ಕ್ರಿಯಾಶೀಲತೆಗೆ ಮಿಡಿದ ಪ್ರೇಮರೂಪ!

ಕ್ರಿಯಾಶೀಲತೆಗೆ ಮಿಡಿದ ಪ್ರೇಮರೂಪ!

ಪ್ರೇಮಾ ಹೊಸ ರೂಪ..!-ರೂಮರ್ ಗೆ ನಗುತ್ತಲೇ ರಿಯಾಕ್ಷನ್-ಚಾಲೆಂಜಿಂಗ್ ಪಾತ್ರ ನಿರೀಕ್ಷೆಯಲ್ಲಿ ಪ್ರೇಮಾ-ಓ ಗುಲಾಬಿ’ ಹಾಟ್ ಫೇವರಿಟ್ ಸಾಂಗ್-ಚಿತ್ರ ಥಿಯೇಟರ್​ ನಲ್ಲೂ ನೋಡ್ತಾಯಿರ್ತಾರೆ-‘ನಮ್ಮೂರ ಮಂದಾರ ಹೂವೇ’ ಚಿತ್ರೀಕರಣದ ನೆನಪು....
------
ಪ್ರೇಮಾ...ಒಂದು ಕಾಲದ ಸಿಂಪಲ್ ನಟಿ. ಅಭಿನಯದಿಂದಲೇ, 90 ರ ದಶಕದಲ್ಲಿ ಪ್ರೇಕ್ಷಕರ ಮನಸೂರೆಗೊಳಿಸಿದ ಪ್ರೇಮಾ,ಈಗ ಎಲ್ಲಿ ಹೋದರು. ಆ ಪ್ರಶ್ನೆಗೆ ಉತ್ತರ ಸಿಗೋ ಬದಲು, ಅನೇಕ ಊಹಾಪೂಹಗಳೇ ಎದಿದ್ದವು. ಪ್ರೇಮಾ ಅವರ ಕೃಶವಾದ ದೇಹ ಕಂಡ ಅನೇಕರು ಕಾಯಿಲೆಯೇ ಏನಾದರೂ ಇದೇಯೇ...? ಅನ್ನೋ ಅನುಮಾನವನ್ನೂ ವ್ಯಕ್ತಪಡಿಸಿದರು. ತೀರಾ ಇತ್ತೀಚಿಗೆ ಇನ್ನೂ ಕೆಲವ್ರು, ಪ್ರೇಮಾ ಹೋಗಿಯೇ ಬಿಟ್ಟರೂ ಅಂತ ಹೇಳಿದರು. ಆದರೆ, ಪ್ರೇಮಾ ಈಸ್ ಬ್ಯಾಕ್. ಗಾರ್ಜಿಯೆಸ್ ಲುಕ್ ನಿಂದಲೇ, ಕಂಗೊಳಿಸುತ್ತಿದ್ದಾರೆ...

ಪ್ರೇಮಾ ಲುಕ್ ಬದಲಾಗಿದೆ. ರೂಪದರ್ಶಿ ಕಂಡಾಕ್ಷಣ ಆಗೋ ಅನುಭವ ಪ್ರೇಮ ಅವರನ್ನ ಕಂಡಾಗ ಆಗುತ್ತಿದೆ. ಅದು ಯಾಕೆ ಅಂತ ಹೇಳೋಕೆ ಹೋದರೆ,ಅಲ್ಲಿ ಸರ್ಗಾ ಎಂಬ ಫ್ಯಾಷನ್ ಬ್ರಾಂಡಿಂಗ್ ಕಂಪನಿ ಎದುರಿಗೆ ಬರುತ್ತದೆ. ಆ ಕಂಪಿನಿಯ ಡಿಸೈನಿಗೇ ಪ್ರೇಮಾ ಈಗ ರೂಪದರ್ಶಿ.....

ಪ್ರೇಮಾ ಎಂದು ಈ ಥರ ಪೋಜ್ ಕೊಟ್ಟವರಲ್ಲ. ಸರಳವಾಗಿಯೇ ಡಿ ಗ್ಲಾಮರ್ ಆಗಿಯೇ ಪ್ರೇಕ್ಷಕರ ಮನಕದ್ದವು.ಆದರೆ, ಮೊದಲ ಭಾರಿಗೆ ಈ ಥರ ಹೊಸದನ್ನ ಸ್ವೀಕರಿಸೋಕೆ ಕಾರಣ ಡಿಸೈನರ್ ಗಿರೀಶ್ ಕ್ರಿಯೇಟಿವಿಟಿ.ಆ ಕ್ರಿಯೇಟಿವಿಟಿ ಅಲ್ಲದೇ, ಆಫ್ ಸ್ಕ್ರಿನ್​ ನಲ್ಲೂ ಪ್ರೇಮಾ ಕಣ್ತುಂಬಿಕೊಳ್ಳೋ ರೀತಿಯಲ್ಲಿಯೇ ಚೆಲುವಾಗಿದ್ದಾರೆ...ಗೆಲುವಾಗಿದ್ದಾರೆ.

ಆದರೆ, ಪ್ರೇಮಾ ಅವರನ್ನ ಈ ಹೊಸ ರೂಪದಲ್ಲಿ ಕಾಣೋಕೂ ಮೊದಲು, ಪ್ರೇಮಾ ಬಗ್ಗೆ ಸಾಕಷ್ಟು ಊಹಾಪೂಗಳೇ ಹೆಚ್ಚಿದ್ದವು.. ಸದ್ಯಕ್ಕೆ ಪ್ರೇಮಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರ ದೇಹ ಸ್ಥಿತಿ ಕ್ಷಿಣಿಸುತ್ತಿದೆ. ಬದುಕುವುದು ಕಷ್ಟ ಎಂಬ ಮಾತು ಆಗಾಗ..ಕೇಳಿ ಬರುತ್ತಲೇ ಇದ್ದವು..ಆ ಗಾಳಿ ಮಾತಿನ ತೆಲೆ ಮೇಲೆ ಹೊಡೆದಂತಿರೋ ಲುಕ್ ನಲ್ಲಿಯೇ ಪ್ರೇಮಾ ಕಾಣಿಸಿಕೊಳ್ತಿದ್ದಾರೆ. ತಮ್ಮ ಬಗೆಗಿನ ಕಾಯಿಲೆ ಕತೆಯ ರೂಮರ್ ಕೇಳಿ ಬಿದ್ದು..ಬಿದ್ದು ನಕ್ಕಿದ್ದು ಇದೆ. ವಿದೇಶದಲ್ಲಿರೋವಾಗ, ರೂಮರ್ ಸುದ್ದಿಗಳು ಪ್ರೇಮಾ ಕಿವಿ ಮೇಲೂ ಬಿದಿದ್ದವು....

ಪ್ರೇಮಾ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು 90 ರ ದಶಕದಲ್ಲಿ, ಓಂ ಸಿನಮಾ ಬರೋಕೂ ಮೊದ್ಲು, ಎಂ.ಎಸ್.ರಾಜಶೇಖರ್ ನಿರ್ದೇಶನದಲ್ಲಿ, ಸವ್ಯಸಾಚಿ ಸಿನಿಮಾ ಮಾಡಿದ್ದರು. ಶಿವಣ್ಣ ಹೀರೋ ಆಗಿಯೇ ಕಾಣಿಸಿಕೊಂಡಿದ್ದರು. ಆದರೆ, ಈ ಜೋಡಿಯ ‘ಓಂ’ ಚಿತ್ರದಲ್ಲಿ ಮಾಡಿದ ಮೋಡಿ, ಈಗಲೂ ಇದೆ.ಅದನ್ನೂ ನೆನೆಯೋ ಪ್ರೇಮಾ, ಓ ಗುಲಾಬಿ ಹಾಡನ್ನ ತುಂಬಾ ಇಷ್ಟಪಡ್ತಾರೆ....

ಓಂ ಚಿತ್ರವನ್ನ ಪ್ರೇಮಾ ಆಗಾಗ ಚಿಕ್ಕ ಥಿಯೇಟರ್​ಗೂ ಹೋಗಿ ನೋಡ್ತಾನೇ ಇರ್ತಾರೆ. ಈಗ ಇದೇ ಓಂ ಸಿನಿಮಾ ಡಿಜಿಟಲ್ ರೂಪಪಡೆದು ಮತ್ತೆ ರಿಲೀಸ್ ಕೂಡ ಆಗಲಿದೆ. ಆ ವಿಚಾರವನ್ನೂ ತಿಳಿದಿರೋ ಪ್ರೇಮಾ, ಓಂ ಚಿತ್ರದಲ್ಲಿ ಪ್ರೇಮಾ ಅವರಿಗೆ ಬಣ್ಣ ಹಚ್ಚೋ ಮತ್ತು ತಲೆ ಮೇಲೆ ಮೊಟ್ಟೆ ಒಡೆಯೋ ದೃಶ್ಯವನ್ನ ಮಾಡೋವಾಗ ತುಂಬಾ ಇರಿಟೇಟ್ ಆಗಿತ್ತಂತೆ..ಯಾಕಾದರೂ ಒಪ್ಪಿಕೊಂಡೇ ಈ ಚಿತ್ರ ಅಂತಲೂ ಅನಿಸಿತಂತ್ತೆ. ನಿರ್ದೇಶಕ ಉಪೇಂದ್ರ ಮೇಲೇ ಅಷ್ಟೇ ಕೋಪವೂ ಬಂದಿತಂತೆ...

ಪ್ರೇಮಾ ತಮ್ಮ ಅಷ್ಟೂ ಚಿತ್ರದ ಹಾಡುಗಳನ್ನ ಇಷ್ಟಪಡ್ತಾರೆ. ಚಂದ್ರಮುಖಿ ಪ್ರಾಣ ಸಖಿ, ಯಜಮಾನ, ಕನಸುಗಾರ ಆ ಸಾಲಿನಲ್ಲಿರೋ ಸಿನಿಮಾಗಳು. ಸುನೀಲ್ ಕುಮಾರ್ ದೇಸಾಯಿ ನಿರ್ದೇಶನದ ‘ನಮ್ಮೂರ ಮಂದಾರ ಹೂವೇ’ ಪ್ರೇಮಾ ಅವರ ಆಲ್ ಟೈಮ್ ಫೇವರಿಟ್ ಸಿನಿಮಾ. ಚಾಲೆಂಜಿಂಗ್ ಕೆಲಸ ಕೊಟ್ಟ ಚಿತ್ರವೂ ಹೌದು. ಶಿರಸಿ ಭಾಷೆಯ ಕಲಿಯೋಕೆ ಬೇಜಾನ್ ಕಷ್ಟಪಟ್ಟದ್ದೂ ಇದೆ ಪ್ರೇಮಾ...

ಪ್ರೇಮಾ ಮತ್ತೆ ಬಣ್ಣ ಹಚ್ತಾರಾ..ಎಂಬ ಪ್ರಶ್ನೆಗೆ ಪ್ರೇಮಾ ಅವರಿಂದ ಸಿಗೋ ಮೊದಲ ಉತ್ತರ ಒಂದೇ. ಅದು ಕ್ರಿಯೇಟಿವಿ ಇರಬೇಕು ಎಂಬ ಮಾತು. ವಿನೂತನವಾದ ಸ್ಕ್ರಿಪ್ಟ್ ಬಂದರೇ, ಕಂಡಿತ ಸಿನಿಮಾ ಮಾಡ್ತಿನಿ ಅನ್ನೋ ಪ್ರೇಮಾ, ಇಲ್ಲಿವರೆಗೂ ಚಾಲೆಂಜಿಗ್ ಪಾತ್ರಗಳನ್ನೇ ಮಾಡುತ್ತ ಬಂದಿದ್ದೇನೆ. ಈಗ ಅಂಟಿ ಪಾತ್ರವೋ..ಅಮ್ಮನ ಪಾತ್ರವೋ ಮಾಡೋಕೆ ಇಷ್ಟಪಡೋದೇಯಿಲ್ಲ ಅಂತಾರೆ...ಪ್ರೇಮಾ ಬಣ್ಣದ ಲೋಕದಿಂದ ದೂರ ಉಳಿದಿಲ್ಲ. ಇಲ್ಲಿಯೇ ಇದ್ದಾರೆ. ಹೊಸ..ಹೊಸ ವಿಚಾರ...ಹೊಸ..ಹೊಸ ಕಥೆಯ ನಿರೀಕ್ಷೆಯಲ್ಲಿದ್ದಾರೆ. ಪ್ರೇಮಾ ಅವರ ಈ ಕನಸು ನನಸಾಗಲಿ...

ರೇವನ್ ಪಿ.ಜೇವೂರ್

Comments