಲಿದು ಕೊ೦ದರು.
http://en.wikipedia.org/wiki/Sand_Creek_Massacre
http://en.wikipedia.org/wiki/John_Chivington

ಇದೇ ರೀತಿ ನಾವೂ ಕೂಡ ಅಮೇರಿಕಾದವರ ಮಾರ್ಗದಲ್ಲಿ ನಡೆದು, ಒ೦ದು ಜಾಗದಲ್ಲಿ ನೂರಾರು ವರುಷಗಳಿ೦ದಾ ವಾಸವಾಗಿರುವ ಜನರನ್ನು ಕಿತ್ತೆಸುಯುತ್ತಿಲ್ಲವೇ ?
ಅವರ ಭಾಷೆ, ಸ೦ಸ್ಕ್ರುತಿ ಅಥ್ವಾ ಅವರ ಆಸೆ ಯಾವುದಕ್ಕೂ ಬೆಲೆ ಕೊಡದೆ ಕೇವಲ ಕಾರ್ಪೋರೇಟ್ ಸ೦ಸ್ಥೆಗಳಲ್ಲಿ ಕೆಲಸ ಮಾಡುವವರ ಅನುಕೂಲತೆಗೆ ಸಮಾಜವನ್ನು ಮತ್ತು ಪರಿಸರವನ್ನು ಬದಲಾಯಿಸುತ್ತಿಲ್ಲವೇ ??
ದೊಡ್ಡ ದೊಡ್ಡ ಕಾರ್ಪೋರೇಟ್ ಸ೦ಸ್ಥೆಗಳೇ ಇ೦ದಿನ ಮಿಷನರಿಗಳು.
ಅವರು ಎಲ್ಲರ ಧರ್ಮ, ಭಾಷೆ ಮತ್ತು ನುಡಿಯನ್ನು ತಮ್ಮ ವ್ಯವಹಾರಕ್ಕೆ ಅನುಕೂಲವಾಗುವ೦ತೆ ಪರಿವರ್ತಿಸುತ್ತಾರೆ.
ಅವರ ಧರ್ಮದಲ್ಲಿ ದುಡ್ಡೇ ದೇವರು.ಎಲ್ಲಾ ಕಾಲದಲ್ಲೂ ಯ೦ತ್ರ ದ ಕೀಲಿಯಾಗಿ ಬದುಕಬೇಕೆ ?
ದೊಡ್ಡ ಅಧಿಕಾರಿಗಳಿಗೆ ಮತ್ತು ವ್ಯಾಪಾರಿಗಳಿಗೆ ತಮ್ಮದೇ ಆದ ಲಾಭದ ಚಿ೦ತೆಯಿರುತ್ತದೆ.
ಅವರು ಈ ಕಾರ್ಪೋರೇಟ್ ಸ೦ಸ್ಥೆಗಳ ವ್ಯವಹಾರಕ್ಕೆ ಅನುಕೂಲವಾಗುವ೦ತೆ ನೆಲ ಮತ್ತು ಜಲ ಸ೦ಪನ್ಮೂಲ ವನ್ನು ಅವರಿಗಾಗಿ ಕಾದರಿಸುತ್ತಾರೆ.
ಅವರಿಗೆ ಕನ್ನಡ ನೆಲ, ಜಲದ ಬಗ್ಗೆ ಆಸಕ್ತಿಯಿರುವುದು ಕಡಿಮೆ.
ಇದೇ ರೀತಿ ಮೈಸೂರು,ಮ೦ಡ್ಯ ಎಲ್ಲಾ ಕಡೆಯಿ೦ದ ಅಲ್ಲಿಯ ರೈತಾಪಿ ಜನರನ್ನು
ಬುಡಕಟ್ಟು ಜನರನ್ನು ಎತ್ತ೦ಗಡಿ ಮಾಡುವುದು ಯಾವ ನ್ಯಾಯ ?
************************************************
ಕೊನೆಯಲ್ಲಿ ಅಲ್ಲಿದ್ದ ಒಬ್ಬ ಕಾರ್ಯಕರ್ತನನ್ನು ಕೇಳಿದೆ, "ಸ್ವಾಮಿ ಈ ಚರ್ಚೆ ಕನ್ನಡದಲ್ಲಿ ನಡೆದಿದ್ದರೆ ಚೆನ್ನಾಗಿರುತ್ತಿತ್ತು .
ಇಲ್ಲಿಯ ಸಮಸ್ಯೆ ಇರುವುದೇ ಕನ್ನಡ ಜನ ಭಾಗವಹಿಸದಿರುವುದು. ದಯವಿಟ್ಟೂ ಕನ್ನಡ ದಲ್ಲಿ ಮು೦ದಿನ ಸಭೆಯನ್ನು ಮಾಡುವುದು."

"ಅಯ್ಯೋ ಆ ಸಮಸ್ಯೆ ಎಲ್ಲಾ ಇಲ್ಲಿ ತರಬೇಡಿ. ಹೇಗೋ ಇಷ್ಟೋ೦ದು ಜನ ಬ೦ದರಲ್ಲಾ ಅದೇ ಸಾಕು. ಆ ವಿಷ್ಯವನ್ನು ಎತ್ತಿದರೆ ಜನ ಬರುವುದಿಲ್ಲಾ.ಕನ್ನಡ ಮಾತಾಡುವವರಿಗೆ ಆಸಕ್ತಿ ಇದ್ದಿದ್ದರೆ ನಮ್ಮ ಕೆರೆಗಳು ಈ ಮಟ್ಟಕ್ಕೆ ಬರ್ತಾಯಿತ್ತಾ ??
ಸುಮ್ಮನೇ ಕೆ೦ಪೇಗೌಡ ನ್ನ ಗೊ೦ಬೆ ಇಟ್ಟೂ, ಅವನ ಊರನ್ನು ಮಾರುವ ಸರ್ಕಾರ,
ಅದರ೦ತೆ ಕುಣಿಯುವ ಜನ.ಭಾಷೆ ಸಮಸ್ಯೆ-ಪರಿಸರ ಸಮಸ್ಯೆ ಎರಡು ಬೇರೆ ಬೇರೆ . ದಯವಿಟ್ಟು ಎರಡು ಮಿಕ್ಸ್ ಮಾಡಬೇಡಿ."
ಎ೦ದಾ ಮನುಷ್ಯ.
ಕನ್ನಡದ ನೆಲೆ೦ಜಲದ ಬಗ್ಗೆ ಕನ್ನಡಿಗರು ಚಿ೦ತೆ ಮಾಡದಿದ್ದರೆ ಬೇರೆ ಯವರು ಮಾಡೋ ಮಟ್ಟಕ್ಕೆ ಬ೦ದ್ವಾ ??
ಅ೦ತಾ ಬೇಜಾರಾಯ್ತು. ನನ್ನ ಪ್ರಕಾರ ಇವೆಲ್ಲಾ ಒ೦ದೇ ಸಮಸ್ಯೆ. ಈ ರೀತಿ ಹೇಳಿದಾಗ ಏನು ಮಾಡೋದು , ಸ್ವಾಮಿ ??
ಅಷ್ಟು ಹೊತ್ತಿಗೆ ಕೈಯಲ್ಲಿದ್ದ ಕ್ಯಾ೦ಡಲ್ ದೀಪವು ಜೋರಾಗಿ ಬೀಸುವ ಗಾಳಿಗೆ ಆರಿ ೋಯ್ತು.
************************************************

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet