ಕ್ರಿಕೆಟ್ ಗುಂಗು

ಕ್ರಿಕೆಟ್ ಗುಂಗು

ಬರಹ

  ನಗುವುದೋ ಅಳುವುದೋ ನೀವೇ ಹೇಳಿ
  ಇರುವುದೋ ಬಿಡುವುದೋ ಈ ಗುಂಗಿನಲಿ

  ಐಪಿಎಲ್ಲು ಆಯ್ತು, ಇನ್ನು ಐಸೀಸೀ ಕಪ್
  ಕ್ರಿಕೆಟ್ಟೆದುರು ಬೇರೆ ಕ್ರೀಡೆಯೆಡೆಗೆ ಗಮನ ಸ್ಟಾಪ್

  ಕ್ರಿಕೆಟ್ಟಾಡಿಸುವಗೆ-ಆಡುವವಗೆ ಕೋಟಿ ರೂ.
  ಆರ್ಚರಿಯಲಿ ಸ್ಪರ್ಧಿಸುವರು ಆಸ್ತಿ ಮಾರಿದ್ರು!

  ಉಂಡೂ ಹೋದ್ರು, ಕೊಂಡೂ ಹೋದ್ರು ಮೋದಿ ಮಹಿಮರು!
  ಭಂಡನಂತೆ ಮೆರೆದು ಮರೆಗೆ ಸರಿದ್ರು ತರೂರು

  ನಾವು-ನೀವು ಕೊಟ್ಟ ಹಣವು ಅಷ್ಟಿಷ್ಟೇನು?
  ಕಳೆದುಹೋದ ನಮ್ಮ ಸಮಯ ದೊರೆಯುವುದೇನು?

  ಆಯ್ತು ಬಿಡಿ, ಕ್ರಿಕೆಟ್ಟೇನೋ ಇಂಟ್ರೆಸ್ಟಿಂಗೇ.
  ಆದ್ರೆ ಒಂದು ಮಿತಿ ಇರಲಿ; ಬರಿ ಅದೇ ಗುಂಗೇ?

  ಬೇರೆ ಆಟ್ಗಳೆಡೆಗೂ ಒಸಿ ಗಮನವ ಹರಿಸಿ
  ಬೇರೆ ಆಟಗಾರರನ್ನೂ ಹೀಗೇ ಹರಸಿ.